ರಸ್ತೆಯಲ್ಲಿ ತಮ್ಮ ಪಾಡಿಗೆ ನಡೆದುಕೊಂಡು ಹೋಗುವವರನ್ನು ಬೇಡಬೇಡವೆಂದರೂ ವಿನಾ ಕಾರಣ ಧೂಳು ಮೆತ್ತಿಕೊಂಡು ತೊಂದರೆ ಉಂಟುಮಾಡುತ್ತದೆ. ಇದರಿಂದ ಶುಭ ಕಾರ್ಯಗಳಿಗಷ್ಟೇ ಅಲ್ಲ, ಕಚೇರಿ ಕೆಲಸಗಳಿಗೆ ಹೊರಟವರೂ ತೊಂದರೆ ಅನುಭವಿಸಬೇಕು. ಕೆಲವು ದಿನಗಳಿಂದ ಬಿ.ಸಿ.ರೋಡ್ ಪರಿಸರದಲ್ಲಿ ಧೂಳು ತುಂಬಿಕೊಂಡಿದ್ದರೆ, ಕಳೆದ ಎರಡು ದಿನಗಳಿಂದ ಮಳೆ ದಿನಕ್ಕೊಂದು ಬಾರಿ ಸುರಿಯುತ್ತಿದೆ. ಹೀಗಾಗಿ ಕೆಲ ಹೊತ್ತಿಗಾದರೂ ಧೂಳು ತೊಳೆದು ಹೋಗುತ್ತದೆ.
ಸೋಮವಾರವೂ ಹಾಗೇ ಆಯಿತು.
ಸಂಜೆ ಬಿ.ಸಿ.ರೋಡಿನಲ್ಲಿ ಸಾಧಾರಣ ಮಳೆ ಗುಡುಗು ಮಿಂಚಿನೊಂದಿಗೆ ಸುರಿಯಿತು. ಈ ಸಂದರ್ಭ ಧೂಳಿನಿಂದ ಕಂಗೆಟ್ಟಿದ್ದ ಪರಿಸರದ ಜನರಿಗೆ ಕೊಂಚ ಸಮಾಧಾನ ತಂದರೆ, ರಸ್ತೆಯಲ್ಲಿರುವ ಗುಂಡಿಗಳಲ್ಲಿ ನೀರು ತುಂಬಿ ಪಾದಚಾರಿಗಳು ಪರದಾಡುವಂತಾಯಿತು.
ಬಂಟ್ವಾಳನ್ಯೂಸ್ ಗೆ ಚಿತ್ರಗಳನ್ನು ಸ್ಥಳದಲ್ಲೇ ಕ್ಲಿಕ್ಕಿಸಿ ಕಳುಹಿಸಿದವರು ಸತ್ತಾರ್ ನಂದರಬೆಟ್ಟು.