ಬಿ.ಸಿ.ರೋಡ್ ನ ಫ್ಲೈಓವರ್ ಅಡಿ ತರಕಾರಿ ಮಾರುವುದರಿಂದ ಸಂಚಾರ ಸಮಸ್ಯೆಗೆ ತೊಂದರೆ ಆಗುತ್ತಿದೆ ಎಂದು ಟ್ರಾಫಿಕ್ ಎಸ್.ಐ. ಮಂಜುಳಾ ಶಾಸಕರ ಗಮನ ಸೆಳೆದಿದ್ದಾರೆ.
ಬಿ.ಸಿ.ರೋಡ್ ಫ್ಲೈ ಓವರ್ ಅಡಿ ಮಾತ್ರವಲ್ಲ, ರಕ್ತೇಶ್ವರಿ ಎದುರು ಹೀಗೆ ಆಯಕಟ್ಟಿನ ಜಾಗಗಳಲ್ಲಿ ತರಕಾರಿ ಮಾರಾಟ ಮಾಡುವ ಹಿನ್ನೆಲೆಯಲ್ಲಿ ದಿಢೀರನೆ ಅಲ್ಲೇ ವಾಹನ ನಿಲ್ಲಿಸುವುದರಿಂದ ಉಳಿದವಾಹನ ಸವಾರರಿಗೆ ತೊಂದರೆ ಉಂಟಾಗುತ್ತದೆ, ಪಾದಚಾರಿಗಳಿಗೂ ಸಮಸ್ಯೆ ಆಗುವ ಕುರಿತು ಗಮನ ಸೆಳೆದ ಟ್ರಾಫಿಕ್ ಎಸ್.ಐ, ಈ ಕುರಿತು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಪುರಸಭೆಯಲ್ಲಿ ನಡೆದ ಶಾಸಕ ರಾಜೇಶ್ ನಾಯ್ಕ್ ನೇತೃತ್ವದ ಕುಂದು ಕೊರತೆ ಸಭೆಯಲ್ಲಿ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಶಾಸಕರು, ಈಗಾಗಲೇ ಈ ಕುರಿತು ವರದಿ ಬಂದದ್ದನ್ನು ಗಮನಿಸಿದ್ದು, ಬೀದಿ ಬದಿ ವ್ಯಾಪಾರಸ್ಥರಿಗೊಂದು ಸೂಕ್ತ ವ್ಯವಸ್ಥೆ ಕಲ್ಪಿಸುವುದಲ್ಲದೆ, ಫ್ಲೈ ಓವರ್ ಅಡಿ ಸಹಿತ ಬಿ.ಸಿ.ರೋಡ್ ಟ್ರಾಫಿಕ್ ಸಮಸ್ಯೆಯನ್ನು ಸರಿಪಡಿಸುವ ಕುರಿತು ಕಾರ್ಯಯೋಜನೆ ರೂಪಿಸಲು ಸೂಚಿಸಿದರು.