ಟ್ವಿಟರ್ ಟ್ರೆಂಡ್‌ಗಳ ಮೂಲಕ ಮುಂಬೈ ಪೊಲೀಸರಷ್ಟು ಚೆನ್ನಾಗಿ ವೈರಲ್ ಆಗುವವರು ಬೇರೆ ಯಾರೂ ಇಲ್ಲ. ಮುಂಬೈ ಪೊಲೀಸ್ ಟ್ವಿಟರ್ ಖಾತೆ ಈಗಾಗಲೇ ಸಾಮಯಿಕ ಉಲ್ಲೇಖಗಳು, ಸ್ಟಿಲ್‌ಗಳು ಹಾಗೂ ವೈರಲ್ ಜೋಕ್‌ಗಳನ್ನು ಚೆನ್ನಾಗಿ ಬಳಸಿಕೊಂಡು ಪ್ರಸಿದ್ಧವಾಗಿದೆ.
ಈ ಬಾರಿ ಮತ್ತೆ ಮುಂಬೈ ಪೊಲೀಸ್ ಟ್ವೀಟ್ ಖಾತೆ ಸುದ್ದಿಯಾಗಿದೆ. ಇತ್ತೀಚೆಗಷ್ಟೇ ಟ್ರೈಲರ್ ಮೂಲಕ ಸುದ್ದಿ ಮಾಡಿರುವ ಬಹುನಿರೀಕ್ಷಿತ ಬಾಲಿವುಡ್ ಚಿತ್ರ ಥಗ್ಸ್ ಆಫ್ ಹಿಂದುಸ್ತಾನ್‌ನ ಸ್ಟಿಲ್ ಅನ್ನು ಉಪಯೋಗಿಸಿಕೊಂಡು ಪೊಲೀಸರು ಸಂದೇಶವೊಂದನ್ನು ಹರಿಬಿಟ್ಟಿದ್ದಾರೆ. ಅಮೀರ್ ಖಾನ್ ಚಿತ್ರದೊಂದಿಗೆ “ನೋ ಸಿಟಿ ಫಾರ್ ಥಗ್ಸ್ (ಕೊಲೆಗಡುಕರಿಗಿದು ನಗರವಲ್ಲ) “ ಎಂದ ಕ್ಯಾಪ್ಶನ್ ನೀಡಿದ್ದಾರೆ ಪೊಲೀಸರು.
ಈ ಟ್ವೀಟ್ ಕೇವಲ ನಾಲ್ಕು ಗಂಟೆಗಳಲ್ಲಿ 1,800ಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಅಷ್ಟೇ ಅಲ್ಲ, ಪೊಲೀಸರ ಕ್ರಿಯಾಶೀಲತೆಗೆ ಟ್ವೀಟಿಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.
ಇದೇ ವೇಳೆ ಅಸ್ಸಾಂ ಪೊಲೀಸರು ಕೂಡಾ ಇದೇ ಸ್ಟಿಲ್ ಉಪಯೋಗಿಸಿಕೊಂಡು ಆನ್‌ಲೈನ್ ಬ್ಯಾಂಕಿಂಗ್ ಹಗರಣ ಕುರಿತು ಎಚ್ಚರಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…