ಸರಕಾರದ ಯೋಜನೆಗಳು ಮತ್ತು ಯೋಚನೆಗಳು ಯಶಸ್ವಿಗೊಳಿಸಲು ಗ್ರಾಮೀಣ ಮಹಿಳೆಯರು ಜಾಗೃತರಾಗಿ ಸ್ವಾವಲಂಬಿಗಳಾಗುವುದು ಅಗತ್ಯ ಎಂದು ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಹೇಳಿದರು.
ತಾಲೂಕು ಪಂಚಾಯತ್, ಬಂಟ್ವಾಳ, ಇರಾ ಗ್ರಾಮ ಪಂಚಾಯತ್ ಮತ್ತು ಮಹಿಳಾ ಹಾಗೂ ಮಕ್ಕಳ ಅಭಿವೃದ್ದಿ ಇಲಾಖೆ ವಿಟ್ಲ ವಲಯ ಇದರ ಜಂಟಿ ಆಶ್ರಯದಲ್ಲಿ ಮಹಿಳಾ ಗ್ರಾಮ ಸಭೆ ರಾಷ್ಟ್ರೀಯ ಪೌಷ್ಟಿಕ ಆಹಾರ ಮಾಸಾಚರಣೆ ಹಾಗೂ ಸಂಜೀವಿನಿ ಪಂಚಾಯತ್ ಒಕ್ಕೂಟರಚನಾ ಕಾರ್ಯಕ್ರಮವು ಇಂದು ಮಳಯಾಳಿ ಬಿಲ್ಲವ ಸಂಘ (ರಿ)ಇರಾ ದಲ್ಲಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ಕೇರ, ಗ್ರಾಮೀಣಾ ಪ್ರಧೇಶಗಳ ಮಹಿಳೆಯರು ಸ್ವಾವಲಂಬಿಗಳಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಂಡಾಗ ಸರಕಾರದ ಯೋಜನೆಗಳು ಹಾಗೂ ಯೋಚನೆಗಳು ಯಶಸ್ವಿಗೊಳ್ಳುವುದರಲ್ಲಿ ಸಂಶಯವಿಲ್ಲ. ಆದುದರಿಂದ ಮುಂದಿನ ದಿನಗಳಲ್ಲಿ ಮಹಿಳೆಯರು ಜಾಗೃತರಾಗುವಂತೆ ಕರೆ ನೀಡಿದರು.
ಮುಖ್ಯ ಆತಿಥಿಗಳಾಗಿ ಪಾಲ್ಗೊಂಡ ಕುರ್ನಾಡು ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತ ಡಿ ಎಸ್ ಗಟ್ಟಿ, ಜಗತ್ತಿನಲ್ಲಿ ಪ್ರಮುಖ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಮಹಿಳಾ ನಾಯಕಿಯರ ಆದರ್ಶಗುಣಗಳನ್ನು ಮೈಗೂಡಿಸಿಕೊಂಡು ಸರಕಾರದ ಯೋಜನೆಗಳ ಚಿಂತನೆಗಳೊಂದಿಗೆ ಗ್ರಾಮೀಣ ಮಹಿಳೆಯರು ಸಶಕ್ತರಾಗುವಂತೆ ಕರೆ ನೀಡಿದರು.
ಸಂಜೀವಿ ಪಂಚಾಯತ್ ಒಕ್ಕೂಟ ರಚನೆ ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕ ಮಾತನಾಡಿದ ತಾಲೂಕು ಪಂಚಾಯತ್ ನ ಸಹಾಯಕ ನಿರ್ದೇಶಕರಾದ ಪ್ರಶಾಂತ್ ಬಳಂಜ ಮಾತನಾಡಿ, ಸರಕಾರದ ಪ್ರತಿಯೊಂದು ಯೋಜನೆಗಳು ಗ್ರಾಮ ಪಂಚಾಯತ್ ಮಟ್ಟದಲ್ಲಿ ಅನುಷ್ಠಾನಗೊಳ್ಳುತ್ತಿದ್ದು,ಇಂದಿನ ದಿನಗಳಲ್ಲಿ ಸಂಜೀವಿನಿ ಪಂಚಾಯತ್ ಒಕ್ಕೂಟಗಳ ಮೂಲಕ ಮಹಿಳೆಯರು ಗ್ರಾಮಾಭಿವೃದ್ದಿಯಲ್ಲಿ ತೊಡಗಿಸಿಕೊಳ್ಳವಂತೆ ಕರೆ ನೀಡಿದರು.
ಇದೇ ಸಂರ್ಭದಲ್ಲಿ :ಸ್ಚಚ್ತತಾ ಹೀ ಸೇವಾ ಕಾರ್ಯಕ್ರಮದ ಅಂಗವಾಗಿ ಕಾಲ್ನಡಿಗೆ ಜಾಥವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಗುಣವತಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಎಂ ಬಿ ಉಮ್ಮರ್ ಗೋಪಾಲ ಅಶ್ವತ್ತಡಿ ದೇವದಾಸ ಅಡಪ ಮೊಹಿದಿನ್ ಕುಂಞ, ಪಾರ್ವತಿ ,ತುಳಸಿ, ಸಾಂತ್ವನ ಕೇಂದ್ರ ಸಮಾಜ ಸೇವಕ ಪ್ರಶಾಂತ್ ಚೌಕದಪಾಲು ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಳಿನಿ ಎ ಕೆ ಸ್ವಾಗತಿಸಿ ಪಂಚಾಯತ್ ಗುಮಾಸ್ತೆ ಗುಲಾಬಿಯವರು ವಂದಿಸಿದರು.