ಬ್ರಹ್ಮರಕೂಟ್ಲು-ತಲಪಾಡಿ ಮೇಲ್ಸೇತುವೆ ಬಳಿ ಶನಿವಾರ ರಾತ್ರಿ ಬ್ರಹ್ಮರಕೂಟ್ಲು ಸಮೀಪದ ಮಾಡಂಗೆ ನಿವಾಸಿ ಹರೀಶ್ (35) ನೇತ್ರಾವತಿ ನದಿಗೆ ಹಾರಿ ಮೃತಪಟ್ಟಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ತಲಪಾಡಿ ಮೇಲೆ ಹಾಗೂ ಕೆಳ ಸೇತುವೆಯಲ್ಲಿ ಭಾರೀ ಸಂಖ್ಯೆಯ ವಾಹನ ಸವಾರರು ಹಾಗೂ ಕೂತೂಹಲಿಗರು ಜಮಾಯಿಸಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರದಲ್ಲಿ ತೊಡಕುಉಂಟಾಯಿತು. ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ತಲಪಾಡಿಯ ಈಜುಗರರಾದ ಮುಸ್ತಫಾ, ಸಲೀಂ, ಶಾಹುಲ್ ಹಮೀದ್, ಬಶೀರ್, ಎಂ.ಕೆ.ಹಾರಿಸ್, ಆರಿಫ್, ತಾಜುದ್ದೀನ್, ಅನ್ವರ್ ಕೆ.ಎಚ್ ಅವರು ನೇತ್ರಾವತಿ ನದಿಯಲ್ಲಿ ಶೋಧ ನಡೆಸಿ, ಮೃತದೇಹವನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)