ನಿಮ್ಮ ಧ್ವನಿ

ಬಸ್ ಚಾಲಕನ ಎಡವಟ್ಟು: ಜೀವನಕ್ಕೆ ಬಿತ್ತು ದೊಡ್ಡ ಪೆಟ್ಟು

ದ.ಕ.ಜಿಲ್ಲೆಯ ಪುನರೂರಿನ ಶಿವಪ್ರಕಾಶ್ ರಾವ್, ಬೆಂಗಳೂರಿನ ಪುಟ್ಟ ಸಂಬಳದಲ್ಲಿ ಮಾರ್ಕೆಟಿಂಗ್ ಫೀಲ್ಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹುಟ್ಟಿನಿಂದಲೇ ಕಷ್ಟಸಹಿಷ್ಣುಗಳಾದ ಇವರಿಗೆ ಇತ್ತೀಚೆಗಷ್ಟೇ ದೊಡ್ಡ ಕಂಪನಿಯೊಂದರ ಕೆಲಸದ ಅವಕಾಶ ಲಭಿಸಿತ್ತು. ಎಲ್ಲವನ್ನೂ ಬಸ್ ಮಣ್ಣುಪಾಲು ಮಾಡಿತು. ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ಬಿಎಂಟಿಸಿ  ಬಸ್ ಹತ್ತುವ ಸಂದರ್ಭ, ಆಟೊಮೆಟಿಕ್ ಬಾಗಿಲಿಗೆ ಇವರ ಕಾಲೊಂದು ಸಿಕ್ಕಿಹಾಕಿಕೊಂಡಿತು. ಅದೇ ವೇಳೆ ಇನ್ನೊಂದು ಕಾಲು ಬಸ್ಸಿನ ಟೈಯರಿಗೆ ತಾಗಿ ಕಾಲಿನ ಜೋಡಣೆ ಜಾರಿತು. ಕೂಡಲೇ ಸಾರ್ವಜನಿಕರ ಸಹಾಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ಚಾಲಕ ತಾನು ಬಸ್ ಹತ್ತುವುದನ್ನು ಗಮನಿಸದ ಕಾರಣ ಹೀಗಾಯಿತು ಎನ್ನುವ ಶಿವಪ್ರಕಾಶ್, ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚಿಕಿತ್ಸೆಗೆ ಸುಮಾರು 2 ಲಕ್ಷ ರೂಪಾಯಿ ಖರ್ಚು ಹಾಗು 6-7 ತಿಂಗಳಿಗೂ ಅಧಿಕ ಸಂಪೂರ್ಣ ಬೆಡ್ ರೆಸ್ಟ್ ನ ಅಗತ್ಯವಿದೆ. ಮನೆಗೆ ಆಧಾರಸ್ತಂಭವಾದ ಇವರ ಈ ಪರಿಸ್ಥಿತಿಯಿಂದ ಸಮಸ್ಯೆ ಉಂಟಾಗಿದ್ದು, ಸಾರ್ವಜನಿಕರ ನೆರವು ಕೋರುತ್ತಿದ್ದಾರೆ.

ಜಾಹೀರಾತು

ಇವರ ಬ್ಯಾಂಕ್ ಖಾತೆ ಡೀಟೇಲ್ ಹೀಗಿದೆ:

Shivaprakash Rao C S

Ac No : 113201011000861

Vijaya Bank Founders br.Mangalore

ifsc Code : Vijb 0001132

Patym ಮೂಲಕ ಸಹಾಯ ಮಾಡುವವರು : 9483198529 ಗೆ ಹಣ ಕಳುಹಿಸಬಹುದು

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts