ಮಂಗಳೂರಿನ ರೇಡಿಯೋ ಸಾರಂಗ್ ಸಂಸ್ಥೆ ವತಿಯಿಂದ ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರನ್ನು ಬುಧವಾರ ಸಂಜೆ ಏರ್ಯ ಬೀಡು ಮನೆಯಲ್ಲಿ ಸನ್ಮಾನಿಸಲಾಯಿತು.
ಹೃದಯರಾಗ ಕಾರ್ಯಕ್ರಮದಡಿ ಆಳ್ವರ ಸಾಹಿತ್ಯ- ಸಾಮಾಜಿಕ ಬದುಕಿನ ಬಗ್ಗೆ ನೇರಪ್ರಸಾರ ಮಾತುಕತೆ ನಡೆಸಿದ ಸಾರಂಗ್ ಸಂಸ್ಥೆಯವರು ಬಳಿಕ ಏರ್ಯರನ್ನು ಸನ್ಮಾನಿಸಿದರು.
ಜನರು ನನ್ನ ಮೇಲೆ ಇಟ್ಡಿರುವ ಪ್ರೀತಿಯೇ ನನಗೆ ಜೀವನೋಲ್ಸಾಸ ನೀಡುತ್ತಿದೆ. ಪರಸ್ಪರ ಪ್ರೀತಿಯ ಬೆಸುಗೆಯ ಸಮಾಜ ಕಟ್ಟುವುದು ಇಂದಿನ ಅಗತ್ಯವಾಗಿದೆ ಎಂದು ಆಳ್ವ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಮಾತನಾಡಿ ಏರ್ಯರ ನಡೆ, ನುಡಿ ಮತ್ತು ಬದುಕು ನಮಗೆಲ್ಲಾ ಮಾದರಿಯಾದುದು. ಅವರು ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನುಪಮವಾದುದು ಎಂದರು.
ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸರಸ್ವತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಎ.ಗೋಪಾಲ ಅಂಚನ್, ಸಾರಂಗ್ ಸಂಸ್ಥೆಯ ಎಡ್ವರ್ಡ್ ಲೋಬೋ, ಸಿಂಚನ ಶ್ಯಾಮ್, ಪುಷ್ಪರಾಜ್ ರಾವ್, ಅಭಿಷೇಕ್ ಶೆಟ್ಟಿ, ಮಯೋಲ ಮಾರ್ಟಿಸ್ ಮೊದಲಾದವರಿದ್ದರು.