ವಿಜಯಾ ಬ್ಯಾಂಕುಗಳನ್ನು ಸೇರಿಕೊಂಡು ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನ ಪ್ರಸ್ತಾಪಕ್ಕೆ ಅಖಿಲ ಭಾರತ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಶನ್ ಮಾಜಿ ಪ್ರಧಾನ ಕಾರ್ಯದರ್ಶಿ , ವಿಜಯಾ ಬ್ಯಾಂಕ್ ನ ಮಾಜಿ ಮ್ಯಾನೇಜರ್ ಆಗಿರುವ ಬೇಬಿ ಕುಂದರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಬ್ಯಾಂಕುಗಳ ವಿಲೀನ ಪ್ರಕ್ರಿಯೆಯಿಂದಾಗಿ ಅರೆಪಟ್ಟಣ, ಗ್ರಾಮೀಣ ಪ್ರದೇಶದಲ್ಲಿರುವ ಗ್ರಾಹಕರು, ಬಡವರಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಸೇವೆ ದುಸ್ತರವಾಗಲಿದೆ ಎಂಬ ಭೀತಿ ವ್ಯಕ್ತಪಡಿಸಿದ್ದಾರೆ. ವಿಜಯಾ ಬ್ಯಾಂಕ್ ಸಹಿತ ಹಲವು ಬ್ಯಾಂಕುಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿಸಲ್ಪಟ್ಟಿದ್ದು, ಬಡವರ, ಹಿಂದುಳಿದವರ ಸಮಾಜದ ಕೆಳಸ್ತರದಲ್ಲಿರುವವರ ಅತ್ಯಗತ್ಯ ಆರ್ಥಿಕ ನೆರವುಗಳಿಗೆ ಉಪಯೋಗಿಯಾಗಿದ್ದು, ವಿಲೀನದ ಬಳಿಕ ದೂರ ಹೋಗಲಿದೆಯೋ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.