ಕಲ್ಲಡ್ಕ

18 ವಯೋಮಾನದ ಬಾಲಕರ ಕಬಡ್ಡಿ: ಪೆರ್ನೆ ತಂಡಕ್ಕೆ ಪ್ರಶಸ್ತಿ

ಸಕ್ಸಸ್-ಶೈನಿಂಗ್ ಪ್ರೆಂಡ್ಸ್ ನೇರಳಕಟ್ಟೆ ಇದರ ಆಶ್ರಯದಲ್ಲಿ ಇಲ್ಲಿನ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ 18 ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಅಯೋಧ್ಯಾನಗರ ಪೆರ್ನೆ ತಂಡವು ಪ್ರಥಮ ಸ್ಥಾನ ಹಾಗು ಬಿ.ಸಿ.ಟೈಗರ್ಸ್ ನೇರಳಕಟ್ಟೆ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

ಜಾಹೀರಾತು

ಪೆರ್ನೆ ತಂಡದ ಝಾಹಿದ್ ಆಲ್ ರೌಂಡರ್, ಪ್ರವೀಣ ಉತ್ತಮ ಹಿಡಿತಗಾರ, ಹಾಗೂ ನೇರಳಕಟ್ಟೆ ತಂಡದ ನೌಶಾದ್ ಉತ್ತಮ ದಾಳಿಗಾರ ಪ್ರಶಸ್ತಿಗಳನ್ನು ಪಡೆದುಕೊಂಡರು.

ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ಪಂದ್ಯಾಟವನ್ನು ಉದ್ಘಾಟಿಸಿದರು. ನೇರಳಕಟ್ಟೆ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರೋಹಿತಾಶ್ವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಗಿರೀಶ್ ದಾಸಕೋಡಿ, ಸಮದ್ ಪರ್ಲೊಟ್ಟು, ಕಬಡ್ಡಿ ತೀರ್ಪುಗಾರ ಖಿಲ್ರ್ ಅಬ್ಬಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಘದ ಪದಾಧಿಕಾರಿಗಳಾದ ಶಫೀಕ್, ಶಾಹಿರ್, ರಿಫಾತ್, ನಿಝಾಂ, ಸುಹೈಲ್, ಸುಹಾನ್, ಸಲೀಂ, ಶರೀಫ್, ಫಾಝಿಲ್ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಬಿ.ವಿ.ಕಾರಂತ ಹುಟ್ಟಿದ ತಾಲೂಕಲ್ಲಿ ಸುಸಜ್ಜಿತ ರಂಗಮಂದಿರವೇ ಇಲ್ಲ

| ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ಪರದಾಟ | ತಾಲೂಕು ಕೇಂದ್ರದಲ್ಲಿ ಜಾಗವೇ ದೊರಕಿಲ್ಲ (more…)

57 minutes ago