ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ ಸಿ ರೋಡು ಇದರ ಆಶ್ರಯದಲ್ಲಿ ನಡೆದ 39 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶನಿಗೆ ಶ್ರೀರಾಮ ಗೆಳೆಯರ ಬಳಗ ಕೈಕಂಬ ಬಿ ಸಿ ರೋಡು ವತಿಯಿಂದ ಬೃಹದಾಕಾರದ ಎಳ್ಳುಂಡೆ ಹಾರ ಅರ್ಪಿಸಲಾಯಿತು.
ಕೈಕಂಬ ಪೊಳಲಿ ದ್ವಾರದಿಂದ ಬಿ ಸಿ ರೋಡು ತನಕ ಮೆರವಣಿಗೆಯಲ್ಲಿ ಸಾಗಿದ ಸಂದರ್ಭ ಭಕ್ತರು ಬೃಹತ್ ಗಾತ್ರದ ಎಲ್ಲುಂಡೆ ಹಾರವನ್ನು ಗಣೇಶನಿಗೆ ಅರ್ಪಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಮ ಗೆಳೆಯರ ಬಳಗದ ಅಧ್ಯಕ್ಷರಾದ ಸದಾಶಿವ ಕೈಕಂಬ, ಉಪಾಧ್ಯಕ್ಷ ಶೈಲೇಶ್ ಕೈಕಂಬ, ಗೌರವ ಸಲಹೆಗಾರ ರಮೇಶ್. ಮೆಲ್ವಿಚಾರಕ ಮಚ್ಚೆಂದ್ರ ಗುರುಕೃಪ ಹಾಗೂ ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಒಟ್ಟು 3500 ಎಳ್ಳುಂಡೆ
ಶ್ರೀರಾಮ ಗೆಳೆಯರ ಬಳಗ ಕೈಕಂಬ ವತಿಯಿಂದ ಬಿ.ಸಿ.ರೋಡ್ ಗಣೇಶನಿಗೆ ಅರ್ಪಿಸಿದ ಎಳ್ಳುಂಡೆಗಳ ಸಂಖ್ಯೆ 3500. ಇದು ನಾಲ್ಕನೇ ವರ್ಷದ ಸೇವೆ ಎನ್ನುತ್ತಾರೆ ಅದರ ಅಧ್ಯಕ್ಷ ಸದಾಶಿವ ಕೈಕಂಬ. 10 ಅಡಿ ಉದ್ದದ ಎಳ್ಳುಂಡೆ ಮಾಲೆಯನ್ನು ತಯಾರಿಸಲು 15 ಸಾವಿರ ರೂ ಖರ್ಚಾಗಿತ್ತು. ಮೆರವಣಿಗೆ ಬಳಿಕ ಸೇರಿದ್ದವರಿಗೆಲ್ಲ ಪ್ರಸಾದ ರೂಪದಲ್ಲಿ ಎಳ್ಳುಂಡೆಗಳನ್ನು ವಿತರಿಸಲಾಯಿತು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…