ದೇಶದ ಪ್ರಗತಿಗೆ ಮಾರಕವಾದ ದುಶ್ಚಟಗಳಿಗೆ ಬಲಿಯಾಗದೆ , ವಿಧ್ಯಾರ್ಥಿ ಜೀವನದಲ್ಲಿ ಅಭ್ಯಾಸದ ಕಡೆ ಗಮನ ಹರಿಸಿದರೆ ಉತ್ತಮ ಭವಿಷ್ಯ ಇದೆ ಎಂದು ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಜಯರಾಮ್ ಪೂಜಾರಿ ಹೇಳಿದರು.
ಜೇಸೀ ಐ ಜೋಡುಮಾರ್ಗ ನೇತ್ರಾವತಿ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ನಡೆದ ಸದೃಢ ಸಮಾಜ ನಿರ್ಮಾಣ ದಿನದ ಅಂಗವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಬಿ ಮೂಡದಲ್ಲಿ ಮಾದಕ ವ್ಯಸನ ಜಾಗೃತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ದೇಶದ ಜನಸಂಖ್ಯೆಯ ಶೇ 28 ಭಾಗ ಯುವ ಜನತೆ ದೇಶದ ಪ್ರಗತಿಗೆ ಬಹುಮುಖ್ಯ ಪಾತ್ರ ವಹಿಸುತ್ತಾರೆ , ಅವರಿಗೆ ಜೇಸೀ, ರೋಟರಿಯಂತಹ ಸಂಸ್ಥೆ ಗಳು ಜಾಗೃತಿ ಮೂಡಿಸುವ ಕೆಲಸ ಶ್ಲಾಘನೀಯ ಎಂದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲರಾದ ಯೂಸುಫ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷ ರಾದ ಉಮೇಶ್ ನಿರ್ಮಲ್, ಜೇಸಿ ಐ ಜೋಡುಮಾರ್ಗ ನೇತ್ರಾವತಿ ಯ ಅಧ್ಯಕ್ಷರಾದ ಸವಿತಾ ನಿರ್ಮಲ್, ಕಾರ್ಯದರ್ಶಿ ಹರ್ಷರಾಜ್ ಸಿ, ಜೇಸಿರೆಟ್ ವಿಭಾಗದ ಅಧ್ಯಕ್ಷೆ ಗಾಯತ್ರಿ ಲೋಕೇಶ್, ಕಾರ್ಯಕ್ರಮ ಸಂಯೋಜಕ ರವೀಂದ್ರ ಕುಕ್ಕಾಜೆ ಉಪಸ್ತಿತರಿದ್ದರು. ಉಪನ್ಯಾಸಕರಾದ ಅಬ್ದುಲ್ ರಝಕ್ ಅನಂತಾಡಿಯವರು ಕಾರ್ಯಕ್ರಮ ಸಂಯೋಜಿಸಿದ್ದರು.