ಸಮಾಜಕ್ಕೆ ಮಾದರಿಯಾಗಿ ಶಿಕ್ಷಕನಿದ್ದರೆ, ಪರಿವರ್ತನೆ ಸಾಧ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಯು. ಹೇಳಿದರು.
ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ, ಶ್ರೀರಾಮ ಪ್ರೌಢಶಾಲೆಕಲ್ಲಡ್ಕ ಸಹಯೋಗದೊಂದಿಗೆ, ಅಕ್ಷರ ಫೌಂಡೇಶನ್ (ರಿ) ಮೈಸೂರು, ಮಂಗಳೂರು ಶಾಖೆ ವತಿಯಿಂದ ನಡೆದ, ಪ್ರೌಢಶಾಲಾ ಶಿಕ್ಷಕರ ಬೋಧನಾ ಸಾಮರ್ಥ್ಯ ಮತ್ತು ಬೋಧನಾ ತಂತ್ರಗಳ ಅಭಿವೃದ್ಧಿ, ಅಕ್ಷರ ಶಿಕ್ಷಕರ ಕಾರ್ಯಾಗಾರ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಗುವಿಗೆ ಕೇವಲ ಪಠ್ಯ ವಿಷಯಗಳನ್ನು ಬೋಧಿಸುವವರು ಮಾತ್ರ ಶಿಕ್ಷಕರಲ್ಲ ಬದಲಾಗಿ ಮಗುವಿನಲ್ಲಿ ಅಂತರ್ಗತವಾಗಿರುವ ಪ್ರತಿಭೆಯನ್ನು ಹೊರತೆಗೆಯುವ ಪ್ರಾಯೋಜಕನಾಗಬೇಕು. ಭಾಷಾ ಅಧ್ಯಾಪಕರು ಐಚ್ಛಿಕ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿದ್ದರೆ ಮಾತ್ರ ಮಕ್ಕಳಲ್ಲಿ ಭಾಷಾಭಿಮಾನ ಬೆಳೆಯಲು ಸಾಧ್ಯ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷ ಡಾ ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಹೇಳಿದರು.
ಅಕ್ಷರ ಫೌಂಡೇಶನ್ ಅಧ್ಯಕ್ಷ ಸುನಿಲ್ ಕಾರ್ಯಾಗಾರ ನಡೆಸಿಕೊಟ್ಟರು. ನಂದಾವರ ಪ್ರೌಢಶಾಲೆ ಶಿಕ್ಷಕ ಶ್ರೀಕಾಂತ್ ಮಾತನಾಡಿ, ಮಕ್ಕಳಿಗೆ ಉತ್ಕೃಷ್ಟ ಶಿಕ್ಷಣ ನೀಡಬೇಕಾದರೆ ಶಿಕ್ಷಕರ ಬೋಧನಾಸಾಮರ್ಥ್ಯ ವೃದ್ಧಿಯಾಗಬೇಕು ಎನ್ನುವ ಸದುದ್ದೇಶದಿಂದ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ ಶಿಕ್ಷಕರ ಕಾರ್‍ಯಾಗಾರವನ್ನು ಮಾಡಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶಿವಪ್ರಕಾಶ್ ಉಪಸ್ಥಿತರಿದ್ದು, ಜೀವನ ಯಶಸ್ವಿಗೊಳಿಸಲು ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಆದ್ಧರಿಂದ ಭಾಷಾ ಶಿಕ್ಷಕರು ಮಕ್ಕಳ ಕೌಶಲ್ಯವನ್ನುವೃದ್ಧಿಪಡಿಸುವಲ್ಲಿ ಪ್ರಯತ್ನಿಸಬೇಕು ಎಂದರು.
ಶ್ರೀರಾಮ ಪ್ರೌಢಶಾಲಾ ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ ಎನ್, ಅಕ್ಷರ ಫೌಂಡೇಶನ್‌ನ ಕಾರ್‍ಯದರ್ಶಿ ರಾಜಲಕ್ಷ್ಮೀ ಸುನೀಲ್, ಶ್ರೀರಾಮ ಪ್ರೌಢಶಾಲಾ ಮುಖ್ಯಶಿಕ್ಷಕಿ ವಸಂತಿಕುಮಾರಿ ಉಪಸ್ಥಿತರಿದ್ದರು. ಫೌಂಡೇಶನ್ ರಾಜ್ಯ ಸಂಯೋಜಕ ದೇವಿಪ್ರಸಾದ್ ಸ್ವಾಗತಿಸಿದರು. ಅಕ್ಷರ ಫೌಂಡೇಶನ್ ಪುತ್ತೂರು ತಾಲೂಕು ಕಾರ್ಯದರ್ಶಿ ತೇಜಕುಮಾರ್ ವಂದಿಸಿದರು. ಸಹಶಿಕ್ಷಕ ಜಿನ್ನಪ್ಪ ಕಾರ್ಯಕ್ರಮ ನಿರೂಪಿಸಿದರು.