ಬಂಟ್ವಾಳ

ರಂಗಭೂಮಿಗೆ ಪರಿವರ್ತನೆಯ ಶಕ್ತಿ: ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಮಂಜುನಾಥ ಆಚಾರ್ಯ

ರಂಗಭೂಮಿಗೆ ಪರಿವರ್ತನೆಯ ಶಕ್ತಿ ಇದೆ, ನಾಟಕಗಳ ಮೂಲಕ ಜನಜಾಗೃತಿಗೊಳಿಸುವ ಕಾಯಕ ನಿತ್ಯನಿರಂತರವಾಗಬೇಕು ಎಂದು ಬಂಟ್ವಾಳ ರೋಟರೀ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಹೇಳಿದ್ದಾರೆ.

ಜಾಹೀರಾತು

ಗಾಂಧೀ ಜಯಂತಿಯ 150ನೆ ವರ್ಷಾಚರಣೆಯ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ಧಾರವಾಡ ಇವರ ಸಹಯೋಗದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ “ಗಾಂಧಿ 150- ಒಂದು ರಂಗ ಪಯಣ” ದ ಅಂಗವಾಗಿ  ಬೆಂಜನಪದವು ಸರಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಬಂಟ್ವಾಳ ರೋಟರೀ ಕ್ಲಬ್ , ಇಂಟರ್‍ಯಾಕ್ಟ್ ಕ್ಲಬ್ ಬೆಂಜನಪದವು ಹಾಗೂ ಸಂಸಾರ ಜೋಡುಮಾರ್ಗ ಆಯೋಜನೆಯಲ್ಲಿ ನಡೆದ  “ಗಾಂಧಿ 150 ರಂಗರೂಪಕ”ಕ್ಕೆ ಡ್ರಮ್ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಸಂಸಾರ ಜೋಡುಮಾರ್ಗದ ನಿರ್ದೇಶಕ ಮೌನೇಶ ವಿಶ್ವಕರ್ಮ, ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ,  ಪ್ರಾಂಶುಪಾಲ ಎ.ಟಿ.ಗಿರೀಶ್ಚಂದ್ರ, ಉಪಪ್ರಾಂಶುಪಾಲೆ ಶ್ರೀದೇವಿ,  ಬಂಟ್ವಾಳ ರೋಟರೀಕ್ಲಬ್ ಕಾರ್‍ಯದರ್ಶಿ ಶಿವಾನಿ ಬಾಳಿಗಾ, ವಿದ್ಯಾ ಎ.ರೈ, ರೋಟರೀ ಬಳಗದ ಬಸ್ತಿ ಮಾಧವ ಶೆಣೈ, ಸಂದೀಪ್ ಮಿನೇಜಸ್,ಸದಾಶಿವ ಬಾಳಿಗಾ, ಕಲಾವಿದ ತಂಡದ ನಾಯಕ ಮಧ್ವರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕಿ ಸುಜಾತಾ ಕೆ ಸ್ವಾಗತಿಸಿ, ಇಂಟರ್‍ಯಾಕ್ಟ್ ಕ್ಲಬ್ ನ ಮಾರ್ಗದರ್ಶಿ ಶಿಕ್ಷಕಿ  ಹೇಮ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಡಾ.ಶ್ರೀಪಾದ ಭಟ್ ನಿರ್ದೇಶನದ ಬೊಳುವಾರು ಮಹಮ್ಮದ್ ಕುಂಞಯವರ ’ಪಾಪು ಗಾಂಧಿ ಬಾಪು ಗಾಂದಿ’ ಕಥೆ ಆದರಿಸಿದ  ’ಗಾಂಧಿ ೧೫೦’ ರೂಪಕವನ್ನು ರಂಗ ಪಯಣ ತಂಡ  ಮನೋಜ್ಞವಾಗಿ ಪ್ರದರ್ಶಿಸಿತು. ನಾಟಕದ ಕೊನೆಯಲ್ಲಿ ಎಲ್ಲಾ ಕಲಾವಿದರನ್ನು ಬಂಟ್ವಾಳ ರೋಟರಿ ಕ್ಲಬ್ ಹಾಗೂ ಸಂಸಾರ ಜೋಡುಮಾರ್ಗ ತಂಡದ ಪರವಾಗಿ ಶಾಲುಹೊದಿಸಿ ಅಭಿನಂದಿಸಲಾಯಿತು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

2 hours ago