ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಬೆಳಗ್ಗೆಯೇ ಬಸ್ ಗಳಿಗೆ ಕಲ್ಲು ಹೊಡೆಯುವ ಮೂಲಕ ಬಂದ್ ಆಚರಣೆಯ ಬಿಸಿ ಮುಟ್ಟಿಸಲಾಯಿತು.
ಮಂಗಳೂರಿನ ಜ್ಯೋತಿ ವೃತ್ತದಲ್ಲಿ ಟೈಯರುಗಳನ್ನು ಸುಟ್ಟರೆ, ಮಾಣಿ ಬಳಿಯೂ ಟೈಯರುಗಳಿಗೆ ಬೆಂಕಿ ಕೊಟ್ಟು ಬಂದ್ ಸಂಕೇತವನ್ನು ನೀಡಲಾಯಿತು. ಕುಲಶೇಖರದಲ್ಲೂ ಬೆಳ್ಳಂಬೆಳಗ್ಗೆ ಟೈಯರುಗಳನ್ನು ಸುಡಲಾಗಿದೆ.
ಕದ್ರಿ ಶಿವಭಾಗ್ ಎಂಬಲ್ಲಿ ಹೋಟೆಲ್ ಒಂದಕ್ಕೆ ಕಲ್ಲೆಸೆದರೆ, ದೂರದೂರುಗಳಿಂದ ಬರುವ ಬಸ್ಸುಗಳಿಗೆ ಕಲ್ಲೆಸೆಯುವ ಪ್ರವೃತ್ತಿ ಈ ಬಂದ್ ನಲ್ಲೂ ಕಂಡುಬಂತು.
ಬಲ್ಮಠ ಬಳಿ ಖಾಸಗಿ ಬಸ್ಸಿಗೆ ಕಲ್ಲು ತೂರಾಟ ನಡೆಸಿದರೆ, ಮಂಗಳೂರಿಗೆ ಬೆಂಗಳೂರಿನಿಂದ ಆಗಮಿಸುವ ಕೆ.ಎಸ್.ಆರ್.ಟಿ.ಸಿ. ಐರಾವತ ಬಸ್ ಗೆ ಬಿ.ಸಿ.ರೋಡ್ ಬಳಿಯ ತುಂಬ್ಯ ಜಂಕ್ಷನ್ ಬಳಿ ಅಪರಿಚಿತರು ಕಲ್ಲೆಸೆದಿದ್ದಾರೆ.
ಇರಾ ಕಾಂಗ್ರೆಸ್ ಪ್ರತಿಭಟನೆ
ಭಾರತ ದೇಶದಾದ್ಯಂತ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಬಾರತ್ ಬಂದ್ ಗೆ ಬೆಂಬಲಿಸುವ ನಿಟ್ಟಿನಿಂದ ರಝಾಕ್ ಕುಕ್ಕಾಜೆ ನೇತೃತ್ವದಲ್ಲಿ ಇರಾ ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಅನಿಲ್ ಕುಮಾರ್ ಸೂತ್ರಬೈಲ್ (ಅಧ್ಯಕ್ಷರು ಇರಾ ವಲಯ ಕಾಂಗ್ರೆಸ್ ) ಝಾಹಿರ್ ಸಂಪಿಲ (ಯುವ ಕಾಂಗ್ರೆಸ್ ಕಾರ್ಯದರ್ಶಿ ಮಂಗಳೂರು ವಿ.ಕ್ಷೇತ್ರ) ಎ.ಜೆ ಪರಪ್ಪು (ಯೂತ್ ಕಾಂಗ್ರೆಸ್) ಪ್ರತಾಪ್ ಕರ್ಕೆರಾ( ಯುವ ಕಾಂಗ್ರೆಸ್ ಕಾರ್ಯದರ್ಶಿ) ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡ ಪ್ರತಿಭಟಿಸಿದರು.