10ರಂದು ನಡೆಯುವ ಭಾರತ ಬಂದ್ ಗೆ ಎಲ್ಲ ಸಾರ್ವಜನಿಕರು, ನಾಗರಿಕ ಬಂಧುಗಳು ಬೆಂಬಲಿಸಬೇಕು ಎಂದು ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಮನವಿ ಮಾಡಿದೆ.
ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ ಹಾಗೂ ಬಂಟ್ವಾಳ ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ಬೆಲೆ ಏರಿಕೆ ಮೂಲಕ ಜನರ ಬದುಕನ್ನು ಸಂಕಷ್ಟಗೊಳಿಸಿದ ಹಾಗೂ ದೇಶದ ಆರ್ಥಿಕತೆಯನ್ನು ಸಮಸ್ಯೆಗೆ ತಳ್ಳಿದ ಕೇಂದ್ರ ಸರಕಾರದ ನೀತಿಯ ವಿರುದ್ಧ ಜನಸಾಮಾನ್ಯರು ಬೀದಿಗೆ ಇಳಿಯಬೇಕು. ಈ ನೆಲೆಯಲ್ಲಿ ಭಾರತ್ ಬಂದ್ಗೆ ಎಲ್ಲಾ ಸಾರ್ವಜನಿಕ ನಾಗರಿಕ ಬಂಧುಗಳು ಈ ಬಂದ್ ಅನ್ನು ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ವಿನಂತಿಸಿದ್ದಾರೆ.