ಮಲಬಾರ್ ಗೋಲ್ಡ್ ಶಿಕ್ಷಣ ದಿನಾಚರಣೆ ಪ್ರಯುಕ್ತ ವಿಶಿಷ್ಠ ಸಮಾರಂಭವೊಂದನ್ನು ಆಯೋಜಿಸಿತ್ತು. ಮಂಗಳೂರಿನ ಫಳ್ನೀರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಿ.ವಿ.ಬಾಲಕೃಷ್ಣ, ಪೂರ್ಣಿಮಾ ಆರ್. ಕೆ. ಭಟ್, ಶ್ರೀಧರ ಉಳ್ಳಾಲ್, ಕ್ಯಾಲಿಸ್ತಸ್ ಡೆಸಾ ಮರ್ಸಿ ರೆಗೋ ಅವರನ್ನು ಸನ್ಮಾನಿಸಿತು. ಮನಪ ನಗರ ಯೋಜನಾ ಸಮಿತಿಯ ಪ್ರವೀಣಚಂದ್ರ ಆಳ್ವ, ಸಂಸ್ಥೆಯ ಮಂಗಳೂರು ದಾಸ್ತಾನು ವಿಭಾಗ ಮುಖ್ಯಸ್ಥ ಶರತ ಚಂದ್ರನ್ ಅತಿಥಿಗಳಾಗಿದ್ದರು.
ಇವರಲ್ಲಿ ವಿಶೇಷ ಸಾಮರ್ಥ್ಯದ ಮಕ್ಕಳಿಗೆ ತರಬೇತಿ ನೀಡುವ ಮಂಗಳೂರಿನ ಶಕ್ತಿನಗರದ ಅರಿವು ಕೇಂದ್ರದ ಡಾ. ರಾಧಾಕೃಷ್ಣ ಭಟ್ ಮತ್ತು ಸ್ಥಾಪಕರೂ ಆಗಿರುವ ಪೂರ್ಣಿಮಾ ಭಟ್ ಅವರನ್ನು ಗುರುತಿಸಿ ಸನ್ಮಾನಿಸಿದ್ದು ವಿಶೇಷ. ಸ್ಪೀಚ್ ಥೆರಪಿ, ಫಿಸಿಯೋಥೆರಪಿ, ಬಿಹೇವಿಯರಲ್ ಥೆರಪಿ ಸಹಿತ ಎಳೆಯ ಮಕ್ಕಳಲ್ಲಿರುವ ಸಮಸ್ಯೆಗಳನ್ನು ಗುರುತಿಸಿ ಅವರಿಗೆ ಮನೆಯ ವಾತಾವರಣದೊಂದಿಗೆ ತರಗತಿಗಳನ್ನು ನಡೆಸುವ ಕಾರ್ಯವನ್ನು ಅರಿವು ಟ್ರಸ್ಟ್ ಮಾಡುತ್ತಿದೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)