ಜಿಲ್ಲಾ ಸುದ್ದಿ

ಅಕ್ಟೋಬರ್ 7ರ ಬದಲು 14ರಿಂದ 21ರವರೆಗೆ ಮಕ್ಕಳಿಗೆ ರಜೆ

ಅಕ್ಟೋಬರ್ 8ರಿಂದ ಮೊದಲ್ಗೊಂಡು 18ರವರೆಗೆ ದಸರಾ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವರಾತ್ರಿ ಆಚರಣೆಗೆ ವಿಶೇಷ ಮಹತ್ವವಿದೆ. ಶಾಲಾ, ಕಾಲೇಜುಗಳಿಗೆ ಈ ಸಮಯದಲ್ಲಿ ರಜೆಯೂ ಇರುತ್ತದೆ. ಆದರೆ ಈ ಬಾರಿ ದಸರಾ ರಜೆಗೆ ಕತ್ತರಿ ಬೀಳಲಿದೆ.

ಕಳೆದ ತಿಂಗಳು ಮಳೆಯ ಹಿನ್ನೆಲೆಯಲ್ಲಿ ಹಲವು ಬಾರಿ ರಜೆ ಘೋಷಿಸಿದ ಹಿನ್ನೆಲೆಯಲ್ಲಿ  ಮುಂದಿನ ರಜಾ ದಿನಗಳಲ್ಲಿ ತರಗತಿ ನಡೆಸುವಂತೆ ಮಾರ್ಪಾಡುಗೊಳಿಸಲಾಗಿದೆ.

2018-19ನೇ ಸಾಲಿನ ಶೈಕ್ಷಣಿಕ ಅವಧಿಯ ಮಧ್ಯಂತರ ರಜೆಯನ್ನು ಅಕ್ಟೋಬರ್ 7ರಿಂದ 21ರವರೆಗೆ ನೀಡಲಾಗಿತ್ತು. ಆದರೆ ಈಗ ಅಕ್ಟೋಬರ್ 14ರಿಂದ 21ರವರೆಗೆ ಮಧ್ಯಂತರ ರಜೆಯಾಗಿ ಮಾರ್ಪಾಡು ಮಾಡಲಾಗಿದೆ.

ಕಲಿಕೆಗೆ ನಷ್ಟವಾಗದಂತೆ ಶಾಲಾ ಹಂತದಲ್ಲಿ ಶನಿವಾರ ಪೂರ್ಣ ದಿನವನ್ನಾಗಿ ಮತ್ತು ಶಾಲಾ ದಿನದಲ್ಲಿ ನಿಗದಿಯಾಗಿರುವ ಸ್ಥಳೀಯ ರಜೆಯನ್ನು ಕಡಿಮೆ ಮಾಡಿಕೊಂಡು ಸರಿದೂಗಿಸಿಕೊಳ್ಳುವ ಕುರಿತು ಪ್ರತಿ ಶಾಲಾ ಹಂತದಲ್ಲಿ ಯೋಜನೆಯನ್ನು ರೂಪಿಸಬಹುದು.

ಮಧ್ಯಾವಧಿ ಪರೀಕ್ಷೆಗಳನ್ನು ಅಕ್ಟೋಬರ್ 7ರಿಂದ 14ರ ನಡುವಿನ ಮರು ಹೊಂದಾಣಿಕೆಯ ಕರ್ತವ್ಯದ ದಿನಗಳನ್ನು (ಒಟ್ಟು 5 ದಿನಗಳು) ಒಳಗೊಂಡಂತೆ ವೇಳಾಪಟ್ಟಿಯನ್ನು ಶಾಲಾ ಹಂತದಲ್ಲಿ ಯೋಜನೆ ತಯಾರಿಸಿ ಕ್ರಮ ಕೈಗೊಳ್ಳಬೇಕು. ಸೆಪ್ಟಂಬರ್ ಪೂರ್ಣ ತಿಂಗಳಲ್ಲಿ ತರಗತಿ/ ಪಾಠ ಬೋಧನೆಗೆ ಬಳಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ