www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಆಗಸ್ಟ್ 31ರಂದು ನಡೆದ ಬಂಟ್ವಾಳ ಪುರಸಭೆ ಚುನಾವಣೆಯ ಫಲಿತಾಂಶ ಸೆ.3ರ ಸೋಮವಾರ ಪ್ರಕಟಗೊಂಡಿದ್ದು, ರೋಚಕ ಹಣಾಹಣಿಗೆ ಸಾಕ್ಷಿಯಾಯಿತು. ಕಾಂಗ್ರೆಸ್ ಬಿಜೆಪಿಯಿಂದ 1 ಸ್ಥಾನ ಜಾಸ್ತಿ ಗಳಿಸಿಕೊಂಡರೆ, ಮತ ಗಳಿಕೆಯಲ್ಲೂ 305 ಮತಗಳ ಮುನ್ನಡೆ ಪಡೆಯಿತು.
ಸೀಟುಗಳು: 27
ಕಾಂಗ್ರೆಸ್ – 12, ಬಿಜೆಪಿ 11, ಎಸ್.ಡಿ.ಪಿ.ಐ. – 4, ಜೆಡಿಎಸ್ – 0, ಸಿಪಿಐ – 0, ಪಕ್ಷೇತರ – 0
ಮತ ಗಳಿಕೆ: ಕಾಂಗ್ರೆಸ್ – 9906, ಬಿಜೆಪಿ – 9601, ಜೆಡಿಎಸ್ 608, ಎಸ್.ಡಿ.ಪಿ.ಐ. 3914, ಸಿಪಿಐ 312, ಪಕ್ಷೇತರ 170, ನೋಟಾ 173.
ಒಟ್ಟು 24,684 ಮತಗಳು ಚಲಾವಣೆ ಆಗಿದ್ದವು.