www.bantwalnews.com – ಸಂಪಾದಕ: ಹರೀಶ ಮಾಂಬಾಡಿ
- ಒಟ್ಟು 27ರಲ್ಲಿ ಕಾಂಗ್ರೆಸ್ 12, ಬಿಜೆಪಿ 11, ಎಸ್.ಡಿ.ಪಿ.ಐ. 4
ಬಂಟ್ವಾಳ ಪುರಸಭೆ ಚುನಾವಣೆಯ ಫಲಿತಾಂಶ ಬೆಳಗ್ಗೆ 10.30ರೊಳಗೆ ಪ್ರಕಟಗೊಂಡರೂ ಕುತೂಹಲ ಇನ್ನೂ ತಣಿದಿಲ್ಲ. ಏಕೆಂದರೆ ಅಧಿಕಾರದ ಪೀಠವೇರಲು ಬೇಕಾದ ಬಹುಮತವನ್ನು ಯಾವ ಪಕ್ಷಗಳೂ ಪಡೆದಿಲ್ಲ. ಚುನಾವಣೆಗೆ ಮುನ್ನ ಅತಂತ್ರ ಸ್ಥಿತಿ ಬಂದರೆ ನಾವು ವಿರೋಧ ಪಕ್ಷದಲ್ಲಿ ಕೂರಲು ಸಿದ್ಧ ಎಂದು ಹೇಳಿದ್ದ ಪಕ್ಷಗಳು ಏನು ಮಾಡುತ್ತವೆ ಎಂಬುದು ಕುತೂಹಲಕಾರಿ. ಎಸ್.ಡಿ.ಪಿ.ಐ ನಿರ್ಣಾಯಕವಾಗಿ ಮೂಡಿಬರುತ್ತದೆ ಎಂದು ಬಂಟ್ವಾಳನ್ಯೂಸ್ ಓದುಗರ ಸಮೀಕ್ಷೆ ಆಧರಿಸಿ ಪ್ರಕಟಿಸಿತ್ತು. ವಿವರಗಳಿಗೆ ಕ್ಲಿಕ್ ಮಾಡಿರಿ –
https://bantwalnews.com/2018/09/02/muncipality-election-2/
ಅದೀಗ ನಿಜವಾಗಿದೆ.
ಬಂಟ್ವಾಳ ನ್ಯೂಸ್ ಸಂಪೂರ್ಣ ಫಲಿತಾಂಶದ ವಿವರಗಳನ್ನು ಇಲ್ಲಿ ನೀಡುತ್ತಿದೆ.
ಗೆದ್ದ ಪ್ರಮುಖರು:
ಕಳೆದ ಸಾಲಿನ ಸದಸ್ಯರಾದ ಎ. ಗೋವಿಂದ ಪ್ರಭು (ಬಿಜೆಪಿ), ಪಿ.ರಾಮಕೃಷ್ಣ ಆಳ್ವ, ಮೊಹಮ್ಮದ್ ನಂದರಬೆಟ್ಟು, ಗಂಗಾಧರ, ಬಿ.ವಾಸು ಪೂಜಾರಿ, ಮಹಮ್ಮದ್ ಶರೀಫ್, ಜೆಸಿಂತಾ (ಕಾಂಗ್ರೆಸ್), ಮೊನೀಶ್ ಆಲಿ (ಎಸ್.ಡಿ.ಪಿ.ಐ. ) ಗೆಲ್ಲುವುದರೊಂದಿಗೆ 8 ಮಂದಿ ಮತ್ತೆ ಪುರಸಭೆಯ ಕಲಾಪಗಳಲ್ಲಿ ಭಾಗವಹಿಸಲಿದ್ದಾರೆ.
ಇವರಲ್ಲಿ ಎ. ಗೋವಿಂದ ಪ್ರಭು ಸತತ ಏಳನೇ ಬಾರಿ ಜಯ ಗಳಿಸಿದ್ದು ದಾಖಲೆ. ಕಳೆದ ಅವಧಿಯ ಕಾಂಗ್ರೆಸ್ ಆಡಳಿತದ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದ ರಾಮಕೃಷ್ಣ ಆಳ್ವ ಮತ್ತು ಮೊಹಮ್ಮದ್ ನಂದರಬೆಟ್ಟು ಗೆಲುವು ಸಾಧಿಸಿದ್ದಾರೆ.
A.GOVINDA PRABHU (BJP) WINNER
P.RAMAKRISHNA ALVA (CONGRESS) – WINNER
ಸೋತ ಪ್ರಮುಖರು:
ಕಳೆದ ಅವಧಿಯ ಸದಸ್ಯೆಯಾಗಿದ್ದ ಬಿಜೆಪಿಯ ಕೆ.ಸುಗುಣ ಕಿಣಿ, ಹಿಂದಿನ ಎರಡು ಬಾರಿ ಅಧ್ಯಕ್ಷರಾಗಿದ್ದ ಬಿಜೆಪಿಯ ದಿನೇಶ್ ಭಂಡಾರಿ ಸೋತ ಪ್ರಮುಖರಲ್ಲಿ ಸೇರಿದ್ದಾರೆ.
ಯಾವ ಪಕ್ಷಕ್ಕೆ ಎಷ್ಟು ಮತ:
ಮತಗಳ ಪ್ರಮಾಣದಲ್ಲಿ ಕಾಂಗ್ರೆಸ್ ಮುಂದಿದೆ. ಕಾಂಗ್ರೆಸ್ ಗೆ 9906 ಮತಗಳು ದೊರಕಿದರೆ, ಬಿಜೆಪಿಗೆ 9601 ಮತಗಳು ಲಭ್ಯವಾಗಿವೆ. ಎಸ್.ಡಿ.ಪಿ.ಐ. 3914 ಮತ ಗಳಿಸಿದರೆ, ಜೆಡಿಎಸ್ 608 ಮತ ಗಳಿಸಿದೆ. ಸಿಪಿಐ 3121, ಪಕ್ಷೇತರ 170 ಮತ್ತು 173 ನೋಟಾ ಮತಗಳು ಚಲಾವಣೆಯಾದ 24684 ಮತಗಳಲ್ಲಿ ಇವೆ.
ಗರಿಷ್ಠ – ಕನಿಷ್ಠ ಅಂತರ:
ವಾರ್ಡ್ 24ರಲ್ಲಿ ಕಾಂಗ್ರೆಸ್ ನ ಸಿದ್ದೀಕ್ ಗುಡ್ಡೆಯಂಗಡಿ 407 ಮತಗಳ ಅಂತರದ ಗೆಲುವು ಸಾಧಿಸಿದ್ದು ಗರಿಷ್ಠವಾದರೆ, ನಂದರಬೆಟ್ಟು ವಾರ್ಡಿನಲ್ಲಿ ಮೊಹಮ್ಮದ್ ನಂದರಬೆಟ್ಟು 4 ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಕಡಿಮೆ ಅಂತರದ ಗೆಲುವು ಸಾಧಿಸಿದ್ದಾರೆ.
COMPLETE DETAILS OF RESULT – by www.bantwalnews.com
- ವಾರ್ಡ್ 1 ಲೊರೆಟ್ಟೊಪದವು ಒಟ್ಟು ಮತಗಳು: 1643. ಚಲಾಯಿತ ಮತಗಳು: 1131. ಬೂತ್ 1ರಲ್ಲಿ 846 ಮತಗಳಲ್ಲಿ 588 ಚಲಾಯಿತ, ಬೂತ್ 2ರಲ್ಲಿ 797 ಮತಗಳಲ್ಲಿ 543 ಚಲಾಯಿತ. ಅಭ್ಯರ್ಥಿಗಳು: ಬಿ.ವಾಸುಪೂಜಾರಿ(ಕಾಂಗ್ರೆಸ್) 426, ಚಂದ್ರಶೇಖರ ಪೂಜಾರಿ (ಬಿಜೆಪಿ) 397, ರಿಯಾಝ್ ಲೊರೆಟ್ಟೊಪದವು (ಎಸ್.ಡಿ.ಪಿ.ಐ) 302 ನೋಟಾ 6
ಕಾಂಗ್ರೆಸ್ ನ ಬಿ.ವಾಸು ಪೂಜಾರಿ ಅವರು 29 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
- ವಾರ್ಡ್ 2 ಮಂಡಾಡಿ ಒಟ್ಟು ಮತಗಳು 1282. ಚಲಾಯಿತ ಮತಗಳು 989. ಅಭ್ಯರ್ಥಿಗಳು ಇವರು. ಗಂಗಾಧರ ಪೂಜಾರಿ ಮಂಡಾಡಿ (ಕಾಂಗ್ರೆಸ್) 563, ಬಿ.ದಿನೇಶ ಭಂಡಾರಿ (ಬಿಜೆಪಿ) 421, ನೋಟಾ 5
ಕಾಂಗ್ರೆಸ್ ನ ಗಂಗಾಧರ ಮಂಡಾಡಿ 142 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್3 ಮಣಿ ಒಟ್ಟು ಮತಗಳು 1651 ಚಲಾಯಿತ ಮತಗಳು. 1323 ಬೂತ್ 1ರಲ್ಲಿ 898ರಲ್ಲಿ 773 ಚಲಾಯಿತ. ಬೂತ್ 2ರಲ್ಲಿ 753ರಲ್ಲಿ 550 ಚಲಾಯಿತ. ಅಭ್ಯರ್ಥಿಗಳು ಇವರು. ಹೇಮಾವತಿ (ಕಾಂಗ್ರೆಸ್) 586, ಮೀನಾಕ್ಷೀ ಜೆಗೌಡ (ಬಿಜೆಪಿ). 722 ನೋಟಾ 15.
ಬಿಜೆಪಿಯ ಮೀನಾಕ್ಷಿ ಜೆ. ಗೌಡ ಅವರು 136 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 4 ಕಾಲೇಜು ರಸ್ತೆ ಒಟ್ಟು ಮತಗಳು 1014 ಚಲಾಯಿತ ಮತಗಳು 763 ಪ್ರತಿಮಾ ರವಿ ಕುಮಾರ್ (ಕಾಂಗ್ರೆಸ್), 327, ರೇಖಾ ರಮಾನಾಥ ಪೈ (ಬಿಜೆಪಿ) 431. ನೋಟಾ 5
ಬಿಜೆಪಿಯ ರೇಖಾ ರಮಾನಾಥ ಪೈ ಅವರು 104 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 5 ಜಕ್ರಿಬೆಟ್ಟು ಒಟ್ಟು ಮತಗಳು 1180 ಚಲಾಯಿತ ಮತಗಳು 897 ಜನಾರ್ಧನ ಚೆಂಡ್ತಿಮಾರ್ (ಕಾಂಗ್ರೆಸ್) 520, ವಿಶ್ವನಾಥ ಚಂಡ್ತಿಮಾರ್ (ಬಿಜೆಪಿ) 366. ನೋಟಾ 11
ಕಾಂಗ್ರೆಸ್ ನ ಜನಾರ್ದನ ಚಂಡ್ತಿಮಾರ್ 154 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 6 ಹೊಸ್ಮರ್ : ಒಟ್ಟು ಮತಗಳು 1331 ಚಲಾಯಿತ ಮತಗಳು 951 ಜಯಂತಿ ಸೋಮಪ್ಪ ಪೂಜಾರಿ (ಕಾಂಗ್ರೆಸ್) 332, ದೇವಕಿ ಶಿವಪ್ಪ ಪೂಜಾರಿ (ಬಿಜೆಪಿ) 606 ನೋಟಾ 13.
ಬಿಜೆಪಿಯ ದೇವಕಿ ಶಿವಪ್ಪ ಪೂಜಾರಿ 274 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 7 ಬಂಟ್ವಾಳ ಪೇಟೆ: ಒಟ್ಟು ಮತಗಳು: 924. ಚಲಾಯಿತ ಮತಗಳು: 592 ಧನವಂತಿ ಮಹಾಬಲ ಬಂಗೇರ (ಕಾಂಗ್ರೆಸ್) 120, ಶಶಿಕಲಾ ಪ್ರಭಾಕರ್ (ಬಿಜೆಪಿ) 465 ನೋಟಾ 7.
ಬಿಜೆಪಿಯ ಶಶಿಕಲಾ ಪ್ರಭಾಕರ್ 345 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 8 ಕೆಳಗಿನಪೇಟೆ: ಒಟ್ಟು ಮತಗಳು 1122, ಚಲಾಯಿತ ಮತಗಳು 882 ಮೊಹಮ್ಮದ್ ಸಗೀರ್ ಬಿ.ಎಲ್ (ಕಾಂಗ್ರೆಸ್) 272, ಮುನೀಶ್ ಅಲಿ ಮಹಮ್ಮದ್ (ಎಸ್.ಡಿ.ಪಿ.ಐ.) 374, ಉಮರಬ್ಬ (ಬಿಜೆಪಿ) 16, ಹಾರೂನ್ ರಶೀದ್(ಜೆಡಿಎಸ್) 219 ನೋಟಾ 1.
ಎಸ್.ಡಿ.ಪಿ.ಐ.ನ ಮುನೀಶ್ ಆಲಿ ಅಹಮ್ಮದ್ 53 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 9 ಭಂಡಾರಿಬೆಟ್ಟು: ಒಟ್ಟು ಮತಗಳು 1253 ಚಲಾಯಿತ ಮತಗಳು 948 ಜಗದೀಶ್ ಕುಂದರ್ (ಕಾಂಗ್ರೆಸ್) 409, ಹರಿಪ್ರಸಾದ್ (ಬಿಜೆಪಿ) 536, ನೋಟಾ 1
ಬಿಜೆಪಿಯ ಹರಿಪ್ರಸಾದ್ 127 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 10 ಕಾಮಾಜೆ: ಒಟ್ಟು ಮತಗಳು 1303 ಚಲಾಯಿತ ಮತಗಳು 918 ವನಜಾಕ್ಷಿ ಬಿ. ಶೇಖರ (ಸಿಪಿಐ – ಕಾಂಗ್ರೆಸ್ ಬೆಂಬಲಿತ) 312, ಶೋಭಾ ಹರಿಶ್ಚಂದ್ರ (ಬಿಜೆಪಿ) 599, ನೋಟಾ 7
ಬಿಜೆಪಿಯ ಶೋಭಾ ಹರಿಶ್ಚಂದ್ರ 287 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.
- ವಾರ್ಡ್ 11 ಸಂಚಯಗಿರಿ: ಒಟ್ಟು ಮತಗಳು 1264 ಚಲಾಯಿತ ಮತಗಳು 759 ಸುಜಾತ ಎಸ್.ಅಮೀನ್ (ಕಾಂಗ್ರೆಸ್) 279, ಜಯಂತಿ ವಸಂತ ಕುಲಾಲ್ (ಬಿಜೆಪಿ) 474 ನೋಟಾ 6
ಬಿಜೆಪಿಯ ಜಯಂತಿ ವಸಂತ ಕುಲಾಲ್ 195 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 12 ಅಜ್ಜಿಬೆಟ್ಟು: ಒಟ್ಟು ಮತಗಳು 1295 ಚಲಾಯಿತ ಮತಗಳು 811 ವಸಂತಿ (ಜೆಡಿಎಸ್ – ಕಾಂಗ್ರೆಸ್ ಬೆಂಬಲಿತ) 228, ವಿದ್ಯಾವತಿ ಪ್ರಮೋದ್ ಕುಮಾರ್ (ಬಿಜೆಪಿ) 579, ನೋಟಾ 4.
ಬಿಜೆಪಿಯ ವಿದ್ಯಾವತಿ ಪ್ರಮೋದ್ ಕುಮಾರ್ 351 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 13 ಗೂಡಿನಬಳಿ: ಒಟ್ಟು ಮತಗಳು 972 ಚಲಾಯಿತ ಮತಗಳು 734 ನೆಫಿಸಾ ಹನೀಫ್ (ಕಾಂಗ್ರೆಸ್) 174, ಸಂಶದ್ (ಎಸ್.ಡಿ.ಪಿ.ಐ) 436, ಕೌಸರ್ ಬಾನು (ಬಿಜೆಪಿ) 114, ನೋಟಾ 10
ಎಸ್.ಡಿ.ಪಿ.ಐನ ಸಂಶದ್ 262 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 14 ಜೋಡುಮಾರ್ಗ–ಕೈಕುಂಜೆ: ಒಟ್ಟು ಮತಗಳು 1631. ಚಲಾಯಿತ ಮತಗಳು: 1139 ಬೂತ್ 1ರಲ್ಲಿ 535ರಲ್ಲಿ 357 ಚಲಾಯಿತ, ಬೂತ್ 2ರಲ್ಲಿ 1096ರಲ್ಲಿ 782 ಚಲಾಯಿತ. ಕೆ ಸುಗುಣ ಕಿಣಿ (ಬಿಜೆಪಿ) 357, ಶೆಹನಾಜ್ (ಕಾಂಗ್ರೆಸ್) 300, ಝೀನತ್ ಫಿರೋಜ್ (ಎಸ್.ಡಿ.ಪಿ.ಐ.) 477, ನೋಟಾ 6
ಎಸ್.ಡಿ.ಪಿ.ಐನ ಝೀನತ್ 120 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 15 ಎಪಿಎಂಸಿ – ಕೈಕುಂಜೆ: ಒಟ್ಟು ಮತಗಳು 963 ಚಲಾಯಿತ ಮತಗಳು 667 ಅರ್ಲ ಗೋವಿಂದ ಪ್ರಭು (ಬಿಜೆಪಿ) 353, ಲೋಕೇಶ್ ಸುವರ್ಣ (ಕಾಂಗ್ರೆಸ್) 313. ನೋಟಾ 3
ಬಿಜೆಪಿಯ ಅರ್ಲ ಗೋವಿಂದ ಪ್ರಭು 40 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.
- ವಾರ್ಡ್ 16 ನಂದರಬೆಟ್ಟು: ಒಟ್ಟು ಮತಗಳು 1334 ಚಲಾಯಿತ ಮತಗಳು 1046 ಮುಹಮ್ಮದ್ ನಂದರಬೆಟ್ಟು (ಕಾಂಗ್ರೆಸ್) 477, ಶಾಹುಲ್ ಹಮೀದ್ ಎಸ್.ಎಚ್ (ಎಸ್.ಡಿ.ಪಿ.ಐ.) 473, ಸಲಿಮ್ (ಬಿಜೆಪಿ) 88 ನೋಟಾ 8.
ಕಾಂಗ್ರೆಸ್ ನ ಮೊಹಮ್ಮದ್ ನಂದರ ಬೆಟ್ಟು 4 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 17 ಪರ್ಲಿಯಾ: ಒಟ್ಟು ಮತಗಳು 983 ಚಲಾಯಿತ ಮತಗಳು 394 ಅಬ್ದುಲ್ ಖಾದರ್ ಇಕ್ಬಾಲ್ (ಪಕ್ಷೇತರ) 170, ಲುಕ್ಮಾನ್ (ಕಾಂಗ್ರೆಸ್) 279, ಮಹಮ್ಮದ್ ಇಕ್ಬಾಲ್ ಮದ್ದಾ (ಎಸ್.ಡಿ.ಪಿ.ಐ.) 200, ಅನಂತ ಕೃಷ್ಣ ನಾಯಕ್(ಬಿಜೆಪಿ) 106 ನೋಟಾ 1.
ಕಾಂಗ್ರೆಸ್ ನ ಲುಕ್ಮಾನ್ 79 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 18 ಶಾಂತಿ ಅಂಗಡಿ: ಒಟ್ಟು ಮತಗಳು 1081 ಚಲಾಯಿತ ಮತಗಳು 842 ಹಸೈನಾರ್ (ಕಾಂಗ್ರೆಸ್) 529, ಬಶೀರ್ ಪಲ್ಲ (ಎಸ್.ಡಿ.ಪಿ.ಐ.) 298, ಮಹೇಶ ಶೆಟ್ಟಿ(ಬಿಜೆಪಿ) 13 ನೋಟಾ 2
ಕಾಂಗ್ರೆಸ್ ನ ಹಸೈನಾರ್ 231 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 19 ಅದ್ದೇಡಿ ಒಟ್ಟು ಮತಗಳು 965 ಚಲಾಯಿತ ಮತಗಳು 709 ಮುಹಮ್ಮದ್ ಶರೀಫ್ (ಕಾಂಗ್ರೆಸ್) 374, ಇಸಾಕ್ ಶಾಂತಿಯಂಗಡಿ (ಎಸ್.ಡಿ.ಪಿ.ಐ.) 327, ಶೇಕ್ ಶಾಹಿದ್ ಹುಸೇನ್ (ಬಿಜೆಪಿ) 7 ನೋಟಾ 1.
ಕಾಂಗ್ರೆಸ್ ನ ಮಹಮ್ಮದ್ ಶರೀಫ್ 47 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.
- ವಾರ್ಡ್ 20 ಮೊಡಂಕಾಪು: ಒಟ್ಟು ಮತಗಳು 1354 ಚಲಾಯಿತ ಮತಗಳು 941 ಲೋಲಾಕ್ಷ ಶೆಟ್ಟಿ (ಕಾಂಗ್ರೆಸ್) 498, ಲತೀಫ್ ಕೆ.ಚ್ (ಎಸ್.ಡಿ.ಪಿ.ಐ.) 40, ಎಂ. ಸತೀಶ್ ಶೆಟ್ಟಿ (ಬಿಜೆಪಿ) 400. ನೋಟಾ 5.
ಕಾಂಗ್ರೆಸ್ ನ ಲೋಲಾಕ್ಷ ಶೆಟ್ಟಿ 98 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
- ವಾರ್ಡ್ 21 ತಲಪಾಡಿ: ಒಟ್ಟು ಮತಗಳು 1641 ಚಲಾಯಿತ ಮತಗಳು 1262 ಬೂತ್ 1ರಲ್ಲಿ 759 ಮತದಾರರ ಪೈಕಿ 585, ಬೂತ್ 2ರಲ್ಲಿ 882 ಮತದಾರರ ಪೈಕಿ 677 ಮಂದಿ ಮತ ಚಲಾಯಿಸಿದ್ದಾರೆ. ರಾಮಕೃಷ್ಣ ಆಳ್ವ(ಕಾಂಗ್ರೆಸ್) 520, ರಾಮಣ್ಣ ಶೆಟ್ಟಿ (ಎಸ್.ಡಿ.ಪಿ.ಐ.) 420, ಪುಷ್ಪರಾಜ್ ಶೆಟ್ಟಿ (ಬಿಜೆಪಿ) 314 ನೋಟಾ 8.
ಕಾಂಗ್ರೆಸ್ ನ ಪಿ.ರಾಮಕೃಷ್ಣ ಆಳ್ವ 100 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
- ವಾರ್ಡ್ 22 ಪಲ್ಲಮಜಲು: ಒಟ್ಟು ಮತಗಳು 1346 ಚಲಾಯಿತ ಮತಗಳು 997 ನಳಿನಾಕ್ಷಿ ಆನಂದ ಕುಲಾಲ್ (ಕಾಂಗ್ರೆಸ್) 431, ಚೈತನ್ಯ ಎ.ದಾಸ್ (ಬಿಜೆಪಿ) 544, ನೋಟಾ 22.
ಬಿಜೆಪಿಯ ಚೈತನ್ಯಾ ಎ. ದಾಸ್ 103 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
- ವಾರ್ಡ್ 23 ಜೈನರಪೇಟೆ: ಒಟ್ಟು ಮತಗಳು 1272 ಚಲಾಯಿತ ಮತಗಳು 962 ಮುಹಮ್ಮದ್ ನಿಸಾರ್ (ಕಾಂಗ್ರೆಸ್) 258, ಇದ್ರೀಸ್ ಪಿ.ಜೆ (ಎಸ್.ಡಿ.ಪಿ.ಐ.) 391, ಲಕ್ಷಣ್ ರಾಜ್ ಪಿ.ವಿ (ಬಿಜೆಪಿ) 301, ಶಫೀಕ್ (ಜೆಡಿಎಸ್) 7, ನೋಟಾ 5.
ಎಸ್.ಡಿ.ಪಿ.ಐನ ಮೊಹಮ್ಮದ್ ಇದ್ರಿಸ್ 90 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 24 ಆಲಡ್ಕ: ಒಟ್ಟು ಮತಗಳು 1307 ಚಲಾಯಿತ ಮತಗಳು 901 ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ (ಕಾಂಗ್ರೆಸ್) 583, ಯೂಸುಫ್ ಆಲಡ್ಕ (ಎಸ್.ಡಿ.ಪಿ.ಐ.) 176, ಜಿ ಜಿ. ಮೊಹಮ್ಮದ್ (ಬಿಜೆಪಿ) 75, ಮಹಮ್ಮದ್ ಅಮಾನುಲ್ಲಾ(ಜೆಡಿಎಸ್) 67, ನೋಟಾ 1.
ಕಾಂಗ್ರೆಸ್ ನ ಅಬುಬಕ್ಕರ್ ಸಿದ್ದಿಕ್ ಗುಡ್ಡೆಯಂಗಡಿ 407 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.
- ವಾರ್ಡ್ 25 ಬೋಳಂಗಡಿ: ಒಟ್ಟು ಮತಗಳು 1260 ಚಲಾಯಿತ ಮತಗಳು 787 ಜೆಸಿಂತಾ ಡಿಸೋಜ (ಕಾಂಗ್ರೆಸ್) 419, ಯಶೋಧ ಜಗನ್ನಾಥ (ಬಿಜೆಪಿ) 277, ಬಿ.ಎಸ್. ಖೈರುನ್ನೀಸ (ಜೆಡಿಎಸ್) 87, ನೋಟಾ 4.
ಕಾಂಗ್ರೆಸ್ ನ ಜೆಸಿಂತಾ ಡಿಸೋಜ 142 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
- ವಾರ್ಡ್ 26 ಮೆಲ್ಕಾರ್: ಒಟ್ಟು ಮತಗಳು 1349 ಚಲಾಯಿತ ಮತಗಳು 884 ಗಾಯತ್ರಿ ಪ್ರಕಾಶ್ (ಕಾಂಗ್ರೆಸ್) 485 ಉಷಾಲತಾ ಉಮೇಶ (ಬಿಜೆಪಿ) 393, ನೋಟಾ 6.
ಕಾಂಗ್ರೆಸ್ ನ ಗಾಯತ್ರಿ ಜೆ 92 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
- ವಾರ್ಡ್ 27 ಬೊಂಡಾಲ: ಒಟ್ಟು ಮತಗಳು 1382 ಚಲಾಯಿತ ಮತಗಳು 1085 ಬೂತ್ 1ರಲ್ಲಿ 713 ಮತಗಳಲ್ಲಿ 547 ಚಲಾಯಿತ ಹಾಗು ಬೂತ್ 2ರಲ್ಲಿ 669 ಮತಗಳ ಪೈಕಿ 538 ಚಲಾಯಿತ. ಸುರೇಶ್ ನಾಯ್ಕ (ಕಾಂಗ್ರೆಸ್) 432 ಜಯರಾಮ ನಾಯ್ಕ (ಬಿಜೆಪಿ) 647 ನೋಟಾ 8.
ಬಿಜೆಪಿಯ ಜಯರಾಮ 215 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.