ಬಂಟ್ವಾಳ

ಬಂಟ್ವಾಳ ಚುನಾವಣಾ ಕಣ – ಮತದಾನಕ್ಕೆ ಇನ್ನು ಒಂದೇ ದಿನ

www.bantwalnews.comಸಂಪಾದಕ: ಹರೀಶ ಮಾಂಬಾಡಿ

ಪ್ರತಿಷ್ಠಿತ ಬಂಟ್ವಾಳ ಪುರಸಭೆ ಚುನಾವಣೆಗೆ ಇನ್ನು ಒಂದೇ ದಿನ. 27 ವಾರ್ಡುಗಳಲ್ಲಿ ಆಗಸ್ಟ್ 31ರಂದು ಮತದಾನ.  ಕಾಂಗ್ರೆಸ್, ಬಿಜೆಪಿ ಮಧ್ಯೆ ಬಿಗ್ ಫೈಟ್. ಒಂದೊಂದು ಮತಕ್ಕೂ ಮಹತ್ವ ಇರುವ ಕಾರಣ ಎಸ್.ಡಿ.ಪಿ.ಐ. ನಿರ್ಣಾಯಕ. ಈಗಾಗಲೇ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕೈಗೊಂಡಿವೆ. ಇನ್ನೇನಿದ್ದರೂ ಮತದಾನವಷ್ಟೇ ಬಾಕಿ. ಕಾಂಗ್ರೆಸ್ ನ 25, ಬಿಜೆಪಿಯ 27, ಜೆಡಿಎಸ್ ನ 5, ಎಸ್.ಡಿ.ಪಿ.ಐ.ನ 12, ಸಿಪಿಐ 1, ಪಕ್ಷೇತರ 1  ಸೇರಿ ಒಟ್ಟು 71 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಳೆದ ಆಡಳಿತ ಅವಧಿಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. 23 ಸ್ಥಾನಗಳಲ್ಲಿ 13 ಕಾಂಗ್ರೆಸ್ 5 ಬಿಜೆಪಿ,  3 ಎಸ್ ಡಿ ಪಿ ,  1 ಜೆಡಿಎಸ್, 1 ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದರು.

ಕಳೆದ ಬಾರಿ 23 ವಾರ್ಡುಗಳಿದ್ದ ಬಂಟ್ವಾಳ ಪುರಸಭೆಯ ಸದಸ್ಯಬಲ ಈ ಬಾರಿ ವೃದ್ಧಿಗೊಂಡಿದೆ. ಕಾಂಗ್ರೆಸ್ ತನ್ನ ಸ್ಥಾನ ಉಳಿಸಿಕೊಳ್ಳಲು ಬಿರುಸಿನ ಪ್ರಚಾರ ಕೈಗೊಂಡಿದ್ದು, ಖುದ್ದು ಮಾಜಿ ಸಚಿವ ರಮಾನಾಥ ರೈ ಅವರೇ ನೇತೃತ್ವ ವಹಿಸಿಕೊಂಡಿದ್ದಾರೆ. ಬಿಜೆಪಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತೃತ್ವದಲ್ಲಿ ಪ್ರಚಾರ ನಡೆದಿದೆ.

ಪುರಸಭೆಯಲ್ಲಿ 32 ಮತಗಟ್ಟೆಗಳಿದ್ದು, ಇವುಗಳಲ್ಲಿ 14 ಅತೀಸೂಕ್ಷ್ಮವಾದರೆ, 18 ಸೂಕ್ಷ್ಮ. ಅಂದರೆ ಒಂದೋ ಸೂಕ್ಷ್ಮ, ಇಲ್ಲವೆ ಅತೀಸೂಕ್ಷ್ಮ.

ಕಣದಲ್ಲಿರುವ ಅಭ್ಯರ್ಥಿಗಳು ಮತ್ತು ಮತಗಟ್ಟೆಗಳ ವಿವರ ಇಲ್ಲಿದೆ.

ವಾರ್ಡ್ 1 ಲೊರೆಟ್ಟೊಪದವು:  ಬಿ.ವಾಸುಪೂಜಾರಿ (ಕಾಂಗ್ರೆಸ್), ಚಂದ್ರಶೇಖರ ಪೂಜಾರಿ (ಬಿಜೆಪಿ), ರಿಯಾಝ್ ಲೊರೆಟ್ಟೊಪದವು (ಎಸ್.ಡಿ.ಪಿ.) ಅಭ್ಯರ್ಥಿಗಳು. ಕ್ತಿಸ್ತಜ್ಯೋತಿ ಪ್ರೌಢಶಾಲೆ, ಅಗ್ರಾರ್ ನಲ್ಲಿ ಎರಡು ಮತಗಟ್ಟೆಗಳು ಈ ವಾರ್ಡಿಗೆ ಬರುತ್ತಿದ್ದು, ಎರಡೂ ಸೂಕ್ಷ್ಮ ಮತಗಟ್ಟೆಗಳಾಗಿವೆ.

ವಾರ್ಡ್ 2 ಮಂಡಾಡಿ: ಅಭ್ಯರ್ಥಿಗಳು ಇವರು. ಗಂಗಾಧರ ಪೂಜಾರಿ ಮಂಡಾಡಿ (ಕಾಂಗ್ರೆಸ್), ಬಿ.ದಿನೇಶ ಭಂಡಾರಿ (ಬಿಜೆಪಿ) ಮಂಡಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆ ಸೂಕ್ಷ್ಮವೆನಿಸಿದೆ.

ವಾರ್ಡ್3 ಮಣಿ: ಅಭ್ಯರ್ಥಿಗಳು ಇವರು. ಹೇಮಾವತಿ (ಕಾಂಗ್ರೆಸ್), ಮೀನಾಕ್ಷೀ ಜೆ ಗೌಡ (ಬಿಜೆಪಿ). ಹಿಂದುಳಿದ ವರ್ಗ (ಬಿ)

ಅಗ್ರಾರ್ ಚರ್ಚ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಎರಡು ಸೂಕ್ಷ್ಮ ಮತಗಟ್ಟೆಗಳು ಬಂಟ್ವಾಳ ಕಸ್ಬಾ 3ನೇ ವಾರ್ಡ್ ಗೆ ಒಳಗೊಂಡಿದೆ.

ವಾರ್ಡ್ 4 ಕಾಲೇಜು ರಸ್ತೆ:  ಪ್ರತಿಮಾ ರವಿ ಕುಮಾರ್ (ಕಾಂಗ್ರೆಸ್), ರೇಖಾ ರಮಾನಾಥ ಪೈ (ಬಿಜೆಪಿ) ಅಭ್ಯರ್ಥಿಗಳು. ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆಯಲ್ಲಿರುವ ಅತೀ ಸೂಕ್ಷ್ಮ ಮತಗಟ್ಟೆ.

ವಾರ್ಡ್ 5 ಜಕ್ರಿಬೆಟ್ಟು: ಜನಾರ್ಧನ ಚೆಂಡ್ತಿಮಾರ್ (ಕಾಂಗ್ರೆಸ್), ವಿಶ್ವನಾಥ ಚಂಡ್ತಿಮಾರ್ (ಬಿಜೆಪಿ) ಅಭ್ಯರ್ಥಿಗಳು. ಜಕ್ರಿಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಮತಗಟ್ಟೆ ಇದೆ. ಇದೂ ಸೂಕ್ಷ್ಮ ಮತಗಟ್ಟೆ.

ವಾರ್ಡ್ 6 ಹೊಸ್ಮರ್ : ಜಯಂತಿ ಸೋಮಪ್ಪ ಪೂಜಾರಿ (ಕಾಂಗ್ರೆಸ್), ದೇವಕಿ ಶಿವಪ್ಪ ಪೂಜಾರಿ (ಬಿಜೆಪಿ) ಅಭ್ಯರ್ಥಿಗಳು. ಈ ವಾರ್ಡ ಅತಿಸೂಕ್ಷ್ಮ ಮತಗಟ್ಟೆಯನ್ನು ಹೊಂದಿದೆ. ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆಯಿದು.

ವಾರ್ಡ್ 7 ಬಂಟ್ವಾಳ ಪೇಟೆ: ಧನವಂತಿ ಮಹಾಬಲ ಬಂಗೇರ (ಕಾಂಗ್ರೆಸ್), ಶಶಿಕಲಾ ಪ್ರಭಾಕರ್ (ಬಿಜೆಪಿ) ಅಭ್ಯರ್ಥಿಗಳು. ಎಸ್.ವಿ.ಎಸ್.ದೇವಳ ಕನ್ನಡ ಮಾಧ್ಯಮ ಶಾಲೆಯ ಮತಗಟ್ಟೆಯೂ ಅತೀಸೂಕ್ಷ್ಮ.

ವಾರ್ಡ್ 8 ಕೆಳಗಿನಪೇಟೆ: ಮೊಹಮ್ಮದ್ ಸಗೀರ್ ಬಿ.ಎಲ್ (ಕಾಂಗ್ರೆಸ್), ಮುನೀಶ್ ಅಲಿ ಮಹಮ್ಮದ್ (ಎಸ್.ಡಿ.ಪಿ.ಐ.), ಉಮರಬ್ಬ (ಬಿಜೆಪಿ), ಹಾರೂನ್ ರಶೀದ್ (ಜೆಡಿಎಸ್) ಅಭ್ಯರ್ಥಿಗಳು. ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆಯಾದ ಇದೂ ಅತೀ ಸೂಕ್ಷ್ಮ.

ವಾರ್ಡ್ 9 ಭಂಡಾರಿಬೆಟ್ಟು: ಜಗದೀಶ್ ಕುಂದರ್ (ಕಾಂಗ್ರೆಸ್), ಹರಿಪ್ರಸಾದ್ (ಬಿಜೆಪಿ)  ಅಭ್ಯರ್ಥಿಗಳು. ಭಂಡಾರಿಬೆಟ್ಟುವಿನಲ್ಲಿರುವ ಶ್ರೀ ವೆಂಕಟರಮಣ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯ ದಕ್ಷಿಣ ಭಾಗದ ಮತಗಟ್ಟೆ 9ನೇ ವಾರ್ಡಿನ ಮತಗಟ್ಟೆ.

ವಾರ್ಡ್ 10 ಕಾಮಾಜೆ: ವನಜಾಕ್ಷಿ ಬಿ. ಶೇಖರ (ಸಿಪಿಐ – ಕಾಂಗ್ರೆಸ್ ಬೆಂಬಲಿತ), ಶೋಭಾ ಹರಿಶ್ಚಂದ್ರ (ಬಿಜೆಪಿ) ಅಭ್ಯರ್ಥಿಗಳು. ಭಂಡಾರಿಬೆಟ್ಟುವಿನಲ್ಲಿರುವ ಶ್ರೀ ವೆಂಕಟರಮಣ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಭಾಗದ ಮತಗಟ್ಟೆ 10ನೇ ವಾರ್ಡಿನ ಮತಗಟ್ಟೆ.

ವಾರ್ಡ್ 11 ಸಂಚಯಗಿರಿ: ಸುಜಾತ ಎಸ್.ಅಮೀನ್ (ಕಾಂಗ್ರೆಸ್), ಜಯಂತಿ ವಸಂತ ಕುಲಾಲ್ (ಬಿಜೆಪಿ) ಅಭ್ಯರ್ಥಿಗಳು. ಮೊಡಂಕಾಪು ಕಾರ್ಮೆಲ್ ಸಂಯುಕ್ತ ಪದವಿಪೂರ್ವ ಕಾಲೇಜುವಿನ ದಕ್ಷಿಣ ಭಾಗದ ಮತಗಟ್ಟೆ ಈ ವಾರ್ಡಿಗಿದೆ. ಈ ಮತಗಟ್ಟೆಯೂ ಸೂಕ್ಷ್ಮ ಮತಗಟ್ಟೆ.

ವಾರ್ಡ್ 12 ಅಜ್ಜಿಬೆಟ್ಟು: ವಸಂತಿ (ಜೆಡಿಎಸ್ – ಕಾಂಗ್ರೆಸ್ ಬೆಂಬಲಿತ), ವಿದ್ಯಾವತಿ ಪ್ರಮೋದ್ ಕುಮಾರ್ (ಬಿಜೆಪಿ) ಅಭ್ಯರ್ಥಿಗಳು. ದ.ಕ.ಜಿ.ಪಂ.ಹಿ.ಪ್ರಾ.ಶಾಲೆ, ಬಿ.ಮೂಡದ ದಕ್ಷಿಣ ಭಾಗದಲ್ಲಿರುವ ಮತಗಟ್ಟೆ  ಅತೀಸೂಕ್ಷ್ಮ ಮತಗಟ್ಟೆ.

ವಾರ್ಡ್ 13 ಗೂಡಿನಬಳಿ: ನೆಫಿಸಾ ಹನೀಫ್ (ಕಾಂಗ್ರೆಸ್), ಸಂಶದ್  (ಎಸ್.ಡಿ.ಪಿ.ಐ), ಕೌಸರ್ ಬಾನು (ಬಿಜೆಪಿ) ಅಭ್ಯರ್ಥಿಗಳು. ಗೂಡಿನಬಳಿಯ ಹಯಾತುಲ್ ಇಸ್ಲಾಂ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಅತೀಸೂಕ್ಷ್ಮ ಮತಗಟ್ಟೆ.

ವಾರ್ಡ್ 14 ಜೋಡುಮಾರ್ಗ-ಕೈಕುಂಜೆ: ಕೆ ಸುಗುಣ ಕಿಣಿ (ಬಿಜೆಪಿ),  ಶೆಹನಾಝ್ ರಹೀಂ (ಕಾಂಗ್ರೆಸ್), ಝೀನತ್ ಫಿರೋಜ್ (ಎಸ್.ಡಿ.ಪಿ.ಐ.), ಅಭ್ಯರ್ಥಿಗಳು. ಈ ವಾರ್ಡಿನ ಎಪಿಎಂಸಿ ಕಚೇರಿ ಜೋಡುಮಾರ್ಗ ಮತಗಟ್ಟೆ ಅತೀಸೂಕ್ಷ್ಮವಾದರೆ, ಪಕ್ಕದಲ್ಲೇ ಇರುವ ಅಂಗನವಾಡಿ ಕೇಂದ್ರ ಕೈಕುಂಜ ಸೂಕ್ಷ್ಮ ಮತಗಟ್ಟೆ ಎಂದು ಹೆಸರಿಸಲಾಗಿದೆ.

ವಾರ್ಡ್ 15 ಎಪಿಎಂಸಿ – ಕೈಕುಂಜೆ: ಅರ್ಲ ಗೋವಿಂದ ಪ್ರಭು (ಬಿಜೆಪಿ) , ಲೋಕೇಶ್ ಸುವರ್ಣ (ಕಾಂಗ್ರೆಸ್), ಅಭ್ಯರ್ಥಿಗಳು. ಈ ವಾರ್ಡಿಗೆ ಅಜ್ಜಿಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನ ಹೈಸ್ಕೂಲು ವಿಭಾಗದ ಪೂರ್ವಭಾಗದ ಮತಗಟ್ಟೆ ಇದೆ. ಅತೀಸೂಕ್ಷ್ಮ ಮತಗಟ್ಟೆ.

ವಾರ್ಡ್ 16 ನಂದರಬೆಟ್ಟು: ಮುಹಮ್ಮದ್ ನಂದರಬೆಟ್ಟು (ಕಾಂಗ್ರೆಸ್), ಶಾಹುಲ್ ಹಮೀದ್ ಎಸ್.ಎಚ್ (ಎಸ್.ಡಿ.ಪಿ.ಐ.), ಸಲಿಮ್ (ಬಿಜೆಪಿ) ಅಭ್ಯರ್ಥಿಗಳು. ಸರಕಾರಿ ಪದವಿಪೂರ್ವ ಕಾಲೇಜು ಹೈಸ್ಕೂಲ್ ವಿಭಾಗ ಅಜ್ಜಿಬೆಟ್ಟಿನ ಬಿ.ಮೂಡ ಪೂರ್ವ ಭಾಗದ ಮತಗಟ್ಟೆ ಅತೀಸೂಕ್ಷ್ಮ.

ವಾರ್ಡ್ 17 ಪರ್ಲಿಯಾ: ಅಬ್ದುಲ್ ಖಾದರ್ ಇಕ್ಬಾಲ್ (ಪಕ್ಷೇತರ), ಲುಕ್ಮಾನ್ (ಕಾಂಗ್ರೆಸ್), ಮಹಮ್ಮದ್ ಇಕ್ಬಾಲ್ ಮದ್ದಾ (ಎಸ್.ಡಿ.ಪಿ.ಐ.), ಅನಂತ ಕೃಷ್ಣ ನಾಯಕ್ (ಬಿಜೆಪಿ), ಅಭ್ಯರ್ಥಿಗಳು. ಕೊಡಂಗೆ ಶಾಲೆಯ ಮತಗಟ್ಟೆ ಅತೀಸೂಕ್ಷ್ಮ ಮತಗಟ್ಟೆ.

ವಾರ್ಡ್ 18 ಶಾಂತಿ ಅಂಗಡಿ: ಹಸೈನಾರ್ (ಕಾಂಗ್ರೆಸ್), ಬಶೀರ್ ಪಲ್ಲ (ಎಸ್.ಡಿ.ಪಿ.ಐ.), ಮಹೇಶ ಶೆಟ್ಟಿ(ಬಿಜೆಪಿ) ಅಭ್ಯರ್ಥಿಗಳು. ಬಿ.ಮೂಡ ದ.ಕ.ಜಿಪಂ ಹಿ.ಪ್ರಾ.ಶಾಲೆ ಕೊಡಂಗೆ ಮತಗಟ್ಟೆ ಅತೀಸೂಕ್ಷ್ಮ

ವಾರ್ಡ್ 19 ಅದ್ದೇಡಿ ಮುಹಮ್ಮದ್ ಶರೀಫ್ (ಕಾಂಗ್ರೆಸ್), ಇಸಾಕ್ ಶಾಂತಿಯಂಗಡಿ (ಎಸ್.ಡಿ.ಪಿ.ಐ.), ಶೇಕ್ ಶಾಹಿದ್ ಹುಸೇನ್ (ಬಿಜೆಪಿ) ಅಭ್ಯರ್ಥಿಗಳು. ದ.ಕ.ಜಿಪಂ ಹಿ.ಪ್ರಾ.ಶಾಲೆ ಕೊಡಂಗೆ ಬಿ.ಮೂಡದಲ್ಲಿರುವ ಮತಗಟ್ಟೆ ಅತೀಸೂಕ್ಷ್ಮ.

ವಾರ್ಡ್ 20 ಮೊಡಂಕಾಪು: ಲೋಲಾಕ್ಷ ಶೆಟ್ಟಿ (ಕಾಂಗ್ರೆಸ್), ಲತೀಫ್ ಕೆ.ಚ್ (ಎಸ್.ಡಿ.ಪಿ.ಐ.), ಎಂ. ಸತೀಶ್ ಶೆಟ್ಟಿ        (ಬಿಜೆಪಿ) ಅಭ್ಯರ್ಥಿಗಳು. ದೀಪಿಕಾ ಪ್ರೌಢಶಾಲೆ ಮೊಡಂಕಾಪು ಸೂಕ್ಷ್ಮ ಮತಗಟ್ಟೆ ಎಂಬ ಹಣೆಪಟ್ಟಿ ಇದೆ.

ವಾರ್ಡ್ 21 ತಲಪಾಡಿ: ರಾಮಕೃಷ್ಣ ಆಳ್ವ (ಕಾಂಗ್ರೆಸ್), ರಾಮಣ್ಣ ಶೆಟ್ಟಿ (ಎಸ್.ಡಿ.ಪಿ.ಐ.), ಪುಷ್ಪರಾಜ್ ಶೆಟ್ಟಿ (ಬಿಜೆಪಿ), ಅಭ್ಯರ್ಥಿಗಳು. ಇಲ್ಲಿ ಎರಡು ಮತಗಟ್ಟೆಗಳಿವೆ. ದೀಪಿಕಾ ಹೈಸ್ಕೂಲು ಮೊಡಂಕಾಪು ದ.ಭಾಗದಲ್ಲಿ ಉತ್ತರ ಭಾಗ ಎಂದು ವಿಂಗಡಿಸಲಾಗಿದ್ದು, ಎರಡೂ ಸೂಕ್ಷ್ಮ ಮತಗಟ್ಟೆಗಳು.

ವಾರ್ಡ್ 22 ಪಲ್ಲಮಜಲು: ನಳಿನಾಕ್ಷಿ ಆನಂದ ಕುಲಾಲ್ (ಕಾಂಗ್ರೆಸ್), ಚೈತನ್ಯ ಎ.ದಾಸ್ (ಬಿಜೆಪಿ), ಅಭ್ಯರ್ಥಿಗಳು. ಬಿ.ಮೂಡ ಪಲ್ಲಮಜಲು ಶಾಲೆಯ ಮತಗಟ್ಟೆಯನ್ನು ಹೊಂದಿರುವ ಈ ಮತಗಟ್ಟೆ ಅತೀಸೂಕ್ಷ್ಮ ಎಂದು ಪರಿಗಣಿಸಿದೆ.

ವಾರ್ಡ್ 23 ಜೈನರಪೇಟೆ: ಮುಹಮ್ಮದ್ ನಿಸಾರ್ (ಕಾಂಗ್ರೆಸ್), ಇದ್ರೀಸ್ ಪಿ.ಜೆ (ಎಸ್.ಡಿ.ಪಿ.ಐ.), ಲಕ್ಷಣ್ ರಾಜ್ ಪಿ.ವಿ (ಬಿಜೆಪಿ), ಶಫೀಕ್ (ಜೆಡಿಎಸ್), ಅಭ್ಯರ್ಥಿಗಳು. ಪಾಣೆಮಂಗಳೂರು ಪೇಟೆ ದ.ಕ.ಜಿಪಂ ಹಿ.ಪ್ರಾ.ಶಾಲೆ ಸೂಕ್ಷ್ಮ ಮತಗಟ್ಟೆ ಇದು.

ವಾರ್ಡ್ 24 ಆಲಡ್ಕ: ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ (ಕಾಂಗ್ರೆಸ್), ಯೂಸುಫ್ ಆಲಡ್ಕ (ಎಸ್.ಡಿ.ಪಿ.ಐ.), ಜಿ ಜಿ. ಮೊಹಮ್ಮದ್ (ಬಿಜೆಪಿ), ಮಹಮ್ಮದ್ ಅಮಾನುಲ್ಲಾ (ಜೆಡಿಎಸ್), ಅಭ್ಯರ್ಥಿಗಳು. ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಅತಿಸೂಕ್ಷ್ಮ ಮತಗಟ್ಟೆ ಇದೆ.

ವಾರ್ಡ್ 25 ಬೋಳಂಗಡಿ: ಜೆಸಿಂತಾ ಡಿಸೋಜ (ಕಾಂಗ್ರೆಸ್), ಯಶೋಧ ಜಗನ್ನಾಥ (ಬಿಜೆಪಿ), ಬಿ.ಎಸ್. ಖೈರುನ್ನೀಸ (ಜೆಡಿಎಸ್), ಅಭ್ಯರ್ಥಿಗಳು. ಬೋಳಂಗಡಿ ಹಿ.ಪ್ರಾ.ಶಾಲೆಯಲ್ಲಿ ಸೂಕ್ಷ್ಮ ಮತಗಟ್ಟೆ ಈ ವಾರ್ಡಿಗಿದೆ.

ವಾರ್ಡ್ 26 ಮೆಲ್ಕಾರ್: ಗಾಯತ್ರಿ ಪ್ರಕಾಶ್ (ಕಾಂಗ್ರೆಸ್), ಉಷಾಲತಾ ಉಮೇಶ (ಬಿಜೆಪಿ), ಅಭ್ಯರ್ಥಿಗಳು. ಬೋಳಂಗಡಿ ಶಾಲೆಯಲ್ಲಿ ಸೂಕ್ಷ್ಮ ಮತಗಟ್ಟೆ

 ವಾರ್ಡ್ 27 ಬೊಂಡಾಲ: ಸುರೇಶ್ ನಾಯ್ಕ (ಕಾಂಗ್ರೆಸ್), ಜಯರಾಮ ನಾಯ್ಕ (ಬಿಜೆಪಿ). ಅಭ್ಯರ್ಥಿಗಳು. ಈ ವಾರ್ಡಿಗೆ ಬೊಂಡಾಲ ಹಿ.ಪ್ರಾ.ಶಾಲೆಯಲ್ಲಿ ಎರಡು ಮತಗಟ್ಟೆಗಳಿವೆ. ಎರಡೂ ಸೂಕ್ಷ್ಮ ಮತಗಟ್ಟೆಗಳು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts