ನಿಮ್ಮ ಧ್ವನಿ

ಓಟು ಹಾಕುವ ಮುನ್ನ ನೀವು ಏನು ಮಾಡಬೇಕು?

ಮತ್ತೆ ಸ್ಥಳೀಯ ಸಂಸ್ಥೆಗಳಿಗೆ ದಿನಾಂಕ 31.08.18ರಂದು ಚುನಾವಣೆ ನಡೆಯುತ್ತಿದೆ, ಪಕ್ಷದ ನೆಲೆಯಿಂದ ಅಭ್ಯರ್ಥಿಗಳು ನಿಮ್ಮ ಮನೆ ಬಾಗಿಲಿಗೆ ಮತ‌ಭಿಕ್ಷೆಗಾಗಿ ದೌಡಾಯಿಸುತ್ತಿದ್ದಾರೆ. ಆದರೆ, ಯಾರ ಕುರಿತೂ ಅನುಕಂಪ ಬೇಡ, ಭಾವುಕತನ ಬೇಡ. ನಮಗೆ ಬೇಕಾಗಿರುವುದು ಅಭಿವೃದ್ಧಿ ಅಭಿವೃದ್ಧಿ ಅಭಿವೃದ್ಧಿ.
ಹಾಗಾದರೆ ನೀವು ಮಾಡಬೇಕಾದುದೇನು?

ಈ ಕುರಿತು ಬಂಟ್ವಾಳ ಜೋಡುಮಾರ್ಗ ಕೈಕಂಬದ  ಸರಿದಂತರ ಪ್ರಕಾಶನ ಈ ಸಲಹೆಗಳನ್ನು ನೀಡಿದೆ. ಪ್ರೊ. ರಾಜಮಣಿ ರಾಮಕುಂಜ ಅವರು ಪ್ರಕಾಶನದ ರೂವಾರಿ.

  1. ಜಾತಿ, ಮತವನ್ನು ಮೀರಿದ ಉತ್ತಮ ವ್ಯಕ್ತಿ
  2. ಶುದ್ಧ ಚಾರಿತ್ರ್ಯವಂತ
  3. ಮತದಾರರೊಂದಿಗೆ ನಿರಂತರ ಸಂಪರ್ಕ ಇರಿಸಿಕೊಳ್ಳುವ
  4. ನಮ್ಮ ಅಹವಾಲುಗಳಿಗೆ ತಕ್ಷಣ ಸ್ಪಂದಿಸುವ
  5. ತಿಂಗಳಿಗೆ ಒಂದು ಸಲವಾದರೂ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಖುದ್ದಾಗಿ ಅರಿತುಕೊಳ್ಳುವ
  6. ಅಧಿಕಾರವನ್ನು ಸೇವೆಗಾಗಿ ಇರುವ ಅವಕಾಶ ಎಂದು ಭಾವಿಸುವ
  7. ಮತದಾರರೇ ಪ್ರಭುಗಳು, ನಾವು ಸೇವಕರು ಎಂದು ಭಾವಿಸುವ
  8. ಪ್ಲಾಸ್ಟಿಕ್ ಮುಕ್ತ ಹಾಗೂ ಸ್ವಚ್ಛ ಬಂಟ್ವಾಳದ ಕಲ್ಪನೆಯನ್ನು ಸಾಕಾರಗೊಳಿಸುವ

ಅಭ್ಯರ್ಥಿಗಳನ್ನೇ ಆರಿಸಿ.

  • ಈ ಹಿಂದಿನ ಅನುಭವಗಳೊಂದಿಗೆ ನಿಮ್ಮ ಅಭ್ಯರ್ಥಿಯನ್ನು ತೂಗಿ ನೋಡಿ ಮತದಾನ ಮಾಡಿ.
  • ಒದಗಿ ಬರುವ ಸೌಲಭ್ಯಗಳನ್ನು ದುರುಪಯೋಗಪಡಿಸುವ ಅಥವಾ ತಮ್ಮಸ್ವಾರ್ಥಕ್ಕೆ ಮತ್ತು ಸ್ವಹಿತಕ್ಕೆ ಬಳಸಿಕೊಳ್ಳುವವರು ಬೇಡವೇ ಬೇಡ.
  • ಸಣ್ಣ ಪುಟ್ಟ ಕೆಲಸಗಳಿಗೂ ತಮ್ಮ ಫೊಟೊ ಸಮೇತ ಅಭಿನಂದನಾ ಪ್ಲೆಕ್ಸ್ ಹಾಕಿಕೊಳ್ಳುವವರು ಬೇಕಾಗಿಯೇ ಇಲ್ಲ, ಯಾಕಂದ್ರೆ, ಅದು ನಮ್ಮ ತೆರಿಗೆಯ ಹಣ, ಕೆಲಸ ಮಾಡಿಸಬೇಕಾಗಿರುವುದು ಅವರ ಜವಾಬ್ದಾರಿ.
  • ನೀವು ನೀಡುವ ಒಂದೊಂದು ಮತಗಳೂ ಕೂಡ ನಿಮ್ಮ ತೆರಿಗೆಯ ಹಣದ ರಕ್ಷಣೆಗಾಗಿ, ಅದರ ಸದುಪಯೋಗಕ್ಕಾಗಿ, ಸಮರ್ಥ ಅಭ್ಯರ್ಥಿಗಾಗಿ, ನಿಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ.
  • ಮತದಾನ ನಿಮ್ಮ ಹಕ್ಕು, ಕಡ್ಡಾಯವಾಗಿ ಮತದಾನ ಮಾಡಿ.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts