ಮಹಾ ಮಾನವತವಾದಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮದಿನಾಚರಣೆಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು ಎಂದು ಎರಡು ವರ್ಷಗಳ ಹಿಂದೆ ಸರಕಾರ ಆದೇಶಿಸಿದ್ದರೂ ಬಂಟ್ವಾಳ ತಾಲೂಕಾಡಳಿತ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದಮಾಜಿ ಸಚಿವ ಬಿ.ರಮಾನಾಥ ರೈ, ಇದು ದಿನಾಂಕ ನಿಗದಿಪಡಿಸಿ ಆಚರಿಸುವ ಕಾರ್ಯಕ್ರಮವಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಡ ತಂದ ಕಾರಣ ರಾಜ್ಯಾದ್ಯಂತ ಬ್ರಹ್ಮಶ್ರೀ ನಾರಾಯಣ ಗುರುಗಳ ದಿನಾಚರಣೆಯನ್ನು ಬಂಟ್ವಾಳ ತಾಲೂಕಿನ ಸಜೀಪಮೂಡದಲ್ಲೇ ಘೋಷಣೆ ಮಾಡಿದ್ದರು. ಆದರೆ ಬಂಟ್ವಾಳದಲ್ಲೇ ಜಯಂತಿ ಆಚರಿಸಿಲ್ಲ. ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದು ಸಮುದಾಯಕ್ಕೆ ಸೀಮಿತರಾದ ವ್ಯಕ್ತಿತ್ವವಲ್ಲ ಎಂದರು.
ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್. ಪದ್ಮಶೇಖರ ಜೈನ್, ಮಮತಾಗಟ್ಟಿ, ಮಂಜುಳಾ ಮಾವೆ, ಬೇಬಿ ಕುಂದರ್, ಮಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ ಮತ್ತಿತರ ಕಾಂಗ್ರೆಸ್ ಮುಖಂಡರು ಹಾಜರಿದ್ದರು.