ಪಾಣೆಮಂಗಳೂರಿನ ಶೇಡಿಗುರಿ ಶಾಖೆಯಲ್ಲಿ ಆರೆಸ್ಸೆಸ್ ವತಿಯಿಂದ ಭಾನುವಾರ ರಕ್ಷಾಬಂಧನ ಉತ್ಸವ ನಡೆಯಿತು.
ಈ ಸಂದರ್ಭ ಸಂಘದ ಸ್ಚಯಂ ಸೇವಕ ಸುರೇಶ್ ಕುಲಾಲ್ ಬೌದ್ಧಿಕ್ ನೀಡಿ, ಜಾತಿ, ಮತ ,ಪಂಥ, ಪ್ರಾಂತ, ವರ್ಗ ,ವರ್ಣವನ್ನು ಮೀರಿ ಬದುಕುವುದೇ ಸಂಘ ಕಲಿಸಿದ ಶಿಕ್ಷಣ .ಸಂಘದ ಶಿಕ್ಷಕ ಒಬ್ಬ ಸೈನಿಕರಿದ್ದಂತೆ. ಎಂತಹ ಸಂದರ್ಭದಲ್ಲೂ ದೇಶ ಸೇವೆಗೆ, ಸಮಾಜ ಸೇವೆಗೆ ಬದ್ದ, ಯಾವುದೇ ಎಡರುತೊಡರು ಬಂದರೂ ಅವನು ಹಿಂಜರಿಯುದೇ ಪ್ರಾಣವನ್ನು ಮುಡಿಪಾಗಿಟ್ಟು ಹೋರಾಟ ಮಾಡುತ್ತಾನೆ. ರಕ್ಷಾ ಬಂಧನ ಆಚರಿಸುವ ಮೂಲಕ ಸಹೋದರತೆಯನ್ನು, ಸಮಾನತೆಯನ್ನು, ಬಂಧುತ್ವವನ್ನು ,ಹಿಂದುತ್ವವನ್ನು, ನಾವು ಸಮಾಜಕ್ಕೆ ಸಾರುತ್ತಿದ್ದೇವೆ .ಭಾರತ ವಿಶ್ವ ಗುರುವಾಗಬೇಕು ಎಂದು ಹಿರಿಯವರ ಕನಸು , ನನಸು ಮಾಡಲು ಯುವಕರ ಮನಸ್ಸು ಒಂದಾಗಬೇಕು ಎಂದು ಹೇಳಿದರು..ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಕಾರ್ಯಕ್ರಮ ನಿರೂಪಿಸಿದರು .