ಕಲ್ಲಡ್ಕ

ಸಂತ್ರಸ್ತ ವಿದ್ಯಾರ್ಥಿಗಳ ದತ್ತು ಸ್ವೀಕರಿಸಿ ವಿದ್ಯಾದಾನ: ಡಾ. ಕಲ್ಲಡ್ಕ ಪ್ರಭಾಕರ ಭಟ್

ಇತ್ತೀಚೆಗೆ ಸಂಭವಿಸಿದ ಭಾರಿ ಮಳೆಯ ಕಾರಣಕ್ಕೆ ನೆರೆ ಹಾಗೂ ಭೂಕುಸಿತದಿಂದ ತತ್ತರಿಸಿ ಹೋಗಿರುವ ಕೇರಳ ಮತ್ತು ಕೊಡವರ ಬಾಳು ದುಸ್ತರವಾಗಿದೆ. ಸಂತ್ರಸ್ತಗೊಂಡವರ ಪೈಕಿ ೫ನೇ ತರಗತಿ ಮೇಲ್ಪಟ್ಟ ಯಾವುದೇ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ನಮ್ಮ ಸಂಸ್ಥೆ ದತ್ತು ತೆಗೆದುಕೊಂಡು ವಿದ್ಯಾಭ್ಯಾಸ ನೀಡಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಘೋಷಿಸಿದರು.

ಜಾಹೀರಾತು

ಸಂತ್ರಸ್ತರಿಗೆ ಸಂಗ್ರಹಿಸಿದ ನಿಧಿಯನ್ನು ಪದಾಧಿಕಾರಿಗಳ ಮೂಲಕ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಪ್ರಯತ್ನ ಇಲ್ಲಿಗೆ ನಿಲ್ಲದೇ ಮುಂದಿನ ದಿನಗಳಲ್ಲಿ ಸ್ವತಃ ಸಂತ್ರಸ್ತರ ಬಳಿಗೆ ತೆರಳಿ ಸಹಕಾರ ನೀಡುವವರಾಗಬೇಕು ಎಂದು ಕರೆ ನೀಡಿದರು.

ಅವರುಗಳು ತಮ್ಮ ಸ್ವಂತ ಆಸ್ತಿ ಪಾಸ್ತಿ ಅಷ್ಟೇ ಅಲ್ಲದೇ ಅನೇಕ ಬಂಧು- ಭಾಂದವರನ್ನು ಕಣ್ಣೇದುರೇ ಕಳಕೊಳ್ಳುವ ಸ್ಥಿತಿ ಎಲ್ಲರನ್ನು ಕಂಗೆಡಿಸಿದೆ. ಇದು ಕೇವಲ ಸಹಾನುಭೂತಿಯಾಗಿ ಉಳಿಯದೇ ವಿವಿಧ ರೀತಿಯ ಆರ್ಥಿಕ ಸ್ಪಂದನೆಯ ಮೂಲಕ ಸಂತ್ರಸ್ತರಿಗೆ ನೆರವಾಗಬೇಕು. ಇದಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ನೀಡುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಬದಲಾಗಿ ನಾವು ನಮ್ಮ ದೈನಂದಿನ ವ್ಯವಹರಗಳಲ್ಲಿ ಅನಗತ್ಯ ಖಚು ಮಾಡುವ ಮೊತ್ತವನ್ನು ನೀಡಿದರೂ ಅನೇಕರ ಕಣ್ಣೊರೆಸಲು ಸಾಧ್ಯ. ಅಂತಹ ಒಂದು ಪ್ರಾಮಾಣಿಕ ಪ್ರಯತ್ನ ಪದವಿ ವಿಭಾಗದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಕಡೆಯಿಂದ ನಡೆದಿರುವುದು ಶ್ಲಾಘನೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರತೀವರ್ಷ ಆಚರಿಸುವಂತೆ ಓಣಂ ಹಬ್ಬವನ್ನು ಆಚರಿಸಲಾಗಿತ್ತಾದರೂ ಕೇರಳ ಕೊಡಗಿನ ದುಸ್ಥಿತಿಯ ಕಾರಣಕ್ಕಾಗಿ ಯಾವುದೇ ಆಡಂಬರವಿರಲಿಲ್ಲ. ಲಕ್ಷ್ಮೀ ರಘುರಾಜ್ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ವಿದ್ಯಾರ್ಥಿಗಳು ಪೂಕಳಂ ಸ್ಪರ್ಧೆಯಲ್ಲಿ ಭಾಗವಹಿಸಿದರು. ಪ್ರೌಢಶಾಲಾ ಅಧ್ಯಾಪಕರಾದ ಜಿನ್ನಪ್ಪ, ವಿನೋದ್ ಹಾಗೂ ಪದವಿ ಪ್ರಾಚಾರ್ಯ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ  ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ನೇಹಾ ರಾಥೋರ್ ಸ್ವಾಗತಿಸಿ, ಅಕ್ಷತಾ ವಂದಿಸಿ, ಅನುಷಾ ಕಾರ್ಯಕ್ರಮವನ್ನು ನಿರೂಪಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.