ಬಂಟ್ವಾಳ

ಬಂಟ್ವಾಳ ಪುರಸಭೆ ಚುನಾವಣೆ: ಫೀಲ್ಡಿಗಿಳಿದಿವೆ ರಾಜಕೀಯ ಪಕ್ಷಗಳು

 ಆಗಸ್ಟ್ 31ರಂದು ನಡೆಯುವ ಪುರಸಭೆ ಚುನಾವಣೆ ಕಣದಲ್ಲಿ ಉಳಿದಿರುವ 71 ಮಂದಿ ಅಭ್ಯರ್ಥಿಗಳು ಗೆಲುವಿಗಾಗಿ ಕಾಲ್ನಡಿಗೆ ಆರಂಭಿಸಿದ್ದಾರೆ.  ಕಳೆದ ಆಡಳಿತ ಅವಧಿಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. 23 ಸ್ಥಾನಗಳಲ್ಲಿ 13 ಕಾಂಗ್ರೆಸ್ 5 ಬಿಜೆಪಿ,  3 ಎಸ್ ಡಿ ಪಿ ಐ,  1 ಜೆಡಿಎಸ್, 1 ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದರು.

ಜಾಹೀರಾತು

ಈ ಬಾರಿ ಬಿಜೆಪಿ ಎಲ್ಲ 27 ಕ್ಷೇತ್ರಗಳಲ್ಲೂ ಸ್ಪರ್ಧೆಗಿಳಿದಿದೆ. 12 ವಾರ್ಡ್‌ಗಳಲ್ಲಿ ಎಸ್‌ಡಿಪಿ ಸ್ಪರ್ಧೆ ನಡೆಸುತ್ತಿದೆ. ಕಾಂಗ್ರೆಸ್ 25ರಲ್ಲಿ ಸ್ಪರ್ಧೆಗಿಳಿದು, ಜೆಡಿಎಸ್, ಸಿಪಿಐಗೆ ತಲಾ ಒಂದು ಕ್ಷೇತ್ರದಲ್ಲಿ ಬೆಂಬಲ ಸೂಚಿಸಿದೆ. ಜೆಡಿಎಸ್ 5 ಕ್ಷೇತ್ರಗಳಲ್ಲಿ ಕಣದಲ್ಲಿದೆ.

ಕಣದಲ್ಲಿರುವವರು ಇವರು:

ವಾರ್ಡ್ 1 ಲೊರೆಟ್ಟೊಪದವು: ಬಿ.ವಾಸುಪೂಜಾರಿ (ಕಾಂಗ್ರೆಸ್), ಚಂದ್ರಶೇಖರ ಪೂಜಾರಿ (ಬಿಜೆಪಿ), ರಿಯಾಝ್ ಲೊರೆಟ್ಟೊಪದವು (ಎಸ್.ಡಿ.ಪಿ.ಐ)

ವಾರ್ಡ್ 2 ಮಂಡಾಡಿ: ಗಂಗಾಧರ ಪೂಜಾರಿ ಮಂಡಾಡಿ (ಕಾಂಗ್ರೆಸ್), ಬಿ.ದಿನೇಶ ಭಂಡಾರಿ (ಬಿಜೆಪಿ)

ವಾರ್ಡ್3 ಮಣಿ: ಹೇಮಾವತಿ (ಕಾಂಗ್ರೆಸ್), ಮೀನಾಕ್ಷೀ ಜೆ ಗೌಡ (ಬಿಜೆಪಿ)

ವಾರ್ಡ್ 4 ಕಾಲೇಜು ರಸ್ತೆ:  ಪ್ರತಿಮಾ ರವಿ ಕುಮಾರ್ (ಕಾಂಗ್ರೆಸ್), ರೇಖಾ ರಮಾನಾಥ ಪೈ (ಬಿಜೆಪಿ)

ವಾರ್ಡ್ 5 ಜಕ್ರಿಬೆಟ್ಟು: ಜನಾರ್ಧನ ಚೆಂಡ್ತಿಮಾರ್ (ಕಾಂಗ್ರೆಸ್), ವಿಶ್ವನಾಥ ಚಂಡ್ತಿಮಾರ್ (ಬಿಜೆಪಿ)

ವಾರ್ಡ್ 6 ಹೊಸ್ಮರ್ : ಜಯಂತಿ ಸೋಮಪ್ಪ ಪೂಜಾರಿ (ಕಾಂಗ್ರೆಸ್), ದೇವಕಿ ಶಿವಪ್ಪ ಪೂಜಾರಿ (ಬಿಜೆಪಿ)

ವಾರ್ಡ್ 7 ಬಂಟ್ವಾಳ ಪೇಟೆ: ಧನವಂತಿ ಮಹಾಬಲ ಬಂಗೇರ (ಕಾಂಗ್ರೆಸ್), ಶಶಿಕಲಾ ಪ್ರಭಾಕರ್ (ಬಿಜೆಪಿ)

ವಾರ್ಡ್ 8 ಕೆಳಗಿನಪೇಟೆ: ಮೊಹಮ್ಮದ್ ಸಗೀರ್ ಬಿ.ಎಲ್ (ಕಾಂಗ್ರೆಸ್), ಮುನೀಶ್ ಅಲಿ ಮಹಮ್ಮದ್ (ಎಸ್.ಡಿ.ಪಿ.ಐ.), ಉಮರಬ್ಬ (ಬಿಜೆಪಿ), ಹಾರೂನ್ ರಶೀದ್ (ಜೆಡಿಎಸ್)

ವಾರ್ಡ್ 9 ಭಂಡಾರಿಬೆಟ್ಟು: ಜಗದೀಶ್ ಕುಂದರ್ (ಕಾಂಗ್ರೆಸ್), ಹರಿಪ್ರಸಾದ್ (ಬಿಜೆಪಿ)

ವಾರ್ಡ್ 10 ಕಾಮಾಜೆ: ವನಜಾಕ್ಷಿ ಬಿ. ಶೇಖರ (ಸಿಪಿಐ – ಕಾಂಗ್ರೆಸ್ ಬೆಂಬಲಿತ), ಶೋಭಾ ಹರಿಶ್ಚಂದ್ರ (ಬಿಜೆಪಿ)

ವಾರ್ಡ್ 11 ಸಂಚಯಗಿರಿ: ಸುಜಾತ ಎಸ್.ಅಮೀನ್ (ಕಾಂಗ್ರೆಸ್), ಜಯಂತಿ ವಸಂತ ಕುಲಾಲ್ (ಬಿಜೆಪಿ)

ವಾರ್ಡ್ 12 ಅಜ್ಜಿಬೆಟ್ಟು: ವಸಂತಿ (ಜೆಡಿಎಸ್ – ಕಾಂಗ್ರೆಸ್ ಬೆಂಬಲಿತ), ವಿದ್ಯಾವತಿ ಪ್ರಮೋದ್ ಕುಮಾರ್ (ಬಿಜೆಪಿ)

ವಾರ್ಡ್ 13 ಗೂಡಿನಬಳಿ: ನೆಫಿಸಾ ಹನೀಫ್ (ಕಾಂಗ್ರೆಸ್), ಸಂಶದ್  (ಎಸ್.ಡಿ.ಪಿ.ಐ), ಕೌಸರ್ ಬಾನು (ಬಿಜೆಪಿ)

ವಾರ್ಡ್ 14 ಜೋಡುಮಾರ್ಗ-ಕೈಕುಂಜೆ: ಕೆ ಸುಗುಣ ಕಿಣಿ (ಬಿಜೆಪಿ),  ಶೆಹನಾಝ್ ರಹೀಂ (ಕಾಂಗ್ರೆಸ್), ಝೀನತ್ ಫಿರೋಜ್ (ಎಸ್.ಡಿ.ಪಿ.ಐ.),

ವಾರ್ಡ್ 15 ಎಪಿಎಂಸಿ – ಕೈಕುಂಜೆ: ಅರ್ಲ ಗೋವಿಂದ ಪ್ರಭು (ಬಿಜೆಪಿ) , ಲೋಕೇಶ್ ಸುವರ್ಣ (ಕಾಂಗ್ರೆಸ್),

ವಾರ್ಡ್ 16 ನಂದರಬೆಟ್ಟು: ಮುಹಮ್ಮದ್ ನಂದರಬೆಟ್ಟು (ಕಾಂಗ್ರೆಸ್), ಶಾಹುಲ್ ಹಮೀದ್ ಎಸ್.ಎಚ್ (ಎಸ್.ಡಿ.ಪಿ.ಐ.), ಸಲಿಮ್ (ಬಿಜೆಪಿ)

ವಾರ್ಡ್ 17 ಪರ್ಲಿಯಾ: ಅಬ್ದುಲ್ ಖಾದರ್ ಇಕ್ಬಾಲ್ (ಪಕ್ಷೇತರ), ಲುಕ್ಮಾನ್ (ಕಾಂಗ್ರೆಸ್), ಮಹಮ್ಮದ್ ಇಕ್ಬಾಲ್ ಮದ್ದಾ (ಎಸ್.ಡಿ.ಪಿ.ಐ.), ಅನಂತ ಕೃಷ್ಣ ನಾಯಕ್ (ಬಿಜೆಪಿ),

ವಾರ್ಡ್ 18 ಶಾಂತಿ ಅಂಗಡಿ: ಹಸೈನಾರ್ (ಕಾಂಗ್ರೆಸ್), ಬಶೀರ್ ಪಲ್ಲ (ಎಸ್.ಡಿ.ಪಿ.ಐ.), ಮಹೇಶ ಶೆಟ್ಟಿ(ಬಿಜೆಪಿ)       

ವಾರ್ಡ್ 19 ಅದ್ದೇಡಿ ಮುಹಮ್ಮದ್ ಶರೀಫ್ (ಕಾಂಗ್ರೆಸ್), ಇಸಾಕ್ ಶಾಂತಿಯಂಗಡಿ (ಎಸ್.ಡಿ.ಪಿ.ಐ.), ಶೇಕ್ ಶಾಹಿದ್ ಹುಸೇನ್ (ಬಿಜೆಪಿ)

ವಾರ್ಡ್ 20 ಮೊಡಂಕಾಪು: ಲೋಲಾಕ್ಷ ಶೆಟ್ಟಿ (ಕಾಂಗ್ರೆಸ್), ಲತೀಫ್ ಕೆ.ಚ್ (ಎಸ್.ಡಿ.ಪಿ.ಐ.), ಎಂ. ಸತೀಶ್ ಶೆಟ್ಟಿ        (ಬಿಜೆಪಿ)

ವಾರ್ಡ್ 21 ತಲಪಾಡಿ: ರಾಮಕೃಷ್ಣ ಆಳ್ವ (ಕಾಂಗ್ರೆಸ್), ರಾಮಣ್ಣ ಶೆಟ್ಟಿ (ಎಸ್.ಡಿ.ಪಿ.ಐ.), ಪುಷ್ಪರಾಜ್ ಶೆಟ್ಟಿ (ಬಿಜೆಪಿ)

ವಾರ್ಡ್ 22 ಪಲ್ಲಮಜಲು: ನಳಿನಾಕ್ಷಿ ಆನಂದ ಕುಲಾಲ್ (ಕಾಂಗ್ರೆಸ್), ಚೈತನ್ಯ ಎ.ದಾಸ್ (ಬಿಜೆಪಿ)

ವಾರ್ಡ್ 23 ಜೈನರಪೇಟೆ: ಮುಹಮ್ಮದ್ ನಿಸಾರ್ (ಕಾಂಗ್ರೆಸ್), ಇದ್ರೀಸ್ ಪಿ.ಜೆ (ಎಸ್.ಡಿ.ಪಿ.ಐ.), ಲಕ್ಷಣ್ ರಾಜ್ ಪಿ.ವಿ (ಬಿಜೆಪಿ), ಶಫೀಕ್ (ಜೆಡಿಎಸ್),

ವಾರ್ಡ್ 24 ಆಲಡ್ಕ: ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ (ಕಾಂಗ್ರೆಸ್), ಯೂಸುಫ್ ಆಲಡ್ಕ (ಎಸ್.ಡಿ.ಪಿ.ಐ.), ಜಿ ಜಿ. ಮೊಹಮ್ಮದ್ (ಬಿಜೆಪಿ), ಮಹಮ್ಮದ್ ಅಮಾನುಲ್ಲಾ (ಜೆಡಿಎಸ್),

ವಾರ್ಡ್ 25 ಬೋಳಂಗಡಿ: ಜೆಸಿಂತಾ ಡಿಸೋಜ (ಕಾಂಗ್ರೆಸ್), ಯಶೋಧ ಜಗನ್ನಾಥ (ಬಿಜೆಪಿ), ಬಿ.ಎಸ್. ಖೈರುನ್ನೀಸ (ಜೆಡಿಎಸ್)

ವಾರ್ಡ್ 26 ಮೆಲ್ಕಾರ್: ಗಾಯತ್ರಿ ಪ್ರಕಾಶ್ (ಕಾಂಗ್ರೆಸ್), ಉಷಾಲತಾ ಉಮೇಶ (ಬಿಜೆಪಿ)  

ವಾರ್ಡ್ 27 ಬೊಂಡಾಲ: ಸುರೇಶ್ ನಾಯ್ಕ (ಕಾಂಗ್ರೆಸ್), ಜಯರಾಮ ನಾಯ್ಕ (ಬಿಜೆಪಿ).

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

3 hours ago