ಫರಂಗಿಪೇಟೆ

ಸಂಬಂಧಿಕರು, ಪಕ್ಕದ ಮನೆಗಳಿಂದಲೇ ಕಳವು ಮಾಡುತ್ತಿದ್ದ ಆರೋಪಿ ಬಂಧನ

ಸುಮಾರು 4 ವರ್ಷಗಳಿಂದೀಚೆಗೆ ಬಂಟ್ವಾಳ ತಾಲೂಕು ಮೇರೆಮಜಲು ಗ್ರಾಮದ ಅಬ್ಬೆಟ್ಟು ಪರಿಸರದ ಮತ್ತು ಸಂಬಂಧಿಕರ ಮನೆಗಳಿಂದ ಚಿನ್ನಾಭರಣ ಮತ್ತು ನಗದು ಕಳವು ಪ್ರಕರಣಗಳ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ, ಖಚಿತ ಮಾಹಿತಿಯಂತೆ ಆರೋಪಿ ಪ್ರಶಾಂತ ಪೂಜಾರಿ ಅಲಿಯಾಸ್ ಜಡ್ಡು (೩೨) ಎಂಬಾತನನ್ನು ಬಂಧಿಸಲಾಗಿದ್ದು, ಆರೋಪಿಯಿಂದ ಸುಮಾರು 134.35 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಮೇರೆಮಜಲು ಗ್ರಾಮದ ಅಬ್ಬೆಟ್ಟು ಪರಿಸರದ ಮನೆಗಳಿಗೆ ಸ್ನೇಹಿತನಂತೆ ಮತ್ತು ಸಂಬಂದಿಕನಂತೆ ಹೋಗಿ ಅವರ ಮನೆಯವರ ವಿಶ್ವಾಸ ಗಳಿಸಿ ಮನೆಯ ಬೀಗವನ್ನು ಇಡುವ ಸ್ಥಳವನ್ನು ನೋಡಿ ಮನೆಯಲ್ಲಿ ಯಾರೂ ಇಲ್ಲದ ಸಮಯ ಬಂದು ಬೀಗವನ್ನು ತೆರೆದು ಮನೆಯ ಒಳಗೆ ಹೋಗಿ ಚಿನ್ನ ಮತ್ತು ನಗದನ್ನು ಕಳವು ಮಾಡಿ ವಾಪಾಸು ಕೀ ಯನ್ನು ಅದೇ ಸ್ಥಳದಲ್ಲಿ ಇಡುತ್ತಿದ್ದು ಈ ಬಗ್ಗೆ ಯಾರಿಗೂ ಸಂಶಯ ಬರದಂತೆ ಇರುತ್ತಿದ್ದ ಎಂದು ತಿಳಿಸಿದ್ದಾರೆ.

2014 ನೇ ಇಸವಿಯಲ್ಲಿ ಮೇರೆಮಜಲು ಗ್ರಾಮದ ಅಬ್ಬೆಟ್ಟು ರಮೇಶ್ ಪೂಜಾರಿ ಎಂಬವರ ಮನೆಯ ಹಿಂಬದಿಯ ಕಿಟಕಿಯ ರೀಪನ್ನು ತುಂಡರಿಸಿ ಒಳಗೆ ಹೋಗಿ ಒಳ ಪ್ರವೇಶಿಸಿ ಮನೆಯ ಒಳಗೆ ಗೋದ್ರೇಜಿನಲ್ಲಿ ಇರಿಸಿದ್ದ ಸುಮಾರು 3 ಕಾಯಿನ್ ಗೋಲ್ಡ್ 4 ಗ್ರಾಂನ ಬೆಂಡೋಲೆ, 2 ವರ್ಷದ ಹಿಂದೆ ಅಬ್ಬೆಟ್ಟು ಹೊಸ ಹೊಕ್ಲು ರಮೇಶ ಎಂಬವರು ಮನೆಯ ಬೀಗದ ಕೀಯಿಂದ ಬೀಗವನ್ನು ತರೆದು ಮನೆಯ ಒಳಗೆ ಪ್ರವೇಶಿಸಿ ಕಪಾಟಿನ ಒಳಗೆ ಇಟ್ಟದ್ದ ೫೨ ಗ್ರಾಂ ಚಿನ್ನಾಭರಣ . ಅಬ್ಬೆಟ್ಟು ಹರಿಣಾಕ್ಷಿರವರ ಮನೆಯಿಂದ 16 ಗ್ರಾಂ ಚಿನ್ನ, ೨೦೧೬ ನೇ ಇಸವಿಯಲ್ಲಿ ಮೇರೆಮಜಲು ಗ್ರಾಮದ ಕಂಬಳಕೋಡಿ ಅಬ್ಬೆಟ್ಟು ಸುನೀತಾ ರವರ ಮನೆಯ ಬೀಗವನ್ನು ಮುರಿದು ಮನೆಯ ಒಳಗಡೆ ಹೋಗಿ ಕಪಾಟಿನಲ್ಲಿದ್ದ ೨೦ ಗ್ರಾಂ ಚಿನ್ನಾಭರಣ, ಇದೇ ವರ್ಷ ಆಗಸ್ಟ್ ತಿಂಗಳಲ್ಲಿ ಆರೋಪಿಯ ಚಿಕ್ಕಮ್ಮ ಚಿತ್ರಾಕ್ಷಿರವರ ಮನೆಯ ೧೧ ಗ್ರಾಂ ಚಿನ್ನಾಭರಣ, ಆರೋಪಿಯ ಚಿಕ್ಕಮ್ಮನ ಮಗ ಚೇತನ್ ರವರ ೧೨ ಗ್ರಾಂ ಚಿನ್ನದ ಚೈನ್ ಕಳವು ಮಾಡಿದ್ದಾಗಿ ಆರೋಪಿಸಲಾಗಿದೆ.

ಎಸ್ಪಿ ರವಿಕಾಂತೇಗೌಡ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಜಿತ್ ಮಾರ್ಗದರ್ಶನದಲ್ಲಿ ಎಎಸ್ಪಿ ಋಪಿಕೇಶ್ ಸೊನವಾಣೆ, ವೃತ್ತನಿರೀಕ್ಷಕ ನಾಗರಾಜ್, ಗ್ರಾಮಾಂತರ ಎಸ್.ಐ, ಪ್ರಸನ್ನ, ಬೀಟ್ ಉಸ್ತುವಾರಿ ಸಹಾಯಕ ಪೊಲೀಸ್ ಉಪನಿರೀಕ್ಷಕ ರತ್ನಕುಮಾರ್, ಠಾಣಾ ಎಸ್.ಬಿ. ಹೆಡ್ ಕಾನ್ಟೇಬಲ್ ಜನಾರ್ಧನ, ಎಚ್.ಸಿ ಸುರೇಶ್ ಕುಮಾರ್, ಬೀಟ್ ಸಿಬ್ಬಂದಿ ಎಚ್.ಸಿ ಜಯರಾಮ ಕೆ.ಟಿ. ಎಚ್.ಸಿ ರಾಧಾಕೃಷ್ಣ, ಪಿ.ಸಿ ಮನೋಜ್ ಕುಮಾರ್, ಪಿ.ಸಿ ಅಬ್ದುಲ್ ನಝೀರ್ ಮತ್ತು ಜೀಪು ಚಾಲಕ ಕಿರಣ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ