ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ರವರ ಸಹಕಾರದಿಂದ ವಿಟ್ಲ ಹೋಬಳಿಯ ಕಂದಾಯ ಇಲಾಖೆಯ ನೌಕರರಿಂದ ಕೊಡಗು ಜಿಲ್ಲೆಯ ನಿರಾಶ್ರಿತರಿಗೆ ಸಂಪಾಜೆ ಗಂಜಿಕೇಂದ್ರದಲ್ಲಿ ಬಟ್ಟೆ ಮತ್ತು ಹೊದಿಕೆಯನ್ನು ಹಾಗೂ ಬಂಟ್ವಾಳ ಕಾರಿಂಜೇಶ್ವರ ದೇವಸ್ಥಾನದ ಅರ್ಚಕರಾದ ಬಾಲಕೃಷ್ಣ ಆಚಾರ್ ರವರ ವತಿಯಿಂದ 50 ಕೆಜಿ ಅಕ್ಕಿಯನ್ನು ನೀಡಲಾಯಿತು.
ಇಡ್ಕಿದು ಗ್ರಾಮದ ಸಂಬಂಧಿಕರ ಮನೆಗೆ ಬಂದು ನೆಲೆಸಿರುವ ಕೊಡಗು ಜಿಲ್ಲೆಯ ನಿರಾಶ್ರಿತರಿಗೆ ವಿಟ್ಲ ಹೋಬಳಿಯ ಉಪತಹಶೀಲ್ದಾರರಾದ ರವಿಶಂಕರ್ ಹಾಗೂ ಕಂದಾಯ ನಿರೀಕ್ಷಕರಾದ ಶ್ರೀಯುತ ದಿವಾಕರ ಮುಗುಳ್ಯ ನೇತೃತ್ವದ ವಿಟ್ಲ ಹೋಬಳಿಯ ಕಂದಾಯ ಇಲಾಖೆಯ ಅಧಿಕಾರಿಗಳು ಅಕ್ಕಿ ಮತ್ತು ಬಟ್ಟೆಯನ್ನು ನೀಡಿದರು. ಈ ಸಂದರ್ಭದಲ್ಲಿ ವಿಟ್ಲ ಹೋಬಳಿಯ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ಹಾಜರಿದ್ದರು
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…