ಬಂಟ್ವಾಳ

ಬಂಟ್ವಾಳ ಪುರಸಭೆ: 17 ನಾಮಪತ್ರ ತಿರಸ್ಕೃತ, 84 ಅಂಗೀಕಾರ

ಬಂಟ್ವಾಳ ಪುರಸಭೆಗೆ ಸಲ್ಲಿಸಿದ ಒಟ್ಟು 101 ನಾಮಪತ್ರಗಳನ್ನು ಸೋಮವಾರ ಪರಿಶೀಲನೆ ಮಾಡಲಾಗಿದ್ದು, 101 ನಾಮಪತ್ರಗಳಲ್ಲಿ 84 ಸಕ್ರಮಗೊಂಡಿದೆ. 17 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತು

ಬಿಜೆಪಿಯ 43, ಕಾಂಗ್ರೆಸ್ ನ 25, ಜೆಡಿಎಸ್ ನ 5, ಸಿಪಿಐನ 2, ಎಸ್.ಡಿ.ಪಿ.ಐ.ನ 22 ಮತ್ತು ಪಕ್ಷೇತರರು 4 ಮಂದಿ ಸೇರಿ ಒಟ್ಟು 99 ಮಂದಿಯಿಂದ 101 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ವಾರ್ಡ್ 10ರಲ್ಲಿ ವನಜಾಕ್ಷಿ ಮತ್ತು ವಾರ್ಡ್ 24ರಲ್ಲಿ ಮಹಮ್ಮದ್ ಅಮಾನುಲ್ಲಾ ತಲಾ 2 ನಾಮಪತ್ರ ಸಲ್ಲಿಸಿದ್ದರು. 10ರಿಂದ 18ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇದ್ದರೂ 16ರಂದು ಮತ್ತು 18ರಂದು ನಾಮಪತ್ರಗಳು ಸಲ್ಲಿಕೆಯಾಗಿದ್ದವು

ಯಾರದ್ದೆಲ್ಲ ತಿರಸ್ಕೃತ:

ಬಿಜೆಪಿಯ 16 ಮತ್ತು ಸಿಪಿಐ 1 ನಾಮಪತ್ರಗಳು ತಿರಸ್ಕೃತವಾಗಿವೆ. ಬಿಜೆಪಿಯ ಎಲ್ಲರೂ ಬದಲಿ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರೆ, ಸಿಪಿಐ ಅಭ್ಯರ್ಥಿ ಸಲ್ಲಿಸಿದ ಎರಡು ನಾಮಪತ್ರಗಳಲ್ಲಿ ಒಂದು ತಿರಸ್ಕೃತಗೊಂಡಿವೆ.

ವಾರ್ಡ್ 1ರಲ್ಲಿ ದೀಕ್ಷಿತ್, 2ರಲ್ಲಿ ಯೋಗೀಶ್, 3ರಲ್ಲಿ ವಸಂತಿ, 4ರಲ್ಲಿ ವಾರಿಜ, 5ರಲ್ಲಿ ಸುರೇಶ್, 6ರಲ್ಲಿ ವಿಜಯ, 7ರಲ್ಲಿ ಸುಜಾತ ವಾರ್ಡ್ 9ರಲ್ಲಿ ವಿಶ್ವನಾಥ ಬಂಗೇರ, 10ರಲ್ಲಿ ವನಿತಾ, 11ರಲ್ಲಿ ಸುಮನಾ, 12ರಲ್ಲಿ ಸರೋಜಿನಿ, 13ರಲ್ಲಿ ಲತಾ, 14ರಲ್ಲಿ ಎನ್. ಗಾಯತ್ರಿ, ವಾರ್ಡ್ 20ರಲ್ಲಿ ಭೋಜ ಸಾಲಿಯಾನ್, 22ರಲ್ಲಿ ರಕ್ಷಿತಾ, 27ರಲ್ಲಿ ಸಂಧ್ಯಾ (ಎಲ್ಲರೂ ಬಿಜೆಪಿ), 10ರಲ್ಲಿ ವನಜಾಕ್ಷಿ (ಕಮ್ಯೂನಿಸ್ಟ್)  ಸಲ್ಲಿಸಿದ ನಾಮಪತ್ರಗಳಲ್ಲಿ ಬಿ ಫಾರಂ ಸಲ್ಲಿಸಲಾಗಿಲ್ಲ ಹಾಗೂ ಒಬ್ಬನೇ ನಾಮನಿರ್ದೇಶನ ಮಾಡಿರುವ ಕಾರಣದಿಂದ 7 ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

12 hours ago