ಬಂಟ್ವಾಳ ಪುರಸಭೆಯ ಕಳೆದ ಸಾಲಿನ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಅವರ ತಾಯಿ ಹೇಮಾವತಿ ಎಸ್. ಆಳ್ವ (94) ಅವರು ಭಾನುವಾರ ಬೆಳಿಗ್ಗೆ ಬಿ.ಸಿ.ರೋಡ್ ನ ಪೊನ್ನೋಡಿ ಸ್ವಗೃಹದಲ್ಲಿ ನಿಧನ ಹೊಂದಿದರು. ಪರಾರಿಗುತ್ತು ದಿ. ಸೀನಪ್ಪ ಆಳ್ವ ಅವರ ಪತ್ನಿಯಾಗಿರುವ ಹೇಮಾವತಿ ಎಸ್. ಆಳ್ವ ಅವರು ಸಂಪಿಗೆದಡಿ ಮನೆತನದವರು. ಆರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಮತ್ತು ಅಪಾರ ಬಂಧು ಬಳಗ ಹಾಗೂ ಕುಟುಂಬಸ್ಥರನ್ನು ಅವರು ಹೊಂದಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…