29ರ ಬದಲು ಆಗಸ್ಟ್ 31ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆ ಗಡುವನ್ನು ಆಗಸ್ಟ್ 17ರ ಬದಲು 18ಕ್ಕೆ ವಿಸ್ತರಿಸಲಾಗಿದೆ. ಶುಕ್ರವಾರ ನಾಮಪತ್ರ ಸಲ್ಲಿಕೆ ಇಲ್ಲ. ನಾಮಪತ್ರ ವಾಪಸ್ ಪಡೆಯಲು ಆಗಸ್ಟ್ 23 ಕಡೆಯ ದಿನ. ಸೆಪ್ಟೆಂಬರ್ 3ರಂದು ಮತ ಎಣಿಕೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಆದರೆ ಆಗಸ್ಟ್ 16ರಂದು 23 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿಯಿಂದ 10, ಕಾಂಗ್ರೆಸ್ ನಿಂದ 6, ಜೆಡಿಎಸ್ 3, ಎಸ್.ಡಿ.ಪಿ.ಐ. ನಿಂದ 1 ಮತ್ತು ಪಕ್ಷೇತರ ಹಾಗೂ ಇತರರು 3 ಉಮೇದುವಾರಿಕೆಯನ್ನು ಸಲ್ಲಿಸಿದರು. ವಾರ್ಡ್ 2ರಲ್ಲಿ 2, 3ರಲ್ಲಿ 3, 4ರಲ್ಲಿ 1, 6ರಲ್ಲಿ 1, 7ರಲ್ಲಿ 2, 8ರಲ್ಲಿ 3, 12ರಲ್ಲಿ 1, 16ರಲ್ಲಿ 1, 17ರಲ್ಲಿ 1, 19ರಲ್ಲಿ 1, 21ರಲ್ಲಿ 1, 24ರಲ್ಲಿ 3, 25ರಲ್ಲಿ 1, 27ರಲ್ಲಿ 2 ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ.
ಒಟ್ಟು 17 ವಾರ್ಡುಗಳಿಗಷ್ಟೇ ನಾಮಪತ್ರ ಸಲ್ಲಿಕೆಯಾಗಿರುವುದು ವಿಶೇಷ. ವಾರ್ಡ್ 1, 5, 9, 10, 11, 13, 14, 15, 20, 26ಕ್ಕೆ ಸ್ಪರ್ಧಿಸಲು ಇನ್ನೂ ಯಾರೂ ನಾಮಪತ್ರ ಸಲ್ಲಿಸದೆ ಶನಿವಾರಕ್ಕೆ ಕುತೂಹಲ ಉಳಿಸಿಕೊಂಡಿದ್ದಾರೆ.
ಕಳೆದ ಸಾಲಿನ ಪುರಸಭೆಯ ಸದಸ್ಯರಾದ ಕಾಂಗ್ರೆಸ್ ನ ಪಿ.ರಾಮಕೃಷ್ಣ ಆಳ್ವ (ಕಳೆದಸಾಲಿನ ಅಧ್ಯಕ್ಷ) ಮೊನೀಶ್ ಆಲಿ (ಎಸ್.ಡಿ.ಪಿ.ಐ ಪುರಸಭಾ ಘಟಕ ಅಧ್ಯಕ್ಷ) ಜೆಸಿಂತಾ ಡಿಸೋಜ, ಮಹಮ್ಮದ್ ಶರೀಫ್, ಎರಡು ಅವಧಿಗೆ ಅಧ್ಯಕ್ಷರಾಗಿದ್ದ ಬಿಜೆಪಿಯ ಬಿ.ದಿನೇಶ್ ಭಂಡಾರಿ ನಾಮಪತ್ರ ಸಲ್ಲಿಸಿದವರಲ್ಲಿ ಗಮನಾರ್ಹರು.
ಎಲ್ಲೆಲ್ಲಿ ಯಾರ್ಯಾರು ಸ್ಪರ್ಧೆ?
ಬಂಟ್ವಾಳ ಕಸ್ಬಾ ವಾರ್ಡ್ 2 ರಲ್ಲಿ ಬಿಜೆಪಿಯ 2 ನಾಮಪತ್ರ ಸಲ್ಲಿಕೆಯಾಗಿದೆ. ಪುರಸಭೆ ಮಾಜಿ ಅಧ್ಯಕ್ಷ ಬಿ.ದಿನೇಶ್ ಭಂಡಾರಿ ಮತ್ತು ಯೋಗಿಶ್ ಕುಲಾಲ್ ನಾಮಪತ್ರ ಸಲ್ಲಿಸಿದವರು. ವಾರ್ಡ್ 3 ಗೆ 1 ಕಾಂಗ್ರೆಸ್, 2 ಬಿಜೆಪಿಯಿಂದ ನಾಮಪತ್ರ ಸಲ್ಲಿಕೆಯಾಗಿದೆ. ಕಾಂಗ್ರೆಸ್ ನಿಂದ ಹೇಮಾವತಿ, ಬಿಜೆಪಿಯಿಂದ ಮೀನಾಕ್ಷಿ ಮತ್ತು ವಸಂತಿ ನಾಮಪತ್ರ ಸಲ್ಲಿಸಿದ್ದಾರೆ.
ವಾರ್ಡ್ 4ಕ್ಕೆ ಬಿಜೆಪಿಯಿಂದ ರೇಖಾ ಪೈ, ವಾರ್ಡ್ 6ಕ್ಕೆ ಬಿಜೆಪಿಯಿಂದ ದೇವಕಿ , ವಾರ್ಡ್ 7ಕ್ಕೆ ಬಿಜೆಪಿಯಿಂದ ಶಶಿಕಲಾ ಮತ್ತು ಸುಜಾತಾ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ 8ಕ್ಕೆ ಕಾಂಗ್ರೆಸ್ ಪಕ್ಷದ ಮೊಹಮ್ಮದ್ ಸನೀರ್, ಎಸ್.ಡಿ.ಪಿ.ಐನ ಮೊನೀಶ್ ಆಲಿ ಅಹಮ್ಮದ್ , ಜೆಡಿಎಸ್ ನ ಹಾರೂನ್ ರಶೀದ್ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ 12ಕ್ಕೆ ಜೆಡಿಎಸ್ ನಿಂದ ವಸಂತಿ, ವಾರ್ಡ್ 16ರಲ್ಲಿ ಎಸ್.ಡಿ.ಪಿ.ಐ.ನ ಸಾವುಲ್ ಹಮೀದ್ ನಾಂಪತ್ರ ಸಲ್ಲಿಸಿದ್ದಾರೆ. ವಾರ್ಡ್ 17ಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಅಬ್ದುಲ್ ಖಾದರ್ ಇಕ್ಬಾಲ್ , ವಾರ್ಡ್ 19ರಲ್ಲಿ ಮಹಮ್ಮದ್ ಶರೀಫ್ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ವಾರ್ಡ್ 21ರಲ್ಲಿ ಕಳೆದ ಸಾಲಿನ ಅಧ್ಯಕ್ಷ ಪಿ.ರಾಮಕೃಷ್ನ ಆಳ್ವ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ 24ರಲ್ಲಿ ಮಹಮ್ಮದ್ ಅಮಾನುಲ್ಲಾ (ಸ್ವತಂತ್ರ), ಮಹಮ್ಮದ್ ಅಮಾನುಲ್ಲಾ (ಜೆಡಿಎಸ್), ಅಬುಬಕ್ಕರ್ ಸಿದ್ದೀಕ್ (ಕಾಂಗ್ರೆಸ್) ನಾಮಪತ್ರ ಸಲ್ಲಿಸಿದ್ದಾರೆ.
ವಾರ್ಡ್ 25ರಲ್ಲಿ ಜೆಸಿಂತಾ ಡಿಸೋಜ ಕಾಂಗ್ರೆಸ್ ಅಭ್ಯರ್ಥಿಯಾಗಿ , ವಾರ್ಡ್ 27ರಲ್ಲಿ ಸಂಧ್ಯಾ ಮತ್ತು ಜಯರಾಮ ಜಿ. ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ.