ಬಂಟ್ವಾಳ

ಅವಕಾಶಗಳು ಸಿಕ್ಕಾಗ ಸಮಾಜದ ಅಭ್ಯುದಯಕ್ಕೆ ದುಡಿಮೆ: ಯು.ಟಿ.ಖಾದರ್

ಅಧಿಕಾರ ಶಾಶ್ವತವಲ್ಲ. ಇವತ್ತು ಬರುತ್ತದೆ, ನಾಳೆ ಹೋಗುತ್ತದೆ. ಆದರೆ ಅವಕಾಶಗಳು ದೊರೆತ ಸಂದರ್ಭ ಸಮಾಜದ ಅಭ್ಯುದಯಕ್ಕೆ ದುಡಿಯಬೇಕು, ಉತ್ತಮ ಕಾರ್ಯಗಳಗೆ ಪ್ರೇರಣೆಯಾಗಬೇಕು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದರು.

ಬಂಟ್ವಾಳದ ಮುಸ್ಲಿಂ ಸಮಾಜ ವತಿಯಿಂದ ಬುಧವಾರ ಬಿ.ಸಿ.ರೋಡಿನ ಲಯನ್ಸ್ ಭವನದಲ್ಲಿ ನಡೆದ “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಪಾತ್ರ” ವಿಷಯದ ಕುರಿತ ಚಿಂತನೆ ಹಾಗೂ ಸಚಿವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸರಕಾರ ಐದು ವರ್ಷಗಳ ಕಾಲ ಆಡಳಿತ ನಡೆಸಲಿದ್ದು, ಸುಭದ್ರವಾಗಿದೆ. ಈ ಅವಧಿಯಲ್ಲಿ ಉತ್ತಮ ಕಾರ್ಯ ನಡೆಸಲು ನನಗೆ ದೇವರು ಅವಕಾಶ ನೀಡಿದ್ದು, ಎಲ್ಲರ ಸಹಕಾರ ಬೇಕಾಗಿದೆ. ಜೂಜಾಟದಂಥ ಕ್ರಿಯೆಗಳಿಗೆ ಕಡಿವಾಣ ಹಾಕುವ ಕಾರ್ಯ ನನ್ನ ಕ್ಷೇತ್ರದಲ್ಲಿ ನಡೆದಿದೆ. ಜನರಿಗೆ ಉಪಕಾರ ಮಾಡಿ, ನೆನಪಿನಲ್ಲಿ ಉಳಿಯುವಂಥ ಸೇವೆಯನ್ನು ಮಾಡಲು ನಿಮ್ಮ ಸಹಕಾರ ಅಗತ್ಯ ಎಂದು ಈ ಸಂದರ್ಭ ಖಾದರ್ ಹೇಳಿದರು.

ಮುಸ್ಲಿಂ ಸಮಾಜ ಬಂಟ್ವಾಳ ಅಧ್ಯಕ್ಷ ಇಬ್ನು ಅಬ್ಬಾಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಬಿ.ಎಚ್.ಖಾದರ್, ಕೋಶಾಧಿಕಾರಿ ಹನೀಫ್ ಖಾನ್ ಕೋಡಾಜೆ, ಪಿ.ಎ.ರಹೀಂ, ಮುಹಮ್ಮದ್ ಮೋನು, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಹಂಡೆಲ್ ಮೋನು, ಕುಂಞಿ ಮೋನಾಕ ಮತ್ತಿತರರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಕೆ.ಎಚ್.ಅಬೂಬಕರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಗೂಡಿನಬಳಿ ವಂದಿಸಿದರು. ಸದಸ್ಯ ಅಕ್ಬರ್ ಅಲಿ ಪೊನ್ನೋಡಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಪಾತ್ರ” ಎಂಬ ವಿಷಯದ ಕುರಿತು ಲೇಖಕ ಇಸ್ಮಾತ್ ಫಜೀರ್ ಅವರು ಮಾಹಿತಿ ನೀಡಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts