REPORT, PHOTOS and VIDEO by Harish Mambady
ಶಂಭೂರು ಎಎಂಆರ್ ಡ್ಯಾಂ ನಿಂದ ಸೈರನ್ ಮೊಳಗುತ್ತಿದ್ದಂತೆಯೇ ನೇತ್ರಾವತಿ ಬಿರುಸು ಕಾಣಿಸಿಕೊಳ್ಳುತ್ತದೆ. ಅಲ್ಲಿದ್ದ ಕಸ, ಕಡ್ಡಿಗಳನ್ನು ನದಿಯ ಪಕ್ಕದಲ್ಲಿದ್ದ ಜಾಗಕ್ಕೆ ಎಸೆಯುತ್ತದೆ. ಹೀಗೆ ಪಾಣೆಮಂಗಳೂರಿನ ಆಲಡ್ಕ, ಬಂಟ್ವಾಳದ ತೀರ ಪ್ರದೇಶಗಳಾದ ಕಂಚುಕಾರಪೇಟೆ, ಬಡ್ಡಕಟ್ಟೆ ಹಾಗೂ ಸನಿಹದ ಪ್ರದೇಶಗಳೀಗ ಜಲಾವೃತಗೊಂಡಿವೆ. ಈ ಚಿತ್ರಗಳು ಬಂಟ್ವಾಳ ಮತ್ತು ಗೂಡಿನಬಳಿಯನ್ನು ಸಂಪರ್ಕಿಸುವ ಕಂಚುಕಾರಪೇಟೆಯದ್ದು. ಇಲ್ಲೇ ನದಿಯ ಮಟ್ಟ ಅಳೆಯುವ ಮಾಪನವಿದೆ. ಚಿತ್ರ ಸೆರೆಹಿಡಿದ ಸಂದರ್ಭ 9.6 ಅಡಿಯಲ್ಲಿ ನೇತ್ರಾವತಿ ನೀರು ಹರಿಯುತ್ತಿತ್ತು. ಇದಿನ್ನೂ ಜಾಸ್ತಿಯಾಗಬಹುದು ಅಥವಾ ಕಡಿಮೆಯಾಗಲೂಬಹುದು. ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆಯೇ ಹೊರತು ಯಾವ ಪ್ರಭಾವ, ವಶೀಲಿಯೂ ಅಲ್ಲ!!! ಇದನ್ನು ನಾನು ಮಾಡಿಸಿದ್ದೇನೆ ಎಂದು ಹೇಳಿಕೊಳ್ಳುವವರು ಈ ವಿಷಯದಲ್ಲಂತೂ ಇಲ್ಲ.