ಬಂಟ್ವಾಳ

ಬಂಟ್ವಾಳ ಪುರಸಭೆಗೆ 23 ನಾಮಪತ್ರ ಸಲ್ಲಿಕೆ

ಬಂಟ್ವಾಳ ಪುರಸಭೆಯ 27 ವಾರ್ಡುಗಳಿಗೆ ನಾಮಪತ್ರ ಸಲ್ಲಿಕೆಗೆ ಆಗಸ್ಟ್ 17 ಕೊನೇ ದಿನವಾಗಿದ್ದು, ಗುರುವಾರ ಒಟ್ಟು 23 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ 10, ಕಾಂಗ್ರೆಸ್ ನಿಂದ 6, ಜೆಡಿಎಸ್ 3, ಎಸ್.ಡಿ.ಪಿ.ಐ. ನಿಂದ 1 ಮತ್ತು ಪಕ್ಷೇತರ ಹಾಗೂ ಇತರರು 3 ಉಮೇದುವಾರಿಕೆಯನ್ನು ಸಲ್ಲಿಸಿದರು.

ಒಟ್ಟು 17 ವಾರ್ಡುಗಳಿಗಷ್ಟೇ ನಾಮಪತ್ರ ಸಲ್ಲಿಕೆಯಾಗಿರುವುದು ವಿಶೇಷ. ವಾರ್ಡ್ 1, 5, 9, 10, 11, 13, 14, 15, 20, 26ಕ್ಕೆ ಸ್ಪರ್ಧಿಸಲು ಇನ್ನೂ ಯಾರೂ ನಾಮಪತ್ರ ಸಲ್ಲಿಸದೆ ಶುಕ್ರವಾರಕ್ಕೆ ಕುತೂಹಲ ಉಳಿಸಿಕೊಂಡಿದ್ದಾರೆ.

ವಾರ್ಡ್ 2ರಲ್ಲಿ 2, 3ರಲ್ಲಿ 3, 4ರಲ್ಲಿ 1, 6ರಲ್ಲಿ 1, 7ರಲ್ಲಿ 2, 8ರಲ್ಲಿ 3, 12ರಲ್ಲಿ 1, 16ರಲ್ಲಿ 1, 17ರಲ್ಲಿ 1, 19ರಲ್ಲಿ 1, 21ರಲ್ಲಿ 1, 24ರಲ್ಲಿ 3, 25ರಲ್ಲಿ 1, 27ರಲ್ಲಿ 2 ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ.

ಬಂಟ್ವಾಳ ಕಸ್ಬಾ ವಾರ್ಡ್ 2 ರಲ್ಲಿ ಬಿಜೆಪಿಯ 2 ನಾಮಪತ್ರ ಸಲ್ಲಿಕೆಯಾಗಿದೆ. ವಾರ್ಡ್ 3 ಗೆ 1 ಕಾಂಗ್ರೆಸ್, 2 ಬಿಜೆಪಿಯಿಂದ ನಾಮಪತ್ರ ಸಲ್ಲಿಕೆಯಾಗಿದೆ. ವಾರ್ಡ್ 4 ಬಿಜೆಪಿಯಿಂದ 1 ನಾಮಪತ್ರ, ವಾರ್ಡ್ 6ಕ್ಕೆ ಬಿಜೆಪಿಯಿಂದ 1, ವಾರ್ಡ್ 7) ಬಿಜೆಪಿಯಿಂದ 2, ವಾರ್ಡ್ 8 –ಅಭ್ಯರ್ಥಿಗಳಾದ ಕಾಂಗ್ರೆಸ್  ನಿಂದ 1, ಎಸ್.ಡಿ.ಪಿ.ಐ.ನಿಂದ 1, ಜೆಡಿಎಸ್ ನಿಂದ 1 ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ 12 ರಿಂದ ಜೆಡಿಎಸ್ ನಿಂದ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ವಾರ್ಡ್ 16  ಮತ್ತು 17ರಲ್ಲಿ ತಲಾ 1 ಪಕ್ಷೇತರ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ 19, ಮತ್ತು 21ರಲ್ಲಿ ತಲಾ 1 ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ 24ರಲ್ಲಿ 1 ಕಾಂಗ್ರೆಸ್, 1 ಜೆಡಿಎಸ್ ಮತ್ತು 1 ಪಕ್ಷೇತರ ಅಭ್ಯರ್ಥಿ ನಾಮಪತ್ರ ಸಲ್ಲಿಸಿದರೆ, ವಾರ್ಡ್ 25ರಲ್ಲಿ 1 ಕಾಂಗ್ರೆಸ್ ಮತ್ತು ವಾರ್ಡ್ 27ರಲ್ಲಿ 2 ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸಿದಂತಾಗಿದೆ.

 

ಬಂಟ್ವಾಳ ಪುರಸಭೆಯ ಎಲ್ಲ ಮತಗಟ್ಟೆಗಳೂ ಸೂಕ್ಷ, ಅತಿಸೂಕ್ಷ್ಮ

ಒಟ್ಟು ವಾರ್ಡುಗಳು 27. ಅವುಗಳ ಪೈಕಿ ಮತಗಟ್ಟೆಗಳು 32. ಒಂದು ಮತಗಟ್ಟೆಯೂ ಸಾಮಾನ್ಯದ್ದಲ್ಲ. 14 ಅತೀಸೂಕ್ಷ್ಮವಾದರೆ, 18 ಸೂಕ್ಷ್ಮ. ಅಂದರೆ ಒಂದೋ ಸೂಕ್ಷ್ಮ, ಇಲ್ಲವೆ ಅತೀಸೂಕ್ಷ್ಮ. ಹೀಗಾಗಿ ಬಂಟ್ವಾಳ ಪುರಸಭೆಯ ಎಲ್ಲ ಮತಗಟ್ಟೆಗಳಲ್ಲೂ ಆಗಸ್ಟ್ 29ರಂದು ನಡೆಯುವ ಪುರಸಭೆ ಚುನಾವಣೆಗೆ ಖಾಕಿ ಸರ್ಪಗಾವಲು ಇರಲಿದ್ದು, ಇದಕ್ಕೂ ಮುನ್ನ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ಆಯೋಗ ಹದ್ದಿನ ಕಣ್ಣು ಇರಿಸಲಿದೆ.

27 ವಾರ್ಡುಗಳ ಪೈಕಿ 1, 3, 14, 21 ಮತ್ತು 27 ನೇ ವಾರ್ಡ್ ಗಳು ತಲಾ ಎರಡು ಮತಗಟ್ಟೆಗಳನ್ನು ಹೊಂದಿದ್ದರೆ, ಉಳಿದ ವಾರ್ಡುಗಳಲ್ಲಿ ಒಂದು ಮತಗಟ್ಟೆಗಳಿವೆ. 4, 6, 7, 8, 12, 13, 15, 16, 17, 18, 19, 22, 24 ವಾರ್ಡುಗಳು ಹಾಗೂ 14ನೇ ವಾರ್ಡಿನ ಒಂದು ಮತಗಟ್ಟೆ ಅತೀಸೂಕ್ಷ್ಮ ಎಂದು ಪರಿಗಣಿಸಲ್ಪಟ್ಟಿವೆ.

ವಿಶೇಷವೆಂದರೆ, ಒಟ್ಟು ಮತದಾರರ 33640 ಪೈಕಿ 16651 ಪುರುಷರು, 16989 ಮಹಿಳೆಯರು ಇದ್ದಾರೆ. ಮಹಿಳಾ ಮತದಾರರ ಸಂಖ್ಯೆ ಪುರುಷ ಮತದಾರರಿಗಿಂದ ಸ್ವಲ್ಪ ಜಾಸ್ತಿ ಇದ್ದರೂ 12, 13, 15, 16, 17, 18, 19, 24, 25 ವಾರ್ಡುಗಳಲ್ಲಿ ಪುರುಷರ ಸಂಖ್ಯೆ ಜಾಸ್ತಿ. ಮೀಸಲಾತಿ ಪಟ್ಟಿಯನ್ನು ನೋಡಿದರೆ, ಒಟ್ಟು 27ರಲ್ಲಿ 12 ಮಹಿಳಾ ಮೀಸಲಾತಿ ಇದೆ.

ವಾರ್ಡ್ 1 – ಬಂಟ್ವಾಳ ಕಸ್ಬಾ 1: ಹಿಂದುಳಿದ ವರ್ಗ (ಎ).

ಈ ವಾರ್ಡ್ ಪಂಜಿಕಲ್ಲು, ಮೂಡುನಡುಗೋಡು ಮತ್ತು ಅಮ್ಟಾಡಿ ಗ್ರಾಮದ ಗಡಿಯಲ್ಲಿದ್ದು, ಹಿಂದುಳಿದ ವರ್ಗ ಎ ಅಭ್ಯರ್ಥಿ ಕಣದಲ್ಲಿ ನಿಲ್ಲಲು ಅವಕಾಶವಿದೆ. ಕ್ತಿಸ್ತಜ್ಯೋತಿ ಪ್ರೌಢಶಾಲೆ, ಅಗ್ರಾರ್ ನಲ್ಲಿ ಎರಡು ಮತಗಟ್ಟೆಗಳು ಈ ವಾರ್ಡಿಗೆ ಬರುತ್ತಿದ್ದು, ಎರಡೂ ಸೂಕ್ಷ್ಮ ಮತಗಟ್ಟೆಗಳಾಗಿವೆ. ಒಂದರಲ್ಲಿ 407 ಪುರುಷರು, 435 ಮಹಿಳೆಯರು ಸೇರಿ ಒಟ್ಟು 842 ಮತದಾರರು ಇದ್ದರೆ, ಮತ್ತೊಂದರಲ್ಲಿ 400 ಪುರುಷರು, 383 ಮಹಿಳೆಯರು ಸೇರಿ 783 ಮತದಾರರು ಹೀಗೆ ಒಟ್ಟು ಪುರುಷ ಮತದಾರರು 807 ಮಹಿಳಾ ಮತದಾರರು 818 ಒಟ್ಟು 1625 ಮತದಾರರು ಇದ್ದಾರೆ.

ವಾರ್ಡ್ 2 – ಬಂಟ್ವಾಳ ಕಸ್ಬಾ 2: ಸಾಮಾನ್ಯ

ಈ ವಾರ್ಡ್ ವಾಮದಪದವು ರಸ್ತೆ, ಅಗ್ರಾರ್ ಚರ್ಚ್ ರಸ್ತೆ, ಅಮ್ಟಾಡಿ ಗ್ರಾಮದ ಗಡಿಯಲ್ಲಿದ್ದು, 1272 ಮತದಾರರನ್ನು ಹೊಂದಿದೆ. ಮಂಡಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆ ಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಇಲ್ಲಿ 618 ಪುರುಷರು ಮತ್ತು 654 ಮಹಿಳೆಯರು ಇದ್ದಾರೆ.

ವಾರ್ಡ್ 3 – ಬಂಟ್ವಾಳ ಕಸ್ಬಾ 3: ಹಿಂದುಳಿದ ವರ್ಗ (ಬಿ)

ಅಗ್ರಾರ್ ಚರ್ಚ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಎರಡು ಸೂಕ್ಷ್ಮ ಮತಗಟ್ಟೆಗಳು ಬಂಟ್ವಾಳ ಕಸ್ಬಾ 3ನೇ ವಾರ್ಡ್ ಗೆ ಒಳಗೊಂಡಿದೆ. ಒಂದು ಮತಗಟ್ಟೆಯಲ್ಲಿ 409 ಪುರುಷರು, 461 ಮಹಿಳೆಯರು ಸೇರಿ 870 ಮತದಾರರು ಇದ್ದರೆ, ಮತ್ತೊಂದರಲ್ಲಿ 352 ಪುರುಷರು, 390 ಮಹಿಳೆಯರು ಸೇರಿ 742 ಮತದಾರರಿದ್ದಾರೆ. ಒಟ್ಟು ಮತದಾರರ ಸಂಖ್ಯೆ 752 ಪುರುಷರು, 851 ಮಹಿಳೆಯರು ಒಟ್ಟು 1612 ಮತದಾರರನ್ನು ವಾರ್ಡ್ 3 ಹೊಂದಿದೆ.

ವಾರ್ಡ್ 4 –  ಬಂಟ್ವಾಳ ಕಸ್ಬಾ 4: ಸಾಮಾನ್ಯ ಮಹಿಳೆ

ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆಯಲ್ಲಿರುವ ಅತೀ ಸೂಕ್ಷ್ಮ ಮತಗಟ್ಟೆಯಲ್ಲಿ 974 ಮತದಾರರನ್ನು (472 ಪುರುಷ, 502 ಮಹಿಳೆಯರು) ಹೊಂದಿರುವ ಕ್ಷೇತ್ರವಿದು.

ವಾರ್ಡ್ 5 – ಬಂಟ್ವಾಳ ಕಸ್ಬಾ 5: ಪರಿಶಿಷ್ಟ ಜಾತಿ

ಜಕ್ರಿಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಮತಗಟ್ಟೆ ಇದೆ. ಇದೂ ಸೂಕ್ಷ್ಮ ಮತಗಟ್ಟೆ. 1169 ಮತದಾರರು. ಇವರಲ್ಲಿ 567 ಪುರುಷ, 602 ಮಹಿಳೆಯರು.

ವಾರ್ಡ್ 6 – ಬಂಟ್ವಾಳ ಕಸ್ಬಾ 6: ಸಾಮಾನ್ಯ ಮಹಿಳೆ

ಈ ವಾರ್ಡ ಅತಿಸೂಕ್ಷ್ಮ ಮತಗಟ್ಟೆಯನ್ನು ಹೊಂದಿದೆ. ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆಯಿದು. 644 ಪುರುಷರು, 674 ಮಹಿಳೆಯರು ಸೇರಿ ಒಟ್ಟು 1318 ಮತದಾರರು.

ವಾರ್ಡ್ 7 – ಬಂಟ್ವಾಳ ಕಸ್ಬಾ 7: ಹಿಂದುಳಿದ ವರ್ಗ (ಎ) ಮಹಿಳೆ

ಎಸ್.ವಿ.ಎಸ್.ದೇವಳ ಕನ್ನಡ ಮಾಧ್ಯಮ ಶಾಲೆಯ ಮತಗಟ್ಟೆಯೂ ಅತೀಸೂಕ್ಷ್ಮ. 457 ಪುರುಷರು, 461 ಮಹಿಳೆಯರು ಸೇರಿ 918 ಮತದಾರರು ಇಲ್ಲಿದ್ದಾರೆ.

ವಾರ್ಡ್ 8 – ಬಂಟ್ವಾಳ ಮೂಡ 8: ಹಿಂದುಳಿದ ವರ್ಗ (ಎ)

ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆಯಾದ ಇದೂ ಅತೀ ಸೂಕ್ಷ್ಮ. 1057 ಮತದಾರರು. ಇವರಲ್ಲಿ 517 ಪುರುಷರು, 540 ಮಹಿಳೆಯರು.

ವಾರ್ಡ್ 9 – ಬಂಟ್ವಾಳ ಮೂಡ 9: ಹಿಂದುಳಿದ ವರ್ಗ (ಎ)

ಭಂಡಾರಿಬೆಟ್ಟುವಿನಲ್ಲಿರುವ ಶ್ರೀ ವೆಂಕಟರಮಣ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯ ದಕ್ಷಿಣ ಭಾಗದ ಮತಗಟ್ಟೆ 9ನೇ ವಾರ್ಡಿನ ಮತಗಟ್ಟೆ. 603 ಪುರುಷರು, 647 ಮಹಿಳೆಯರನ್ನು ಹೊಂದಿರುವ ಒಟ್ಟು 1250 ಮತದಾರರಿರುವ ಸೂಕ್ಷ್ಮ ಮತಗಟ್ಟೆ ಇದು.

ವಾರ್ಡ್ 10 – ಬಂಟ್ವಾಳ ಮೂಡ 10: ಸಾಮಾನ್ಯ ಮಹಿಳೆ

ಭಂಡಾರಿಬೆಟ್ಟುವಿನಲ್ಲಿರುವ ಶ್ರೀ ವೆಂಕಟರಮಣ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಭಾಗದ ಮತಗಟ್ಟೆ 10ನೇ ವಾರ್ಡಿನ ಮತಗಟ್ಟೆ. 1295 ಮತದಾರರು. 640 ಪುರುಷರು, 655 ಮಹಿಳೆಯರು. ಸೂಕ್ಷ್ಮ ಮತಗಟ್ಟೆ ಇದು.

ವಾರ್ಡ್ 11 – ಬಂಟ್ವಾಳ ಮೂಡ 11: ಹಿಂದುಳಿದ ವರ್ಗ (ಎ) ಮಹಿಳೆ

ಮೊಡಂಕಾಪು ಕಾರ್ಮೆಲ್ ಸಂಯುಕ್ತ ಪದವಿಪೂರ್ವ ಕಾಲೇಜುವಿನ ದಕ್ಷಿಣ ಭಾಗದ ಮತಗಟ್ಟೆ ಈ ವಾರ್ಡಿಗಿದೆ. 589 ಪುರುಷರು, 668 ಮಹಿಳೆಯರು ಇಲ್ಲಿದ್ದಾರೆ. ಒಟ್ಟು 1257 ಮತದಾರರಿರುವ ಈ ಮತಗಟ್ಟೆಯೂ ಸೂಕ್ಷ್ಮ ಮತಗಟ್ಟೆ.

ವಾರ್ಡ್ 12 – ಬಂಟ್ವಾಳ ಮೂಡ 12:  ಹಿಂದುಳಿದ ವರ್ಗ (ಎ) ಮಹಿಳೆ

ದ.ಕ.ಜಿ.ಪಂ.ಹಿ.ಪ್ರಾ.ಶಾಲೆ, ಬಿ.ಮೂಡದ ದಕ್ಷಿಣ ಭಾಗದಲ್ಲಿರುವ ಮತಗಟ್ಟೆಯಲ್ಲಿ 645 ಪುರುಷರು, 644 ಮಹಿಳೆಯರು ಸೇರಿ 1289 ಮತದಾರರಿದ್ದಾರೆ. ಇದು ಅತೀಸೂಕ್ಷ್ಮ ಮತಗಟ್ಟೆ.

ವಾರ್ಡ್ 13 – ಬಂಟ್ವಾಳ ಮೂಡ 13: ಹಿಂದುಳಿದ ವರ್ಗ (ಎ) ಮಹಿಳೆ

ಗೂಡಿನಬಳಿಯ ಹಯಾತುಲ್ ಇಸ್ಲಾಂ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ವಾರ್ಡ್ 13ಕ್ಕಿದೆ. ಇಲ್ಲಿ 483 ಪುರುಷರು, 477 ಮಹಿಳೆಯರು. ಒಟ್ಟು 960 ಮತದಾರರು. ಇದೂ ಅತೀಸೂಕ್ಷ್ಮ ಮತಗಟ್ಟೆ.

ವಾರ್ಡ್ 14 – ಬಂಟ್ವಾಳ ಮೂಡ 14: ಸಾಮಾನ್ಯ ಮಹಿಳೆ

ಈ ವಾರ್ಡಿನ ಎಪಿಎಂಸಿ ಕಚೇರಿ ಜೋಡುಮಾರ್ಗ ಮತಗಟ್ಟೆ ಅತೀಸೂಕ್ಷ್ಮವಾದರೆ, ಪಕ್ಕದಲ್ಲೇ ಇರುವ ಅಂಗನವಾಡಿ ಕೇಂದ್ರ ಕೈಕುಂಜ ಸೂಕ್ಷ್ಮ ಮತಗಟ್ಟೆ ಎಂದು ಹೆಸರಿಸಲಾಗಿದೆ. ಅಂಗನವಾಡಿ ಕೇಂದ್ರದ ಮತಗಟ್ಟೆಯಲ್ಲಿ 271 ಪುರುಷರು, 261 ಮಹಿಳೆಯರು ಸೇರಿ 532 ಮತದಾರರು. ಎಪಿಎಂಸಿ ಮತಗಟ್ಟೆಯಲ್ಲಿ 507 ಪುರುಷರು, 575 ಮಹಿಳೆಯರು ಸೇರಿ 1082. ಒಟ್ಟು ಈ ವಾರ್ಡಿನಲ್ಲೂ 778 ಪುರುಷರು, 836 ಮಹಿಳೆಯರು, 1614 ಒಟ್ಟು ಮತದಾರರು.

ವಾರ್ಡ್ 15 – ಬಂಟ್ವಾಳ ಮೂಡ 15: ಸಾಮಾನ್ಯ

ಈ ವಾರ್ಡಿಗೆ ಅಜ್ಜಿಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನ ಹೈಸ್ಕೂಲು ವಿಭಾಗದ ಪೂರ್ವಭಾಗದ ವಾರ್ಡ್ ಇದೆ. ಇಲ್ಲಿ 485 ಪುರುಷರು, 468 ಮಹಿಳೆಯರು ಸೇರಿ 953 ಮತದಾರರು ಇದ್ದಾರೆ. ಇದು ಅತೀಸೂಕ್ಷ್ಮ ಮತಗಟ್ಟೆ.

ವಾರ್ಡ್ 16 – ಬಂಟ್ವಾಳ ಮೂಡ 16 : ಹಿಂದುಳಿದ ವರ್ಗ (ಎ)

ಸರಕಾರಿ ಪದವಿಪೂರ್ವ ಕಾಲೇಜು ಹೈಸ್ಕೂಲ್ ವಿಭಾಗ ಅಜ್ಜಿಬೆಟ್ಟಿನ ಬಿ.ಮೂಡ ಪೂರ್ವ ಭಾಗದ ಮತಗಟ್ಟೆಯಲ್ಲಿ 678 ಪುರುಷರು, 631 ಮಹಿಳೆಯರು ಇದ್ದಾರೆ. ಒಟ್ಟು 1309 ಮತದಾರರು ಇರುವ ಈ ಮತಗಟ್ಟೆ ಅತೀಸೂಕ್ಷ್ಮ.

ವಾರ್ಡ್ 17: ಬಂಟ್ವಾಳ ಮೂಡ 17 : ಸಾಮಾನ್ಯ

ಕೊಡಂಗೆ ಶಾಲೆಯ ಮತಗಟ್ಟೆಯಲ್ಲಿ 511 ಪುರುಷರು, 468 ಮಹಿಳೆಯರು ಸೇರಿ 979 ಮತದಾರರು ಈ ವಾರ್ಡಿಗೆ ಇದ್ದಾರೆ. ಇದು ಅತೀಸೂಕ್ಷ್ಮ ಮತಗಟ್ಟೆ.

ವಾರ್ಡ್ 18: ಬಂಟ್ವಾಳ ಮೂಡ 18:  ಸಾಮಾನ್ಯ

ಬಿ.ಮೂಡ ದ.ಕ.ಜಿಪಂ ಹಿ.ಪ್ರಾ.ಶಾಲೆ ಕೊಡಂಗೆ 540 ಪುರುಷರು, 520 ಮಹಿಳೆಯರು. 1060 ಒಟ್ಟು ಮತದಾರರು ಇರುವ 18ನೇ ವಾರ್ಡಿನ ಏಕೈಕ ಮತಗಟ್ಟೆ ಅತೀಸೂಕ್ಷ್ಮ

ವಾರ್ಡ್ 19: ಬಂಟ್ವಾಳ ಮೂಡ 19: ಹಿಂದುಳಿದ ವರ್ಗ (ಎ)

ದ.ಕ.ಜಿಪಂ ಹಿ.ಪ್ರಾ.ಶಾಲೆ ಕೊಡಂಗೆ ಬಿ.ಮೂಡದಲ್ಲಿರುವ ಮತಗಟ್ಟೆಯಲ್ಲಿ 498 ಪುರುಷರು, 439 ಮಹಿಳೆಯರು ಸೇರಿ 937 ಮತದಾರರು ಇದ್ದಾರೆ. ಇದು ಅತೀಸೂಕ್ಷ್ಮ.

ವಾರ್ಡ್ 20: ಬಂಟ್ವಾಳ ಮೂಡ 20: ಸಾಮಾನ್ಯ

ದೀಪಿಕಾ ಪ್ರೌಢಶಾಲೆ ಮೊಡಂಕಾಪು, ಬಿ.ಮೂಡದ ಪೂರ್ವ ಭಾಗ 649 ಪುರುಷರು, 679 ಮಹಿಳೆಯರನ್ನು ಹೊಂದಿರುವ 1328 ಮತದಾರರು ಇರುವ ಈ ವಾರ್ಡಿಗೆ ಸೂಕ್ಷ್ಮ ಮತಗಟ್ಟೆ ಎಂಬ ಹಣೆಪಟ್ಟಿ ಇದೆ.

ವಾರ್ಡ್ 21: ಬಂಟ್ವಾಳ ಮೂಡ 21: ಹಿಂದುಳಿದ ವರ್ಗ (ಬಿ)

ಇಲ್ಲಿ ಎರಡು ಮತಗಟ್ಟೆಗಳಿವೆ. ಒಟ್ಟು ಮತದಾರರು 1571. 789 ಪುರುಷರು, 819 ಮಹಿಳೆಯರು. ದೀಪಿಕಾ ಹೈಸ್ಕೂಲು ಮೊಡಂಕಾಪು ದ.ಭಾಗದಲ್ಲಿ 369 ಪುರುಷರು, 385 ಮಹಿಳೆಯರು ಸೇರಿ 754 ಮತದಾರರು. ಉತ್ತರ ಭಾಗದ ಮತಗಟ್ಟೆಯಲ್ಲಿ 440 ಪುರುಷರು, 434 ಮಹಿಳೆಯರು ಸೇರಿ 874 ಮತದಾರರಿದ್ದಾರೆ. ಎರಡೂ ಸೂಕ್ಷ್ಮ ಮತಗಟ್ಟೆಗಳು.

ವಾರ್ಡ್ 22: ಬಂಟ್ವಾಳ ಮೂಡ 22: ಸಾಮಾನ್ಯ ಮಹಿಳೆ

ಬಿ.ಮೂಡ ಪಲ್ಲಮಜಲು ಶಾಲೆಯ ಮತಗಟ್ಟೆಯನ್ನು ಹೊಂದಿರುವ ಈ ಮತಗಟ್ಟೆ ಅತೀಸೂಕ್ಷ್ಮ ಎಂದು ಪರಿಗಣಿಸಿದೆ. ಇಲ್ಲಿ 1346 ಮತದಾರರು. 699 ಮಹಿಳೆಯರು, 647 ಪುರುಷರು.

ವಾರ್ಡ್ 23: ಪಾಣೆಮಂಗಳೂರು 23: ಸಾಮಾನ್ಯ

ಪಾಣೆಮಂಗಳೂರು ಪೇಟೆ ದ.ಕ.ಜಿಪಂ ಹಿ.ಪ್ರಾ.ಶಾಲೆಯಲ್ಲಿ 606 ಪುರುಷರು, 637 ಮಹಿಳೆಯರು ಸೇರಿ 1243 ಮತದಾರರು ಇರುವ ಸೂಕ್ಷ್ಮ ಮತಗಟ್ಟೆ ಇದು.

ವಾರ್ಡ್ 24: ಪಾಣೆಮಂಗಳೂರು 24: ಸಾಮಾನ್ಯ

ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯಲ್ಲಿ 668 ಪುರುಷರು, 618 ಮಹಿಳೆಯರನ್ನು ಸೇರಿ 1286 ಮತದಾರರನ್ನು ಹೊಂದಿರುವ ಅತಿಸೂಕ್ಷ್ಮ ಮತಗಟ್ಟೆ ಇದೆ.

ವಾರ್ಡ್ 25: ಪಾಣೆಮಂಗಳೂರು 25: ಸಾಮಾನ್ಯ ಮಹಿಳೆ

ಬೋಳಂಗಡಿ ಹಿ.ಪ್ರಾ.ಶಾಲೆಯಲ್ಲಿ 626 ಪುರುಷರು, 625 ಮಹಿಳೆಯರನ್ನು ಹೊಂದಿರುವ 1251 ಮತದಾರರಿರುವ ಸೂಕ್ಷ್ಮ ಮತಗಟ್ಟೆ ಈ ವಾರ್ಡಿಗಿದೆ.

ವಾರ್ಡ್ 26: ಪಾಣೆಮಂಗಳೂರು 26: ಸಾಮಾನ್ಯ ಮಹಿಳೆ

ಬೋಳಂಗಡಿ ಶಾಲೆಯಲ್ಲಿ 671 ಪುರುಷರು ಮತ್ತು 671 ಮಹಿಳೆಯರು ಸೇರಿ 1342 ಮತದಾರರಿರುವ ಸೂಕ್ಷ್ಮ ಮತಗಟ್ಟೆ ವಾರ್ಡ್ 26ಕ್ಕಿದೆ.

ವಾರ್ಡ್ 27: ಪಾಣೆಮಂಗಳೂರು 27: ಪರಿಶಿಷ್ಟ ಪಂಗಡ

ಈ ವಾರ್ಡಿಗೆ ಬೊಂಡಾಲ ಹಿ.ಪ್ರಾ.ಶಾಲೆಯಲ್ಲಿ ಎರಡು ಮತಗಟ್ಟೆಗಳಿವೆ. ಒಂದರಲ್ಲಿ 352 ಪುರುಷರು, 353 ಮಹಿಳೆಯರು ಸೇರಿ 705 ಮತದಾರರು. ಇನ್ನೊಂದರಲ್ಲಿ 663 ಮತದಾರರು. ಅವರಲ್ಲಿ 330 ಪುರುಷರು, 333 ಮಹಿಳೆಯರು. ಎರಡೂ ಸೂಕ್ಷ್ಮ ಮತಗಟ್ಟೆಗಳು. ವಾರ್ಡಿನ ಒಟ್ಟು ಮತದಾರರ ಸಂಖ್ಯೆ 682 ಪುರುಷರು ಮತ್ತು 686 ಮಹಿಳೆಯರು ಸೇರಿ 1368.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ