ಮೂರ್ತೆದಾರರ ಸೇವಾ ಸಹಕಾರಿ ಸಂಘ ಶಂಭೂರು 2017-18 ರ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಮೊಗರ್ನಾಡುವಿನ ಸಂಘದ ವಠಾರದಲ್ಲಿ ಭಾನುವಾರ ನಡೆಯಿತು.
ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಸಂಘದ ಅಧಿಕಾರ ವ್ಯಾಪ್ತಿಯೂ ೯ ಗ್ರಾಮಗಳಿಗೆ ಒಳಪಟ್ಟಿದೆ. ಶೀಘ್ರದಲ್ಲಿ ಇತರ ಶಾಖೆಗಳನ್ನು ಆರಂಭಿಸುವ ಅಭಿಲಾಷೆ ಇದ್ದು ಎಲ್ಲರ ಸಹಕಾರ ನೀಡುವಂತೆ ಮನವಿ ಮಾಡಿದರು. ಹೊಸ ಶಾಖೆಗಳ ಆರಂಭದಿಂದ ಉದ್ಯೋಗವು ಸೃಷ್ಟಿಯಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ವಿಜಯ ಬ್ಯಾಂಕಿನ ನಿವೃತ್ತ ಶಾಖಾಧಿಕಾರಿ ಬೇಬಿ ಕುಂದರ್ ಮಾತನಾಡಿ ಮೂರ್ತೆದಾರಿಕೆ ವೃತ್ತಿಯೂ ಇಂದು ವಿರಳವಾಗುತ್ತಿದ್ದು ಮುಂದಿನ ತಲೆಮಾರಿಗೆ ತಿಳಿಸಿಕೊಡುವ ಪ್ರಯತ್ನ ಆಗಬೇಕಾಗಿದೆ. ಮೂರ್ತೆದಾರರ ಸಹಕಾರಿ ಸಂಘಗಳನ್ನು ತೆರಯುವ ಮೂಲಕ ಮೂತರ್ರ್‍ಅದಾರಿಕೆಗೆ ಪ್ರೋತ್ಸಾಹ ನೀಡಲು ಸಾಧ್ಯವಿದೆ. ಆದ್ದರಿಂದ ಸಮಾಜ ಬಾಂದವರ ಸಹಕಾರ ಅಗತ್ಯವಾಗಿ ಬೇಕಿದೆ ಎಂದರು.
ಬ್ಯಾಂಕಿನ ನಿರ್ದೇಶಕರಾದ ಗಣೇಶ್ ಪೆಲ್ತಿಮಾರ್, ಅಶೋಕ್ ಆರ್., ರಾಜೇಶ್ ಶೇಡಿಗುರಿ, ಮೋನಪ್ಪ ಪೂಜಾರಿ ಬೊಂಡಾಲ, ನಾರಾಯಣ ಪೂಜಾರಿ ಕೇದಿಗೆ, ಕೃಷ್ಣಪ್ಪ ಪೂಜಾರಿ ಬಾಳ್ತಿಲ ಹಾಜರಿದ್ದರು. ಉಪಾಧ್ಯಕ್ಷ ಮಾಧವ ಕೆ. ಕರ್ಬೆಟ್ಟು ಸ್ವಾಗತಿಸಿ, ಕಾರ್ಯದರ್ಶಿ ಯೋಗೀಶ್ ಅಮೀನ್ ಕಾಐಕ್ರಮ ನಿರೂಪಿಸಿ ವಂದಿಸಿದರು. ಸಿಬ್ಬಂದಿಗಳಾದ ಆಶಾ ಹಾಗೂ ಭವ್ಯ ನಿರೂಪಿಸಿದರು.