ಕಲ್ಲಡ್ಕದಲ್ಲಿ ಆಗಸ್ಟ್ 12ರಂದು ಹಿಂದು ಜಾಗರಣ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ ನಡೆಯಲಿದೆ.
ಈ ಸಂದರ್ಭ ಮಧ್ಯಾಹ್ನ 2.30ಕ್ಕೆ ವಾಹನ ಜಾಥಾ ವೀರಕಂಭ ಶಾರದಾ ಭಜನಾ ಮಂದಿರ, ಮಾಣಿಯ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ಮತ್ತು ಪಾಣೆಮಂಗಳೂರಿನ ಶ್ರೀ ಸತ್ಯದೇವತಾ ಗುಡಿಯ ಬಳಿಯಿಂದ ಏಕಕಾಲಕ್ಕೆ ಹೊರಡಲಿದೆ. ಬಳಿಕ ಸಂಜೆ ಕಲ್ಲಡ್ಕ ಶ್ರೀರಾಮ ಮಂದಿರ ಬಳಿ ಸಭಾ ಕಾರ್ಯಕ್ರಮ ನಡೆಯುವುದು. ಈ ಸಂದರ್ಭ ಆರೆಸ್ಸೆಸ್ ವಿಟ್ಲ ತಾಲೂಕು ಸಂಘಚಾಲಕ ವೆಂಕಟೇಶ ಅಮೈ ಅಧ್ಯಕ್ಷತೆ ವಹಿಸುವರು. ಚೈತ್ರಾ ಕುಂದಾಪುರ ದಿಕ್ಸೂಚಿ ಭಾಷಣ ಮಾಡುವರು. ನಿವೃತ್ತ ಸೈನಿಕ ಜನಾರ್ದನ ಮೂಲ್ಯ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…