ರಾಣಿ ಅಬ್ಬಕ್ಕನ ಚರಿತ್ರೆಯನ್ನು ಕಟ್ಟುವಾಗ ಆಕೆಗೆ ಅನ್ಯಾಯವಾಗಿದೆ ಎಂಬ ಭಾವನೆ ನನಗಿದೆ, ಆಕೆ ನಾಡಿನ ಸಂಸ್ಕೃತಿ, ಪ್ರತೀಕ, ನಮ್ಮ ಹೆಮ್ಮೆ ಎಂದು ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಹೇಳಿದರು.
ಸೋಮವಾರ ಸಂಜೆ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಹಾಗೂ ಅಲ್ಲಿರುವ ಆರ್ಟ್ ಗ್ಯಾಲರಿ, ಪ್ರಾಚೀನ ಬದುಕನ್ನು ತೆರೆದಿಡುವ ವಸ್ತುಸಂಗ್ರಹಾಲಯ, ಲೈಬ್ರರಿಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಜೊತೆ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಳುಬದುಕನ್ನು ಜನರಿಗೆ ತಿಳಿಸುವುದರ ಜೊತೆಗೆ ಭಾರತದಲ್ಲಿ ಮ್ಯೂಸಿಯಂ ಸಂಸ್ಕೃತಿಯನ್ನು ಉದ್ದೀಪನಗೊಳಿಸಿದ್ದಾರೆ ಎಂದು ಶ್ಲಾಘಿಸಿದರು.
ರಾಣಿ ಅಬ್ಬಕ್ಕ ಕುರಿತು ಚಲನಚಿತ್ರ ನಿರ್ಮಿಸುವ ಇಚ್ಛೆ ವ್ಯಕ್ತಪಡಿಸಿದ ಜಯಮಾಲಾ, ಇದೊಂದು ಐತಿಹಾಸಿಕ ಚಿತ್ರವಾಗಿದ್ದು, ಅಬ್ಬಕ್ಕನ ರೂಪದ ಕಲ್ಪನೆಗಿಂದ ಅಬ್ಬಕ್ಕನ ಶಕ್ತಿಯನ್ನು ಜನರಿಗೆ ತೋರಿಸುವ ಉದ್ದೇಶ ಇದರಲ್ಲಡಗಿದೆ ಸಿನಿಮಾವನ್ನು ಮಾಡುವುದು ನನ್ನ ಹೆಬ್ಬಯಕೆ ಎಂದು ಜಯಮಾಲಾ ಹೇಳಿದರು.
ಅಬ್ಬಕ್ಕ ಈತ ಪೊರ್ಲು ಇಜ್ಜಲಿಯೇ…
ಯಾನ್ ಮಲ್ಪುರೆ ಪಿದಡ್ದಿನ ಅಬ್ಬಕ್ಕನ ಸಿನೆಮಾದ ಮಾತ ಸಂಗತಿಲು ಮೂಲು ಚಿತ್ರದ ರೂಪಡು ಅನಾವರಣ ಅತ್ಂಡ್ ಹೀಗೆಂದು ಜಯಮಾಲ ವಿಶ್ಲೇಷಿಸಿದರು. ಅಬ್ಬಕ್ಕಳ ಪ್ರತಿಯೊಂದು ಭಾವಚಿತ್ರವನ್ನು ಆಸಕ್ತಿಯಿಂದ ವೀಕ್ಷಿಸಿ ಅದಕ್ಕೆ ಅವರೇ ವಿಶ್ಲೇಷಣೆ ನೀಡಿದರು. ತಮ್ಮ ಮೊಬೈಲ್ ನಲ್ಲಿ ತಾವೇ ಖುದ್ದು ಪೋಟೋ ವನ್ನು ಕ್ಲಿಕ್ಕಿಸಿಕೊಂಡ ಸಚಿವೆ ಜಯಮಾಲ ಅವರು ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿಯವರಿಂದ ಒಂದಷ್ಟು ಮಾಹಿತಿಯನ್ನು ಪಡೆದುಕೊಂಡರು. ತುಳುನಾಡಿನ ಪ್ರಾಚೀನ ವಸ್ತುಗಳನ್ನು ಅಷ್ಟೇ ಆಸಕ್ತಿಯಿಂದ ವೀಕ್ಷಿಸಿದ ಅವರು ಕೆಲ ವಸ್ತುಗಳ ಹಿಂದಿರುವ ಇತಿಹಾಸವನ್ನು ತಿಳಿದುಕೊಂಡರು. ಸಂಗ್ರಹಾಲಯದಲ್ಲ ಕಾಲ್ಪನಿಕವಾಗಿ ರೂಪಿಸಲಾಗಿದ್ದ ಹಿಂದಿನಕಾಲದಲ್ಲಿ ಹಳ್ಳಿಯಲ್ಲಿದ್ದ ಮುಳಿಹುಲ್ಲಿನ ಮನೆಯೊಳಗೆ ಪ್ರವೇಶಿಸಿದರಲ್ಲದೆ ಅಲ್ಲಿದ್ದ ಕೋಳಿಗೂಡು, ಜಂತುಗಳನ್ನು ಓಡಿಸುವ ಬಿದಿರಿನ ವಸ್ತುವನ್ನು ಕಂಡು ಖುಷಿಪಟ್ಟರು. ಹಾಗೆಯೇ ತುಳುನಾಡಿನಲ್ಲಿ ನಾಗಾರಾಧನೆಗೆ ವಿಶೇಷತೆ ಇರುವ ಹಿನ್ನಲೆಯಲ್ಲಿ ಇದರ ಪರಿಕಲ್ಪನೆಗಾಗಿ ಇರಿಸಲಾಗಿದ್ದ ನಾಗನಕಲ್ಲಿಗೂ ಸಚಿವೆ ಜಯಮಾಲ ಭಕ್ತಿಯಿಂದ ನಮಿಸಿ ಗಮನಸೆಳೆದರು. ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ, ಕೇಂದ್ರದ ರೂವಾರಿಗಳಾದ ಪ್ರೊ.ತುಕಾರಾಮ ಪೂಜಾರಿ, ಪ್ರೊ. ಆಶಾಲತಾ ಸುವರ್ಣ ಹಾಗೂ ಅವರ ಪುತ್ರಿ ಸಿಂಧೂರ ಗ್ಯಾಲರಿ ಕುರಿತು ವಿವರ ನೀಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ ಶೆಟ್ಟಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಪ್ರಮುಖರಾದ ಬೇಬಿ ಕುಂದರ್, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಪ್ರಮುಖರಾದ ಬೇಬಿ ಕುಂದರ್, ಸದಾಶಿವ ಬಂಗೇರ, ಲೋಕೇಶ ಸುವರ್ಣ, ಮಧುಸೂಧನ ಶೆಣೈ, ವೆಂಕಪ್ಪ ಪೂಜಾರಿ ಉಪಸ್ಥಿತರಿದ್ದರು.