ನರಿಕೊಂಬು ಮೊಗರ್ನಾಡುವಿನಲ್ಲಿ ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರದಲ್ಲಿ ನಡೆಯುವ ಯಕ್ಷಗಾತ ತರಬೇತಿ ತರಗತಿಯನ್ನು ಯಕ್ಷಗಾನ ಅಕಾಡಮಿ ಸದಸ್ಯ ಪುಷ್ಪರಾಜ ಜೋಗಿ ಉದ್ಘಾಟಿಸಿದರು.
ಅಕಾಡಮಿಯ ಆಶಯಕ್ಕೆ ಅನುಗುಣವಾಗಿ ಕೇಂದ್ರದ ಕಲಾ ಚಟುವಟಿಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದ ಅವರು, ಅಧ್ಯಯನದಿಂದ ಉತ್ತಮ ಕಲಾವಿದರು ಮೂಡಿಬರಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸರಕಾರಿ ಹಿರಿಯ ಆರೋಗ್ಯ ಪರಿವೀಕ್ಷಕರಾದ ಜಯರಾಮ ಪೂಜಾರಿ, ಮಾತನಾಡಿ ಓದಿನ ಮುಲಕ ಪುರಾಣ ಕಥೆಗಳ ಜ್ಞಾನವನ್ನು ಸಂಪಾದಿಸಿಕೊಂಡು ಯಕ್ಷಗಾನದಲ್ಲಿ ತೊಡಗಿ ಕೊಳ್ಳುವ ಮೂಲಕ ತಮ್ಮ ವ್ಯಕ್ತಿತ್ವ ವನ್ನು ಬೆಳೆಸಬಹುದು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಯಕ್ಷಗಾನದ ಹಿರಿಯ ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು ಮಾತನಾಡಿ,ಯಕ್ಷಗಾನದ ಶಾಸ್ತ್ರೀಯತೆಯ ಅಧ್ಯಯನ ದ ಬಳಿಕ ನಾವೀನ್ಯತೆ ಗೆ ಒತ್ತು ನೀಡಬೇಕು ಕಲಾಕೇಂದ್ರ ದ ನಿಸ್ವಾರ್ಥ ಪ್ರಯತ್ನವನ್ನು ಪೋಷಕರು ಗಮನಿಸಿ, ಸಹಕರಿಸಬೇಕು ಎಂದರು. ಈ ಸಂದರ್ಭ ಮಹಿಳಾ ಯಕ್ಷಗಾನ ತಾಳಮದ್ದಳೆಗೆ ಚಾಲನೆ ನೀಡಿದರು.
ಯಕ್ಷಗಾನ ಗುರುಗಳಾದ ಶ್ರೀವತ್ಸ ಭಟ್ ಶುಭ ಕೋರಿದರು. ಹಿರಿಯರಾದ ವೆಂಕಪ್ಪಯ್ಯ ಭಟ್, ಶ್ರೀನಿವಾಸ ಆರ್, ಕಲಾಕೇಂದ್ರದ ಅಧ್ಯಕ್ಷ ಕೃಷ್ಣರಾಜ ಭಟ್ ಕರ್ಬೆಟ್ಟು, ಕಾರ್ಯದರ್ಶಿ ಡಾ. ಸುಬ್ರಹ್ಮಣ್ಯ ಟಿ, ಪದಾಧಿಕಾರಿಗಳಾದ ಯತೀಶ ಶೆಟ್ಟಿ, ವೆಂಕಟೇಶ ರಾವ್, ವಾಸುದೇವ ಭಟ್ ಉಪಸ್ಥಿತರಿದ್ದರು. ಪ್ರತಿಭಾ ಕೆ.ಆರ್. ಭಟ್ ಸ್ವಾಗತಿಸಿದರು. ಪ್ರಮೀಳಾ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ರಶ್ಮಿ ರಾವ್ ವಂದಿಸಿದರು. ಪ್ರತಿಭಾ ಎಸ್. ಕಾರ್ಯಕ್ರಮ ನಿರೂಪಿಸಿದರು.