ಬಂಟ್ವಾಳ ಪುರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬುಧವಾರ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಸಭೆಯನ್ನು ಬಿ.ಸಿ.ರೋಡಿನ ಲಯನ್ಸ್ ಸಭಾಭವನದಲ್ಲಿ ನಡೆಸಿತು.
ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ನಡೆದ ಪುರಸಭೆ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರೈ, ಭೂ ಮಸೂದೆ, ನಿವೇಶನ ಇನ್ನಿತರ ಪ್ರಮುಖ ಕಾರ್ಯಕ್ರಮಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಯೋಜನವಾಗಿದೆ ಎಂದರು.
ನಗರೋತ್ಥಾನ ಯೋಜನೆಯಿಂದ ಹೆಚ್ಚುವರಿ ಅನುದಾನ ಬಂದಿದೆ ಎಂದು ಹೇಳಿದ ರೈ, ಪುರಸಭಾ ವ್ಯಾಪ್ತಿಯಲ್ಲಿ ಹಲವಾರು ಪ್ರಮುಖ ರಸ್ತೆಗಳಾದ ಮೆಲ್ಕಾರ್, ಮೊಡಂಕಾಪು , ಗೂಡಿನಬಳಿ, ಬಂಟ್ವಾಳ ಸೇತುವೆ, ಪಾಣೆಮಂಗಳೂರು ಸೇತುವೆ , ಪಲ್ಲಮಜಲು ರಸ್ತೆ , ಪರ್ಲಿಯಾ-ಶಾಂತಿಯಂಗಡಿ-ಎಂ.ಕೆ.ಟವರ್ ರಸ್ತೆ ಡಾಮರೀಕರಣಗೊಂಡಿದೆ. ಪುರಸಭೆಗೆ ಜೆಸಿಬಿ ಮತ್ತು ಟಿಪ್ಪರ್ ಒದಗಿಸಲಾಗಿದೆ. ಬಂಟ್ವಾಳ ಜಂಕ್ಷನ್ ನಲ್ಲಿ ಸುಸಜ್ಜಿತವಾದ ಸುಂದರವಾದ ಉದ್ಯಾನವನ ನಿರ್ಮಿಸಲಾಗಿದೆ. ಮೆಸ್ಕಾಂ, ಕೆಎಸಾರ್‍ಟಿಸಿ, ಮಿನಿ ವಿಧಾನಸೌಧ, ೫೨ ಕೋಟಿ ರೂ.ಯ ಕುಡಿಯುವ ನೀರಿನ ಯೋಜನೆ, ಪಂಜೆ ಮಂಗೇಶರಾಯರ ಸ್ಮಾರಕ ಭವನ, ಅಂಬೇಡ್ಕರ್ ಸಮುದಾಯ ಭವನ, ಸರಕಾರಿ ಆಸ್ಪತ್ರೆ ಕಟ್ಟಡ, ಪ್ರವಾಸಿ ಮಂದಿರ ಮತ್ತು ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಹಿಂದಿನ ಅವಧಿಯಲ್ಲಿ ನಿರ್‍ಮಾಣ ಹಾಗೂ ಚಾಲನೆ ನೀಡಲಾಗಿದೆ ಎಂದು ರೈ ಹೇಳಿದರು.
ಬೊಂಡಾಲ ಜಗನ್ನಾಥ ಶೆಟ್ಟಿ ಅವರು ಯುವ ನಾಯಕರಾಗಿ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಿ ಯುವಕರಿಗೆ ಪ್ರೇರಣೆಯಾಗಿದ್ದು ಪಕ್ಷಕ್ಕಾಗಿ ದುಡಿದವರು. ಅವರಿಗೂ ನುಡಿನಮನವನ್ನು ಸಲ್ಲಿಸುತ್ತಿದ್ದೇನೆ ಎಂದು ರೈ ಹೇಳಿದರು.
ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಎಂ.ಎಸ್.ಮಹಮ್ಮದ್, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಗೇರು ನಿಗಮ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ನಾಯಕ್, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಜಿಲ್ಲಾ ಉಪಾಧ್ಯಕ್ಷ ಬೇಬಿ ಕುಂದರ್, ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪುಜಾರಿ, ಬೂಡಾ ಅಧ್ಯಕ್ಷ ಸದಾಶಿವ ಬಂಗೇರಾ, ಬಂ.ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್, ತಾ.ಪಂ.ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಮಾಧವ ಮಾವೆ ಉಪಸ್ಥಿತರಿದ್ದರು. ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ ಸ್ವಾಗತಿಸಿದರು. ಗೇರು ನಿಗಮದ ಮಾಜಿ ಸದಸ್ಯ ಜಗದೀಶ ಕೊಯಿಲ ವಂದಿಸಿದರು. ಕೊಡಾಜೆ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.