ಸರಕಾರಿ ಶಾಲೆ ಉಳಿಸಿ ಆಂದೋಲನ ಹಾಗೂ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಹಾಗೂ ಶಿಕ್ಷಣ ಪ್ರೇಮಿ ಅನಿಲ್ ಶೆಟ್ಟಿ ಬೆಂಗಳೂರು ನೇತೃತ್ವದ ತಂಡ ಮಂಗಳವಾರ ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿತು.
ಮಧುಗಿರಿ ತಾಲೂಕಿನ ಕೋಡಿಗೆನೆ ಹಳ್ಳಿ, ಅಣ್ಣೇನಹಳ್ಳಿ, ಕಡಗತ್ತೂರು, ಯಾಕರ್ಲಾ ಹಳ್ಳಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ ಬಿದನೂರಿನ ಕರೇಕಲ್ಲ ಹಳ್ಳಿ, ಉಚ್ಚೋದನ ಹಳ್ಳಿ, ಗೊಟಕಣಾ ಪುರ, ಪಿಡಚಲಾ ಹಳ್ಳಿ ಸರಕಾರಿ ಶಾಲೆಗೆ ಭೇಟಿ ನೀಡಿ ಪೋಷಕರ ಸಭೆ ನಡೆಸಿ ಸರಕಾರಿ ಶಾಲೆ ಉಳಿಸುವ ಬಗ್ಗೆ ಚರ್ಚೆ ನಡೆಸಲಾಯಿತು.
ಈ ಸಂದರ್ಭ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್, ಸದಸ್ಯರಾದ ಪುರುಷೋತ್ತಮ ಅಂಚನ್, ರಾಮಚಂದ್ರ ಪೂಜಾರಿ ಕರೆಂಕಿ, ದೀಪಕ್ ಸಾಲ್ಯಾನ್, ಮಹೇಶ್ ಡೆಚ್ಚಾರು, ಅನಿಲ್ ಶೆಟ್ಟಿ, ಸ್ಥಳೀಯ ಶಿಕ್ಷಣ ಪ್ರೇಮಿ ಅಶೋಕ್ ಮತ್ತಿತರರು ಹಾಜರಿದ್ದರು.