ಮಕ್ಕಳಿಗೆ ಸಾಂಪ್ರದಾಯಿಕ ಕೃಷಿ ಬಗ್ಗೆ ಆಸಕ್ತಿ ಹೆಚ್ಚಿಸಲು ಪ್ರಾಥಮಿಕ ಮಟ್ಟದಲ್ಲಿಯೇ ಕೃಷಿ ಚಟುವಟಿಕೆಗಳ ಮೂಲಕ ತಿಳಿಯಪಡಿಸುತ್ತಿರಬೇಕು. ಈ ನಿಟ್ಟಿನಲ್ಲಿ ಕೆಸರ್‌ಡ್ ಒಂಜಿದಿನ ಕಾರ್ಯಕ್ರ ಕಲಿಕೆಯೊಂದಿಗೆ ಆಟಗಳನ್ನು ಆಡಿಸಿ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ವೀರಕಂಭ ಗ್ರಾಮದ ಪ್ರಗತಿಪರ ಕೃಷಿಕರಾದ ರಾಮದಾಸ ರೈ ನಡ್ವಾಲು ಹೇಳಿದರು.
ಯುವ ಪ್ರೆಂಡ್ಸ್ ನವರು ಮಜಿ ಶಾಲೆ, ಮಾತೃಶ್ರೀ ಗೆಳೆಯರ ಬಳಗ ಯುವಶಕ್ತಿ ಪ್ರೆಂಡ್, ಸ್ವಸ್ಥಿಕ್ ಪ್ರೆಂಡ್ಸ್, ಯುವ ಕೇಸರಿ ಪ್ರೆಂಡ್ಸ್, ಧ. ಗ್ರಾ. ಯೋಜನೆ ವೀರಕಂಭ ಒಕ್ಕೂಟ ಒಡಿಯೂರು ಗ್ರಾ.ವಿಕಾಸ ಯೋಜನೆ ಇವರ ಸಹಕಾರದೊಂದಿಗೆ ಆಯೋಜಿಸಿದ ಕೆಸರ್‌ಡ್ ಒಂಜಿದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ಗದ್ದೆಗೆ ಹಾಲೆರೆದು, ದೀಪಬೆಳಗಿಸಿ ಕಲ್ಪವೃಕ್ಷದ ಹೂವರಳಿಸಿ ಉದ್ಘಾಟಿಸಲಾಯಿತು.ಜಿ.ಪಂ. ಸದಸ್ಯೆ ಮಂಜುಳಾ ಮಾವೆ ಮಾತನಾಡಿ, ಬದಲಾವಣೆಗಳು ಬೇಕು ಆಧರೆ ಸಾಂಪ್ರದಾಯಿಕವಾದ ವಿಚಾರಗಳ ಮೇಲೆ ನಿಂತಿರಬೇಕು ಕಾಂಕ್ರೀಟಿಕರಣದಿಂದಾಗಿ ಭತ್ತದ ಕೃಷಿ ನಾಶವಾಗುತ್ತಿದೆ. ಅದರ ಆಸಕ್ತಿ ಬೆಳೆಸಿಕೊಳ್ಳಬೇಕು ವಾಣಿಜ್ಯ ಬೆಳೆಗಳಿಗೆ ಮಾರುಹೋದ ಜನಾಂಗ ಆಹಾರ ಬೆಳಗಳ ಬಗ್ಗೆಯೂ ಯೋಚಿಸಬೇಕು ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾರಾಯಣ ಗೌಡ ಪ್ರಾಸ್ತಾವಿಕ ಮಾತುಗಳಲ್ಲಿ ತಮ್ಮ ಬಾಲ್ಯದ ದಿನಗಳಲ್ಲಿ ನಡೆಯುತ್ತಿದ್ದ ಕೃಷಿ ಚಟುವಟಿಕೆಗಳ, ಇಂದಿನ ಬದಲಾವಣೆಗಳು ಆಹಾರ ಕ್ರಮಗಳು, ಹವ್ಯಾಸಗಳಲ್ಲಿ ಆಗುವ ಬದಲಾವಣೆ ಮತ್ತು ಎದುರಿಸುವ ತೊಂದರೆಯ ಕುರಿತು ತಿಳಿಸಿದರು. ಇಂದಿನ ಮಕ್ಕಳು ಮೊಬೈಲ್ ವಾಟ್ಸಪ್, ಫೇಸ್ಬುಕ್ ಗುಂಗಿನಲ್ಲಿ ಎಲ್ಲವನ್ನು ತೊರೆಯುತ್ತಿದ್ದಾರೆ ತಮ್ಮ ಮನೆಯಂಗಳದಲ್ಲಿ ಸಿಗುವ ಆಹಾರ ಔಷಧಿಗಳನ್ನು ಬಿಟ್ಟು ದೂರಸರಿಯುತ್ತಿದ್ದಾರೆ. ಮುಂದೊಂದು ದಿನ ಪಶ್ಚಾತ್ತಾಪ ಪಡಬೇಕಾದೀತು ಆದರೆ ಯುವ ಪ್ರೆಂಡ್ಸ್‌ನವರ ಇಂತಹ ಕಾರ್ಯಕ್ರಮಗಳಿಂದ ಸಮುದಾಯದ ಜನರಲ್ಲಿ ಸಂತೋಷದ ಜೊತೆಗೆ ಕೃಷಿ ಚಟಿವಟಿಕೆಗಳಲ್ಲಿ ಆಸಕ್ತಿಯೂ ಬೆಳೆಯುವುದು. ಈ ಸಂದರ್ಭದಲ್ಲಿ ಮಜಿ ಶಾಲಾ ವಿದ್ಯಾರ್ಥಿಗಳನ್ನು ಜೊತೆಗೆ ಸೇರಿಸಿ ಪ್ರಾಥಮಿಕ ಹಂತದಲ್ಲಿ ಆಸಕ್ತಿ ಬೆಳೆಸುವಲ್ಲಿ ಸಹಕರಿಸಿದ ಎಲ್ಲರನ್ನೂ ಶ್ಲಾಘಿಸಿದರು.
ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಭಾಗವಹಿಸಿ ಮಾತನಾಡಿ, ಕೃಷಿ ಚಟುವಟಿಕೆಗಳು ಪ್ರಗತಿಯನ್ನು ಸಾಧಿಸಿದರೆ ಸಮಾಜದ ಪ್ರಗತಿಯ ಸಾಧ್ಯವಾಗುತ್ತದೆ. ಸಾಂಪ್ರದಾಯಿಕವಾದ ಆಹಾರಕ್ರಮಗಳು ಇತರ ನಂಬಿಕೆಗಳ ಮೇಲೆ ವೈಜ್ಞಾನಿಕತೆಯು ನಿಂತಿದೆ. ಅವುಗಳ ಬುನಾದಿಯಿಂದಲೇ ಎಲ್ಲವೂ ಸಾದ್ಯವೆಂದು ಹೇಳಿದರು.
ಈ ಸಂದರ್ಭ ತಾ. ಪಂ ಸದಸ್ಯೆ ಗೀತಾ ಚಂದ್ರಶೇಖರ್ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ ಗ್ರಾಮ.ಪಂ. ಸದಸ್ಯರಾದ ರಾಮಚಂದ್ರ ಪ್ರಭು, ಜಯಂತಿ, ಯುವಶಕ್ತಿ ಪ್ರೆಂಡ್ಸ್ ಅಧ್ಯಕ್ಷ ಜಗದೀಶ್, ಮಾತೃಶ್ರೀ ಗೆಳೆಯರ ಬಳಗದ ದಿನೇಶ್, ಮಜಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ, ಎಸ್.ಡಿ.ಎಂ. ಅಧ್ಯಕ್ಷ ಸಂಜೀವ ಮೂಲ್ಯ, ಬಾಳ್ತಿಲ ಗ್ರಾಮ. ಪಂ ಅಧ್ಯಕ್ಷ ವಿಠಲನಾಯಕ್ ಜಿ.ಪಂ ಮಾಜಿ ಸದಸ್ಯರಾದ ಚೆನ್ನಪ್ಪ ಕೋಟ್ಯಾನ್ ತಾ.ಪಂ ಮಾಜಿ ಉಪಾಧ್ಯಕ್ಷ ದಿನೇಶ್ ಅಂಮ್ಟೂರು, ಸಂದೀಪ್ ಕುಮಾರ್ ಶೆಟ್ಟಿ ಅರೆಬೆಟ್ಟು, ಯವ ಪ್ರೆಂಡ್ಸ್ ಅಧ್ಯಕ್ಷ ಹರಿಪ್ರಸಾದ್, ಧ. ಗ್ರಾ.ಯೋ ಕಲ್ಲಡ್ಕ ವಲಯ ಮೇಲ್ವೀಚಾರಕಿ ನಳಿನಾಕ್ಷಿ ಧ.ಗ್ರಾ. ವೀ ಒಕ್ಕೂಟ ಅಧ್ಯಕ್ಷ ಕೊರಗಪ್ಪ ನಾಯ್ಕ ಚಂದ್ರಶೇಖರ ಬಂಗೇರಾ ಬಾಯಿಲ ಉಪಸ್ಥಿತರಿದ್ದರು.
ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತೆಪ್ಪಂಗಾಯಿ, ನಿಧಿಶೋಧನೆ, ಮೊಸರು ಕುಡಿಕೆ, ಓಟ, ಪಿರಮಿಡ್ಡ್, ಹಾಳೆಯಲ್ಲಿ ಎಳೆಯುವುದು ೫ ಕಾಲಿನ ಓಟ, ಹಗ್ಗ ಜಗ್ಗಾಟ, ಹಿಂಬದಿ ಓಟ, ಬಾಳೆಗಿಡ ಹತ್ತುವುದು, ಅಡಿಕೆ ಮರ ಹತ್ತುವುದು, ಮುಂತಾದ ವಿನೂತನ ಆಟಗಳ ಸ್ಪರ್ಧೆಗಳನ್ನು ನಡೆಸಿ ಆಟಿ ತಿಂಗಳಿನ ವಿವಿಧ ಖಾದ್ಯಗಳನ್ನು ತಯಾರಿಸಲಾಗಿತ್ತು. ಮಜಿ ಶಾಲಾ ಶಿಕ್ಷಕಿ ಶಕುಂತಲಾ ಪ್ರಾರ್ಥಿಸಿ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿದರು. ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.