ಬಂಟ್ವಾಳ

ಆಗಸ್ಟ್ 1ರಿಂದ ಸ್ವಚ್ಛ ಸರ್ವೇಕ್ಷಣಾ ರಥ ಸಂಚಾರ

ಬಂಟ್ವಾಳ ತಾಲೂಕಿನ 58 ಗ್ರಾಮ ಪಂಚಾಯತ್ ಗಳಿಗೆ ಆಗಸ್ಟ್ 1ರಿಂದ ಸ್ವಚ್ಛತಾ ರಥ ಸಂಚರಿಸಲಿದೆ.

ಬಂಟ್ವಾಳ ತಾಲೂಕು ಪಂಚಾಯತ್ ಕಚೇರಿಯಿಂದ ಬೆಳಗ್ಗೆ 10.30ಕ್ಕೆ ರಥಯಾತ್ರೆ ಆರಂಭಗೊಳ್ಳಲಿದ್ದು, ಸ್ವಚ್ಛತೆಯ ಅರಿವು ಮೂಡಿಸಲು ಈ ಕ್ರಮ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು  ಸ್ವಚ್ಛ ಭಾರತ್ ಮಿಷನ್ ( ಗ್ರಾ) ಯೋಜನೆಯಡಿ  ಗ್ರಾಮ ನೈರ್ಮಲ್ಯವನ್ನು  ಸುಧಾರಣೆ ಮಾಡುವ ನಿಟ್ಟಿನಲ್ಲಿ  ಗ್ರಾಮಗಳಲ್ಲಿರುವ ಸಾರ್ವಜನಿಕ ಶೌಚಾಲಯ,  ಸರ್ಕಾರಿ  ಶಾಲೆಗಳು , ಅಂಗನವಾಡಿಗಳು , ಸಂತೆ  ನಡೆಯುವ ಸ್ಥಳ, ಪ್ರಾಥಮಿಕ  ಆರೋಗ್ಯ ಕೇಂದ್ರ  , ಕುಡಿಯುವ ನೀರಿನ ಸ್ಥಳಗಳು ,ಪಂಚಾಯತ್ ಕಛೇರಿ , ಧಾರ್ಮಿಕ ಸ್ಥಳಗಳು, ಮುಖ್ಯ  ಬೀದಿಗಳು ಇತ್ಯಾದಿ  ಸ್ಥಳಗಳಲ್ಲಿ  ಶುಚಿತ್ವವನ್ನು ಕಾಪಾಡುವ ಮೂಲಕ ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ -2018 ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ಪ್ರಯುಕ್ತ  ರಥವು  ಬಂಟ್ವಾಳ ತಾಲೂಕು ಪಂಚಾಯತ್ ಕಛೇರಿಯಿಂದ ಪ್ರಾರಂಭಿಸಿ ಬಂಟ್ವಾಳ ತಾಲೂಕಿನ 58 ಗ್ರಾಮ ಪಂಚಾಯತ್ ಗಳಿಗೆ ಈ ರಥ ಸಂಚರಿಸಿ ಸ್ವಚ್ಛತೆಗೆ ಗ್ರಾಮದ  ಜನತೆಗೆ ಅರಿವು ಮೂಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ