ಕಂದಾಯ ಇಲಾಖೆಯಲ್ಲಿ 40 ವರ್ಷಗಳ ಕರ್ತವ್ಯ ನಿರ್ವಹಿಸಿ ಸೇವಾನಿವೃತ್ತಿ ಹೊಂದುತ್ತಿರುವ ಗ್ರಾಮಲೆಕ್ಕಿಗ ಅನಂತ ಪದ್ಮನಾಭ ಭಟ್ ಅವರ ಬೀಳ್ಕೊಡುಗೆ ಸಮಾರಂಭ ಮಂಗಳವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಡೆಯಿತು.
ಬಂಟ್ವಾಳ ತಹಶಿಲ್ದಾರ್ ಪುರಂದರ ಹೆಗ್ಡೆ ಸನ್ಮಾನಿಸಿ ಮಾತನಾಡಿ, ಎ.ಪಿ.ಭಟ್ ಅವರ ಸೇವೆಯನ್ನು ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಭಟ್, ಸೇವಾವಧಿಯಲ್ಲಿ ಸಹಕರಿಸಿದ ಸಿಬ್ಬಂದಿಯನ್ನು ಸ್ಮರಿಸಿಕೊಂಡರು. ಪ್ರಭಾರ ನೆಲೆಯಲ್ಲಿ ಹತ್ತು ಗ್ರಾಮಗಳನ್ನು ವಹಿಸಿಕೊಂಡು ಕೆಲಸ ನಿರ್ವಹಿಸುವ ಸವಾಲುಗಳನ್ನು ವಿವರಿಸಿದರು.
ಸಭೆಯಲ್ಲಿ ಪ್ರಭಾರ ಉಪತಹಶೀಲ್ದಾರ್ ಗ್ರೆಟ್ಟಾ ಮಸ್ಕರೇನ್ಹಸ್, ಆಹಾರ ಇಲಾಖೆಯ ಶಿರಸ್ತೇದಾರ್ ವಾಸು ಶೆಟ್ಟಿ, ವಿಟ್ಲ ನಾಡಕಚೇರಿಯ ಉಪತಹಶೀಲ್ದಾರ್ ರವಿಶಂಕರ್, ಚುನಾವಣಾ ಶಾಖೆಯ ಪ್ರಭಾರ ಉಪತಹಶೀಲ್ದಾರ್ ಸೀತಾರಾಮ್, ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ದಿವಾಕರ ಮುಗುಳ್ಯ, ನವೀನ್ ಬೆಂಜನಪದವು, ಗ್ರಾಮಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಜನಾರ್ದನ ಉಪಸ್ಥಿತರಿದ್ದರು. ಗ್ರಾಮಲೆಕ್ಕಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ತೌಫೀಕ್ ಸ್ವಾಗತಿಸಿದರು. ನವ್ಯಾ ರಾವ್ ಪ್ರಾರ್ಥಿಸಿದರು.