ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ, ಉಡುಪಿ ಜಿಲ್ಲೆಯ ಬಂಟ್ವಾಳ ವಲಯ ವತಿಯಿಂದ ಸ್ಥಾಪಿಸಲಾದ ಛಾಯಾಕ್ಷೇಮ ಚಾರಿಟೇಬಲ್ ಟ್ರಸ್ಟ್ ಅನ್ನು ಸೋಮವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು.
ಸಂಘದ ಮಹಾಸಭೆಯ ಸಂದರ್ಭ ನಡೆದ ಈ ಸಮಾರಂಭದಲ್ಲಿ ಮಾತನಾಡಿದ ಶಾಸಕ, ಛಾಯಾಗ್ರಾಹಕರು ಹಿಂದಿನ ನೆನಪುಗಳನ್ನು ಫೊಟೋಗಳ ಮೂಲಕ ಒದಗಿಸುವ ಅಪೂರ್ವ ವೃತ್ತಿಯನ್ನು ನಡೆಸುತ್ತಿದ್ದಾರೆ. ಹೊಸ ಅನ್ವೇಷಣೆಗಳು, ಸವಾಲುಗಳು ಇರುವ ಈ ದಿನಗಳಲ್ಲಿ ಛಾಯಾಗ್ರಾಹಕರ ವೃತ್ತಿಯೂ ಹಲವು ಸವಾಲುಗಳಿಂದ ಕೂಡಿವೆ. ಈ ಹಿನ್ನೆಲೆಯಲ್ಲಿ ತನ್ನ ಅವಧಿಯಲ್ಲಿ ಇತಿಮಿತಿಯೊಳಗೆ ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ನ ಬಂಟ್ವಾಳಕ್ಕೆ ಸಂಬಂಧಿಸಿ ಯಾವುದೇ ಬೇಡಿಕೆಗಳಿದ್ದರೂ ಅದಕ್ಕೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭ ಸಂಘದ ಸದಸ್ಯರಿಗೆ ಸ್ಮಾರ್ಟ್‌ಕಾರ್ಡ್‌ಗಳನ್ನು ಸಾಂಕೇತಿಕವಾಗಿ ಸುರತ್ಕಲ್ ನ ಮಾತಾ ಬಿಲ್ಡರ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ವಿತರಿಸಿದರು.
ಸಭಾಧ್ಯಕ್ಷತೆಯನ್ನು ಸಂಘದ ಬಂಟ್ವಾಳ ವಲಯಾಧ್ಯಕ್ಷ ಹರೀಶ್ ಮಾಣಿ ವಹಿಸಿದ್ದರು. ಎಪಿಎಂಸಿ ಸದಸ್ಯ ಪದ್ಮರಾಜ ಬಲ್ಲಾಳ್, ಎಸ್.ಕೆ.ಪಿ.ಎ. ದ.ಕ ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷ ವಿಲ್ಸನ್ ಗೋನ್ಸಾಲ್ವಿಸ್, ಎಸ್.ಕೆ.ಪಿ.ಎ. ಕೋ ಅಪರೇಟಿವ್ ಬ್ಯಾಂಕಿನ ಅಧ್ಯಕ್ಷ ವಾಸುದೇವ ರಾವ್, ಎಸ್.ಕೆ.ಪಿ.ಎ. ಸಲಹಾ ಸಮಿತಿ ಸಂಚಾಲಕ ವಿಠಲ ಚೌಟ, ಮಾಜಿ ಜಿಲ್ಲಾಧ್ಯಕ್ಷರುಗಳಾದ ಅಶೋಕ್ ಕುಮಾರ್ ಶೆಟ್ಟಿ, ಕರುಣಾಕರ ಕಾನಂಗಿ, ಗೋಪಾಲ ಸುಳ್ಯ, ಶಿವರಾಮ ಕಡಬ, ಜಗನ್ನಾಥ ಶೆಟ್ಟಿ, ಛಾಯಾಕ್ಷೇಮ ಸಂಚಾಲಕ ಆನಂದ್ ಎನ್, ಕಾರ್ಯದರ್ಶಿ ಸುಕುಮಾರ್ ಬಂಟ್ವಾಳ, ಕೋಶಾಧಿಕಾರಿ ಕುಮಾರಸ್ವಾಮಿ, ಉಪಾಧ್ಯಕ್ಷರಾದ ಕಿಶೋರ್ ಬಿ.ಸಿ.ರೋಡ್, ರವಿಪ್ರಕಾಶ್, ಜೊತೆ ಕಾರ್ಯದರ್ಶಿಗಳಾದ ಹರೀಶ್ ಕುಂದರ್, ಕಿಶೋರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾದ ರಾಜೇಂದ್ರ, ರಾಜರತ್ನ, ನಿರ್ದೇಶಕರಾದ ಟಿ.ಹರೀಶ್ ರಾವ್, ಜಯಂತ ಕುಮಾರ್, ಎಂ.ಸತೀಶ್ ಕುಮಾರ್, ರೋಷನ್ ಕಲ್ಲಡ್ಕ, ಕೆ.ಗೋಪಾಲಕೃಷ್ಣ ಮತ್ತು ಬಾಲಕೃಷ್ಣ ಉಪಸ್ಥಿತರಿದ್ದರು. ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ಶಾಸಕರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)