ಬಂಟ್ವಾಳ ತಾಲೂಕಿನಲ್ಲಿ ಇಡೀ ದಿನ ಮಳೆ ಸುರಿಯದಿದ್ದರೂ ಆಗಾಗ್ಗೆ ಗಾಳಿ ಮಳೆ ಸುರಿದು ಹಾನಿ ಸಂಭವಿಸಿದೆ. ಬಿ.ಮೂಡ ಗ್ರಾಮದ ಪೊಟ್ಟಕೋಡಿ ಎಂಬಲ್ಲಿ ಮನೆಯೊಂದಕ್ಕೆ ತೆಂಗಿನ ಮರ ಬಿದ್ದ ಘಟನೆ ಸೋಮವಾರ ಸಂಜೆ ನಡೆಯಿತು.
ಇಲ್ಲಿನ ಅಂತಪ್ಪ ಪೂಜಾರಿ ಅವರ ಪತ್ನಿ ರಾಧಾ ಎಂಬವರ ಮನೆಗೆ ತೆಂಗಿನ ಮರ ಬಿದ್ದಿದೆ. ಘಟನೆಯಿಂದ ಸುಮಾರು 50 ಸಾವಿರ ರೂ ನಷ್ಟ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ನಾಟೆಕಾರ್, ಪ್ರದೀಪ್, ಸಿಬ್ಬಂದಿ ಸದಾಶಿವ ಕೈಕಂಬ, ಪುರಸಭಾ ಸದಸ್ಯ ಸದಾಶಿವ ಬಂಗೇರ, ಸ್ಥಳೀಯರಾದ ಕೇಶವ ದೈಪಲ ಮೊದಲಾದವರು ಭೇಟಿ ನೀಡಿದರು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)