ಬಲು ಅಪರೂಪದ ದೊಡ್ಡಗಾತ್ರದ ಸೊಳ್ಳೆಯೊಂದು ತಾಲೂಕಿನ ತಲಪಾಡಿಯಲ್ಲಿ ಗುರುವಾರ ಕಂಡುಬಂದು ಅಚ್ಚರಿಗೆ ಕಾರಣವಾಯಿತು.
ಇಲ್ಲಿನ ನಿವಾಸಿ, ಛಾಯಾಗ್ರಾಹಕ ಮಹೇಶ್ ಶೆಟ್ಟಿ ಅವರ ಮನೆಯಲ್ಲಿ ಈ ಬೃಹತ್ ಗಾತ್ರದ ಸೊಳ್ಳೆ ಕಂಡು ಬಂದಿದ್ದು ಮನೆಮಂದಿಗೆ ಅಚ್ಚರಿ ಮೂಡಿಸಿದೆ. ಸಾಮಾನ್ಯ ಸೊಳ್ಳಗಿಂತ ನಾಲ್ಕುಪಟ್ಟು ದೊಡ್ಡದಿರುವ ಈ ಸೊಳ್ಳೆಯನ್ನು ಗಾಜಿನ ಶೀಸೆಯಲ್ಲಿ ಹಿಡಿದು ತಾಲೂಕು ಆರೋಗ್ಯ ಇಲಾಖೆಯ ಮೂಲಕ ಮಣಿಪಾಲದ ಸಂಶೋಧನ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.
ಟೋಕ್ಸೊರಿನ್‌ಚಿಟಿಸ್ Toxorhynchites ಎಂದು ಕರೆಯಲ್ಪಡುವ ಈ ಸೊಳ್ಳೆ ಮಾನವ ಸ್ನೇಹಿಯಾಗಿದ್ದು ಮನುಷ್ಯರಿಗೆ ಕಚ್ಚುವುದಿಲ್ಲ. ಇದರ ಲಾರ್ವಗಳು ದೊಡ್ಡದಾಗಿದ್ದು ಇದು ಸಾಮಾನ್ಯ ಜಾತಿಯ ಸೊಳ್ಳೆಯ ಲಾರ್ವಗಳನ್ನು ತಿಂದು ಅಥವಾ ಹೂವಿನ ಮಕರಂದವನ್ನು ಹೀರಿ ಬದುಕುತ್ತವೆ ಎಂದು ಮಣಿಪಾಲದ ಕೀಟತಜ್ಞರು ಅಭಿಪ್ರಾಯಪಟ್ಟಿದ್ದಾರೆ.