ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಚರಕ ವಿಜ್ಷಾನ ಸಂಘದ ವತಿಯಿಂದ ರಕ್ತದ ಗುಂಪುಗಳ ವರ್ಗೀಕರಣವು ನಡೆಯಿತು.
ಶ್ರೀರಾಮ ಪದವಿಪೂರ್ವ ವಿಭಾಗದ ಭಾಸ್ಕರಾಚಾರ್ಯ ವಿಜ್ಞಾನ ಸಂಘದ ಸಹಕಾರದೊಂದಿಗೆ ನೆರವೇರಿತು. ಪದವಿ ಪೂರ್ವ ವಿಭಾಗದ ಭಾಸ್ಕರಾಚಾರ್ಯ ವಿಜ್ಞಾನ ಸಂಘದ ಮಾರ್ಗದರ್ಶಕರಾಗಿ ಜೀವಶಾಸ್ತ್ರ ಉಪನ್ಯಾಸಕರಾದ ಶೈಲಿನಿ ಮತ್ತು ಚೈತ್ರಾ ಇವರು ಸಹಕರಿಸಿದರು. ಈ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ರಕ್ತದ ಗುಂಪಿನ ಅರಿವನ್ನು ಮೂಡಿಸಲಾಯಿತು.
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ರವಿರಾಜ್ ಕಣಂತೂರು, ಚರಕ ವಿಜ್ಞಾನ ಸಂಘದ ಮಾರ್ಗದರ್ಶಕರಾದ ಸಂತೋಷ್ ಶ್ರೀಮಾನ್ ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…