ಕಲ್ಲಡ್ಕ

ಮೂಢನಂಬಿಕೆ ಎನಿಸಿಕೊಳ್ಳುತ್ತಿರುವ ಹಿಂದಿನ ಜೀವನಶೈಲಿ: ರುಕ್ಮಯ ಪೂಜಾರಿ ವಿಷಾದ

ನಮ್ಮ ಹಿರಿಯರು ನಡೆದ ದಾರಿಯಲ್ಲಿ ಕಲ್ಮಶಗಳಿರಲಿಲ್ಲ. ಹಿಂದಿನ ಜೀವನಶೈಲಿ ಇಂದಿನ ವೈಜ್ಞಾನಿಕ ಯುಗದಲ್ಲಿ ಮೂಢನಂಬಿಕೆಗಳೆನಿಸುತ್ತಿವೆ ಎಂದು ಮಾಜಿ ಶಾಸಕ ಹಾಗೂ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಎ.ರುಕ್ಮಯ ಪೂಜಾರಿ ವಿಷಾದ ವ್ಯಕ್ತಪಡಿಸಿದರು.

ಜಾಹೀರಾತು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ, ಕಲ್ಲಡ್ಕ ವಲಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಜನಜಾಗೃತಿ ವೇದಿಕೆ ಸಹಕಾರದೊಂದಿಗೆ ಕಲ್ಲಡ್ಕದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟ ಪದಗ್ರಹಣ ಕಾರ್ಯಕ್ರ ವನ್ನು ಉದ್ಘಾಟಿಸಿ ಅವರು ಮಾತಾಡಿದರು.

ಹಿರಿಯರು ಜೀವನ ಶೈಲಿಯ ಜೊತೆಗೆ ಉಪಯೋಗದ ವಸ್ತುಗಳ ಮೂಲಕ  ಜೀವನದ ಪಾಠವನ್ನು ಕಲಿಸುತ್ತಿದರು. ವೈಜ್ಘಾನಿಕತೆಯ ಹೆಸರಿನಲ್ಲಿ ಅವುಗಳನ್ನು ಮೂಢನಂಬಿಕೆ ಎಂದು ಕರೆಯುವುದು ಬೇಸರದ ಸಂಗತಿಯಾಗಿದೆ. ಗ್ರಾಮೀಣ ಯೋಜನೆಗಳು ಸಮಾಜದಲ್ಲಿ ಉತ್ತಮ ಬದಲಾವಣೆಗಳನ್ನು ತಂದಿವೆ. ಮನೆ ಮನೆಗಳಲ್ಲಿ ಒಕ್ಕೂಟದ ಮೂಲಕ ಸತ್‌ಚಾರಿತ್ಯದ ದೀಪಗಳು ಬೆಳಗಲಿ ಎಂದು ಅವರು ಶುಭ ಹಾರೈಸಿದರು.

ಕಶೆಕೋಡಿಯ ಸೂರ್ಯನಾರಾಯಣ ಭಟ್‌  ಧಾರ್ಮಿಕ ಉಪನ್ಯಾಸ ನೀಡಿದರು. ಪಕ್ಷ ಭೇಧವಿಲ್ಲದೆ ಒಕ್ಕೂಟದ  ಮೂಲಕ ಒಗ್ಗಟ್ಟಾದರೆ ಪ್ರಗತಿ ಸಾಧ್ಯ ಎಂದರು.

ಜಾಹೀರಾತು

ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮಾತನಾಡಿ, ವೈಜ್ಞಾನಿಕತೆ ಬೆಳೆದಂತೆ ದುಶ್ಚಟಗಳ ರೀತಿಯೂ ಬದಲಾಗುತ್ತಿದೆ. ಪಾಲಕರು ಮಕ್ಕಳ ಬಗ್ಗೆ ನಿಗಾ ವಹಿಸಬೇಕು ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಒಕ್ಕೂಟ ಮುಂದೆಯೂ ಉತ್ತಮ ಕೆಲಸಗಳ ಮೂಲಕ ದೇಶಾದಾದ್ಯಂತ ಹೆಸರನ್ನು ಪಡೆಯಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ಜನ ಜಾಗೃತಿ ಬಂಟ್ವಾಳ ಅಧ್ಯಕ್ಷರಾಗಿರುವ ಪ್ರಕಾಶ್ ಕಾರಂತ್ ನರಿಕೊಂಬು ವಹಿಸಿದ್ದರು. ಸಮಾಜದಲ್ಲಿ ರಾಜಕೀಯ ಕಿತ್ತಾಟ ನೋಡಿ ಬೇಸತ್ತಿದ್ದ ಜನರಿಗೆ ಇಂತಹ ಶಿಸ್ತು ಬದ್ಧ ಕಾರ್ಯಕ್ರಮಗಳು ಜನರಲ್ಲಿ ಹೊಸಬದಲಾವಣೆಯ ಅಲೆಯನ್ನು ಮೂಡಿಸಲು ಸಾಧ್ಯವಾಗುತ್ತದೆ ಎಂದರು.

ಜಾಹೀರಾತು

ಕಾರ್ಯಕ್ರಮದಲ್ಲಿ ಶ್ರೀ.ದ.ಗ್ರಾ.ಯೋಜನೆ ಬಂಟ್ವಾಳ ಯೋಜನಧಿಕಾರಿ ಜಯನಂದ ಪಿ, ಉದ್ಯಮಿ ಸಂದೀಪ್ ಶೆಟ್ಟಿ ಅರೆಬೆಟ್ಟು, ಜನಜಾಗೃತಿ ಕಲ್ಲಡ್ಕ ವಲಯ ಸ ತಿ ಅಧ್ಯಕ್ಷ ಬಟ್ಯಪ್ಪ ಶೆಟ್ಟಿ, ಕಲ್ಲಡ್ಕ ವಲಯದ ವಿವಿಧ 11 ಒಕ್ಕೂಟದ ಅಧ್ಯಕ್ಷರುಗಳಾದ ಈಶ್ವರ ನಾಯ್ಕ, ಶಿವಪ್ಪ ಗೌಡ, ಸುಶೀಲ, ಕೊರಗಪ್ಪ ನಾಯ್ಕ ಸಿಗೇರಿ, ಚೆನ್ನಪ್ಪ ಪೂಜಾರಿ, ಜಾನಕಿ, ಜಗನ್ನಾಥ, ಹೇಮಲತ, ವಾಮನ ಮೂಲ್ಯ, ಸುನೀತ, ಶ್ರೀಮತಿ ಮತ್ತು ಶಶಿಕಲ ಉಪಸ್ಥಿತರಿದ್ದರು.

ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ಸೋಮಶೇಖರ ನೂತನ ಅಧ್ಯಕ್ಷ ವಾಮನ  ಮೂಲ್ಯ ಅವರಿಗೆ ವೀಳ್ಯ ಹಸ್ತಾಂತರಿಸಿ ಮುಂದಿನ ಜವಾಬ್ದಾರಿಗಳಿಗೆ ಶುಭ ಹಾರೈಸಿದರು.

ವಿಜಯಾ ಪ್ರಾರ್ಥಿಸಿದರು. ನಳಿನಾಕ್ಷಿ ಶೆಟ್ಟಿ ಸ್ವಾಗತಿಸಿದರು. ಮಾಲತಿ ವರದಿ ವಾಚಿಸಿದರು. ಲಕ್ಷ್ಮೀ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ