ಇರಾ ಗ್ರಾಮದ ಪರಪ್ಪಿನ ಎಸ್ಸೆಸ್ಸಫ್ ವತಿಯಿಂದ ತಿಂಗಳಿಗೊಮ್ಮೆ ಮಹಿಳಾ ಕ್ಲಾಸ್ ನಡೆಯುತ್ತಿದೆ. ಇದರಿಂದ ಧಾರ್ಮಿಕ ಹಾಗೂ ಪ್ರಸುತ್ತ ವಿಷಯಗಳ ಕುರಿತ ಮಾಹಿತಿ ಲಭ್ಯವಾಗುತ್ತದೆ. ಊರಿನ ಮಹಿಳೆಯರನ್ನು ಧಾರ್ಮಿಕ ಹಾಗೂ ಸಾಮಾಜಿಕವಾಗಿ ಅರಿವು ಮೂಡಿಸುವುದು ಇದರ ಉದ್ದೇಶ. ಇದೇ ನಿಟ್ಟಿನಲ್ಲಿ ಭಾನುವಾರದ ಮಹಿಳಾ ಕ್ಲಾಸ್ ರಾಸಾಯನಿಕ ರಹಿತ ಕೃಷಿಯ ಕುರಿತದ್ದಾಗಿತ್ತು.
ಈಗ ಹಲವಾರು ರೋಗ-ರುಜಿನಗಳಿಗೆ ಕಾರಣವಾದ ನಾವು ಬಳಸುವ ವಿಷಪೂರಿತ ರಾಸಾಯನಿಕ ಸಿಂಪಡಿಸುವ ತರಕಾರಿಗಳನ್ನು ಬಳಸದೆ ನಮಗೆ ಬೇಕಾದಷ್ಟು ನಮ್ಮ ಮನೆಯಲ್ಲಿ ಯಾವುದೇ ರಾಸಾಯನಿಕ ಬಳಸದೆ ಅರೊಗ್ಯಕಾರವಾದ ತರಕಾರಿಗಳನ್ನು ಹೇಗೆ ಬೆಳೆಯಬಹುದು ಅನ್ನುವ ಕುರಿತು ನಡೆದ ಸಂವಾದ ವಿಶಿಷ್ಠವಾಗಿತ್ತು
.ಈ ಸಂವಾದವನ್ನು ಪ್ರಗತಿಪರ ಕೃಷಿಕ ಅಬ್ದುಲ್ ಖಾದರ್ ಸಣ್ಣಬೈಲ್ ನಡೆಸಿಕೊಟ್ಟರು. ಕಾರ್ಯಕ್ರಮ ದಲ್ಲಿ ಪರಪ್ಪು ಜುಮಾ ಮಸೀದಿ ಉಸ್ತಾದರಾದ ಅಬ್ದುಲ್ ರಝಾಕ್ ಸಖಾಫಿ,ಹಮೀದ್ ಸಖಾಫಿ (ಸದರ್ ಪರಪ್ಪು) ಉಮ್ಮರ್ ಮದನಿ ಮುರ್ಕಂಙ ಎಸ್ಸಸ್ಸಫ್ ಪರಪ್ಪು ಅಧ್ಯಕ್ಷರಾದ ಅಶ್ರಫ್ ಎಸ್ಟೇಟ್ ಭಾಗವಹಿಸಿದರು.ಉತ್ಸಾಹದಿಂದ ಸಂವಾದ ಅಲಿಸಿದ ಮಹಿಳೆಯರು ಹಲವು ಕೃಷಿಯ ಬಗ್ಗೆ ಪ್ರಶ್ನೆಗಳನ್ನು ಕೇಳಿದರು ಕೊನೆಯಲ್ಲಿ ವಿವಿಧ ತಳಿಯ ತರಕಾರಿ ಬೀಜಗಳನ್ನು ನೀಡಿ ಕೃಷಿಗೆ ಮತ್ತಷ್ಟು ಉತ್ತೇಜನ ನೀಡಿದರು.
ವರದಿ: ಜಬ್ಬಾರ್ ಪರಪ್ಪು