ಪ್ರಮುಖ ಸುದ್ದಿಗಳು

ಅಗಲಿದ ರಾಜಕೀಯ ಮುತ್ಸದ್ದಿ ಬಿ.ಎ.ಮೊಯ್ದೀನ್, ಕಂಬನಿ ಮಿಡಿದ ಗಣ್ಯರು

ಮಾಜಿ ಸಚಿವ ಬಂಟ್ವಾಳ ತಾಲೂಕಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ರಾಜಕೀಯ ಮುತ್ಸದ್ದಿ ಬಿ.ಎ.ಮೊಯ್ದೀನ್ (81) ಇನ್ನಿಲ್ಲ. ಮಂಗಳವಾರ ಬೆಳಗ್ಗೆ ಬೆಂಗಳೂರಿನಲ್ಲಿ ಅವರು ನಿಧನರಾದರು. ಕಳೆದ ಕೆಲವು ಸಮಯಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು ಬಳಿಕ ಚೇತರಿಸಿಕೊಂಡಿದ್ದರು. ನಂತರ ಬೆಂಗಳೂರಿಗೆ ತೆರಳಿದ ಅವರು, ಮತ್ತೆ ಅನಾರೋಗ್ಯಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜಾಹೀರಾತು

1978ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದ ಅವರು, ಮುಂದೆ ಜನತಾ ದಳ ಸೇರಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಜೆ.ಎಚ್. ಪಟೇಲ್ ಸರಕಾರದಲ್ಲಿ ಸಣ್ಣ ಕೈಗಾರಿಕೆ ಮತ್ತು ನಂತರ ಉನ್ನತ ಶಿಕ್ಷಣ ಸಚಿವರಾಗಿದ್ದರು. ಜನತಾ ದಳ ವಿಭಜನೆಗೊಂಡಾಗ ತಟಸ್ಥರಾಗಿದ್ದ ಅವರು ಬಳಿಕ ಮತ್ತೆ ಕಾಂಗ್ರೆಸ್ ಸೇರಿದ್ದರು. ಅವರ ಆತ್ಮಕಥನ ‘ನನ್ನೊಳಗಿನ ನಾನು’ ಸಿದ್ಧಗೊಂಡಿದ್ದು, ಜು.21ರಂದು ಬಿಡುಗಡೆಗೊಳ್ಳಲಿದೆ. 2016 ರಲ್ಲಿ ರಾಜ್ಯ ಸರ್ಕಾರದ ದೇವರಾಜ ಅರಸು ಪ್ರಶಸ್ತಿಗೆ ಭಾಜನರಾಗಿದ್ದರು.

ಗಣ್ಯರ ಸಂತಾಪ:

ಅವರ ನಿಧನಕ್ಕೆ ಮುಖ್ಯಮಂತ್ರಿ ಎ.ಡಿ. ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ದೇವರಾಜ ಅರಸು ಅವರ ಒಡನಾಡಿಯಾಗಿದ್ದ ಮೊಹಿದೀನ್ ಅವರು, ನಂತರದ ವರ್ಷಗಳಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು ಎಂದು ಅವರು ನೆನಪಿಸಿದ್ದಾರೆ. ಮೊಹಿದೀನ್ ಅವರ ನಿಧನದಿಂದ ರಾಜ್ಯ ಒಬ್ಬ ಉತ್ತಮ ನಾಯಕನನ್ನು ಕಳೆದುಕೊಂಡಿದೆ. ಅವರ ನಿಧನದಿಂದ ವ್ಯಯಕ್ತಿಕವಾಗಿ ಬಹಳ ನೋವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಪ್ರಾರ್ಥಿಸಿದ್ದಾರೆ. ಒಡನಾಡಿಯಾಗಿದ್ದ ಮೊಯ್ದೀನ್ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಸಂದರ್ಭ ಸ್ಪೀಕರ್ ರಮೇಶ್ ಕುಮಾರ್ ಕಣ್ಣೀರಿಟ್ಟರು.

ರಮಾನಾಥ ರೈ ಸಂತಾಪ:

ಬಂಟ್ವಾಳದ ಮಾಜಿ ಶಾಸಕರು, ಉನ್ನತ ಶಿಕ್ಷಣ ಸಚಿವರು ಆಗಿದ್ದ ಬಿ.ಎ ಮೊಯ್ದೀನ್ ಅವರ ನಿಧನಕ್ಕೆ ಮಾಜಿ ಸಚಿವ ರಮಾನಾಥ ರೈ ಸಂತಾಪ ಸೂಚಿಸಿದ್ದಾರೆ. ವಿಶಾಲ ಮನೋಭಾವ ಸದ್ಗುಣ ವ್ಯಕ್ತಿತ್ವ ಹೊಂದಿದ್ದ ಬಿ.ಎ. ಮೊಯ್ದೀನ್ ಅವರು ಎಲ್ಲಾ ಜಾತಿ ಜನಾಂಗದವರೊಂದಿಗೆ ಉತ್ತಮ ಭಾಂದವ್ಯ ಹೊಂದಿರುವ ವೈಯುಕ್ತಿಕವಾಗಿ ನನಗೆ ಆತ್ಮೀಯವಾಗಿದ್ದು, ಅವರ ಅಗಲಿಕೆ ದುಃಖವನ್ನು ತಂದಿದೆ. ಸಾಮಾಜಿಕವಾಗಿ ಸರ್ವರನ್ನು ಪ್ರೀತಿಸಿದ ಸಮಾಜದ ಸಾಮಾಜಿಕ ಸಾಮರಸ್ಯದ ವಿಚಾರದಲ್ಲಿ ರಾಜೀ ಮಾಡಿಕೊಳ್ಳದ ಬಿ.ಎ ಮೋಯ್ದೀನ್ ರಾಜಕಾಣಿಯಾಗಿ ಸರ್ವರನ್ನು ಪ್ರೀತಿಸಿದವರು. ಕರ್ನಾಟಕ ಘನ ಸರ್ಕಾರಬಿ.ಎ ಮೋಯ್ದೀನ್ ಅವರಿಗೆ ಅವರ ಸಮಾಜ ಸೇವೆಯನ್ನು ಪರಿಗಣಿಸಿ ದಿ.ದೇವರಾಜು ಅರಸು ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ಅವರ ಸೇವೆಗೆ ಸಾಕ್ಷಿಯಾಗಿದೆ. ಅವರ ದಿವ್ಯ ಚೇತನಕ್ಕೆ ಭಾವಪೂರ್ಣ ಶ್ರದ್ದಾಂಜಲಿಯನ್ನು ಸೂಚಿಸುತ್ತೇನೆ ಹಾಗೂ ಅವರ ಕುಂಟುಬಕ್ಕೆ ದಃಖ ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ಹಾರೈಸುತ್ತೇನೆ ಎಂದು ರೈ ಸಂತಾಪ ಸೂಚಿಸಿದ್ದಾರೆ.

ಯು.ಟಿ.ಖಾದರ್ ಸಂತಾಪ:

ಉನ್ನತ ಶಿಕ್ಷಣ ಸಚಿವರಾಗಿದ್ದ ಬಿ.ಎ. ಮೊಯ್ದೀನ್ ನಿಧನಕ್ಕೆ ಸಚಿವ ಯು.ಟಿ.ಖಾದರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಮೊಯ್ದೀನ್ ನಿಧನಕ್ಕೆ ಜೆಡಿಎಸ್ ಮುಖಂಡ ಪಿ.ಎ.ರಹೀಂ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಬಂಟ್ವಾಳ ತಾಪಂ ಸಭೆ ಮೊಟಕು:

ತಾಲೂಕಿನಲ್ಲಿ ಶಾಸಕರಾಗಿ ಕರ್ತವ್ಯ ನಿರ್ವಹಿಸಿದ್ದ ಮಾಜಿ ಸಚಿವ ಬಿ.ಎ. ಮೊಯ್ದೀನ್ ನಿಧನ ಹಿನ್ನೆಲೆಯಲ್ಲಿ ಮಂಗಳವಾರ ಬಂಟ್ವಾಳ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಸಾಮಾನ್ಯ ಸಭೆಯ ಆರ್ಧಭಾಗದಷ್ಟು ಕಲಾಪ ಮುಗಿದ ಬಳಿಕ ಸಭೆಗಾಗಮಿಸಿದ  ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿ ಅವರ ಸಲಹೆಯಂತೆ  ಮಾಜಿ ಸಚಿವ  ಬಿ.ಎ.ಮೊಯ್ದೀನ್ ನಿಧನದ ಹಿನ್ನಲೆಯಲ್ಲಿ ಸಭೆಯನ್ನು ಮೊಟಕುಗೊಳಿಸಲಾಯಿತು.

ಮಂಗಳವಾರ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ನ ಸಾಮಾನ್ಯ ಸಭೆ ನಡೆದಿದ್ದು, ಕಾರ್ಯಸೂಚಿಯಂತೆ ತಾಪಂ ನ ಬಜೆಟ್ ಗೆ ಸಂಬಂಧಿಸಿ ಕ್ರಿಯಾಯೋಜನೆಗೆ ಸದಸ್ಯರಿಂದ ಅನುಮೋದನೆ ಸಹಿತ ಸುಮಾರು ಮುಕ್ಕಾಲಂಶದಷ್ಟು ಸಭಾ ಕಲಾಪವು ಮುಗಿದಿತ್ತು.  ಇಲಾಖಾವಾರು ಚರ್ಚೆ ಆರಂಭವಾಗಿ ಕಂದಾಯ ಇಲಾಖೆಗೆ ಸಂಬಂಧಿಸಿ ತಾಲೂಕಿನಲ್ಲಿ  ಪ್ರಾಕೃತಿಕ ವಿಕೋಪದಿಂದ ಉಂಟಾದ ನಷ್ಡದ ಕುರಿತು ಗಂಭೀರ ಚರ್ಚೆ ನಡೆಯುತಿತ್ತು. ಇದೇ ವೇಳೆ ಸಭೆಗಾಗಮಿಸಿದ ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿ ಮಾತನಾಡಿ, ಮಾಜಿ ಸಚಿವ ಬಿ.ಎ. ಮೊಯ್ದೀನ್ ನಿಧನರಾಗಿರುವ ಹಿನ್ನಲೆಯಲ್ಲಿ ಸಂತಾಪ ಸೂಚಕವಾಗಿ ಸಭೆಯನ್ನು ಮುಂದೂಡುವಂತೆ ಕೋರಿದರು. ಅವರು ಮಾಜಿ ಸಚಿವರಲ್ಲದೆ ಬಂಟ್ವಾಳ ಕ್ಷೇತ್ರದ ಶಾಸಕರು ಕೂಡ ಅದವರು, ಈ ಕ್ಷೇತ್ರದ ಅಭಿವೃದ್ದಿಯಲ್ಲಿ ಅವರ ಪಾತ್ರ ಅಪಾರವಿದೆ. ಮತ್ತು ಒಬ್ಬ ಹಿರಿಯ ರಾಜಕೀಯ ಧುರೀಣರಾಗಿದ್ದಾರೆ ಎಂದು ಸ್ಮರಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.