ಕಳೆದ ಜೂನ್ ತಿಂಗಳ 18 ರಂದು ಸುರಿದ ಭಾರೀ ಮಳೆಗೆ ಮುರಿದು ಬಿದ್ದಿದ್ದ ಬಂಟ್ವಾಳ ಪುರಸಭಾ ವ್ಯಾಪ್ತಿಯ 5ನೇ ವಾರ್ಡ್‌ನ ಬಡ್ಡಕಟ್ಟೆ-ಹೊಸಮಾರು ಸಂಪರ್ಕಿಸುವ ಕಿರು ಸೇತುವೆಗೆ ಪರ್ಯಾಯವಾಗಿ ಬಂಟ್ವಾಳ ಪುರಸಭೆ ತಾತ್ಕಾಲಿಕ ಸೇತುವೆ ನಿರ್ಮಿಸಿದೆ.
55 ಸಾವಿರ ರೂ ವೆಚ್ಚದಲ್ಲಿ 24 ಅಡಿ ಉದ್ದದ ಸೇತುವೆ ನಿರ್ಮಿಸಲಾಗಿದ್ದು, ತಾತ್ಕಾಲಿಕ ಕಿರು ಸೇತುವೆ ನಿರ್ಮಾಣದಿಂದ ಇದೇ ರಸ್ತೆಯನ್ನೇ ಅವಲಂಬಿಸಿದ್ದ ನೂರಾರು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಬೀಡಿ ಕಾರ್ಮಿಕರಿಗೆ ಅನುಕೂಲವಾಗಿತ್ತು. ಸೋಮವಾರ ಈ ಕಿರುಸೇತುವೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ನೀಡಲಾಯಿತು. ಸ್ಥಳೀಯ ಪುರಸಭಾ ಸದಸ್ಯ ಪ್ರವೀಣ್ ಬಿ., ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ, ಸ್ಥಳೀಯರಾದ ಜನಾರ್ಧನ ಕುಲಾಲ್, ಸೋಮಪ್ಪ ಪೂಜಾರಿ, ಪದ್ಮನಾಭ ಸಾಲಿಯಾನ್, ಬೇಬಿ ಹೊಸ್ಮಾರು, ಲೋಲಾಕ್ಷಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…